ಮೂವರು ಪಿಎಫ್‌ಐ ಸದಸ್ಯರಿಗೆ ಜಾಮೀನು; ಇಡಿ ‘ಕುದುರೆಯ ಮುಂದೆ ಬಂಡಿ ಇರಿಸಿದೆ’ ಎಂದ ದೆಹಲಿ ಹೈಕೋರ್ಟ್

Date:

Advertisements

ದೆಹಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ, ಹಾಗೆಯೇ 2022ರಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕರಿಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಜಾಮೀನು ಮಂಜೂರು ಮಾಡಿದೆ. ಜೊತೆಗೆ ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಬಗ್ಗೆ ಸಾಕ್ಷ್ಯ ಕೊರತೆ ಉಲ್ಲೇಖಿಸಿರುವ ದೆಹಲಿ ಹೈಕೋರ್ಟ್ ಇಡಿ ‘ಕುದುರೆಯ ಮುಂದೆ ಬಂಡಿ ಇರಿಸಿದೆ’ ಎಂದು ಹೇಳಿದೆ. (ತಪ್ಪು ಕ್ರಮದಲ್ಲಿ ಕೆಲಸ ಮಾಡುವುದು ಅಥವಾ ಕ್ರಮ ಪ್ರಕಾರವಾಗಿ ಕೆಲಸ ಮಾಡದಿರುವುದು)

2018-2020ರ ಅವಧಿಯಲ್ಲಿ ಪಿಎಫ್‌ಐನ ದೆಹಲಿ ರಾಜ್ಯಾಧ್ಯಕ್ಷರಾಗಿದ್ದ ಪರ್ವೇಜ್ ಅಹ್ಮದ್, 2017ರಿಂದ ಕಾರ್ಯದರ್ಶಿಯಾಗಿದ್ದ ಅಬ್ದುಲ್ ಮುಖೀತ್ ಮತ್ತು 2018ರಿಂದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೊಹಮ್ಮದ್ ಇಲ್ಯಾಸ್ ಅವರನ್ನು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ 2022ರಲ್ಲಿ ಬಂಧಿಸಲಾಗಿತ್ತು.

ಇದನ್ನು ಓದಿದ್ದೀರಾ? ಹಲ್ಲೆಗೈದು, ಬೆನ್ನಲ್ಲಿ ‘ಪಿಎಫ್‌ಐ’ ಎಂದು ಬರೆದ ಘಟನೆ; ಸೈನಿಕನ ನಾಟಕ ಬಯಲುಗೊಳಿಸಿದ ಕೇರಳ ಪೊಲೀಸರು

Advertisements

ಮೂವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ 2022ರ ಏಪ್ರಿಲ್‌ನಲ್ಲಿ ಎನ್‌ಐಎ ದೂರು ದಾಖಲಿಸಿತ್ತು. ಅದಾದ ಬಳಿಕ ಅದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಇಡಿ ದೂರು ದಾಖಲಿಸಿಕೊಂಡು ಸೆಪ್ಟೆಂಬರ್ 22ರಂದು ಬಂಧಿಸಿದೆ.

ಪಿಎಫ್‌ಐ ಕ್ರಿಮಿನಲ್ ಪಿತೂರಿಯ ಭಾಗವಾಗಿದೆ. ಪಿಎಫ್‌ಐ ಪದಾಧಿಕಾರಿಗಳು ದೇಶದೊಳಗೆ ಮತ್ತು ವಿದೇಶದಿಂದ ಅನುಮಾನಾಸ್ಪದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಮೂವರೂ ಕೂಡಾ ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 2009ರಿಂದ ಪಿಎಫ್‌ಐನ ಬ್ಯಾಂಕ್ ಖಾತೆಗಳಲ್ಲಿ 60 ಕೋಟಿ ರೂಪಾಯಿಗೂ ಹೆಚ್ಚು ಜಮಾ ಮಾಡಲಾಗಿದೆ. 32.03 ಕೋಟಿ ರೂಪಾಯಿಗಳನ್ನು ನಗದು ರೂಪದಲ್ಲಿ ಜಮೆ ಮಾಡಲಾಗಿದೆ ಎಂದು ಇಡಿ ಆರೋಪಿಸಿದೆ.

ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ “ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಾಥಮಿಕ ಸಾಕ್ಷ್ಯದ ಕೊರತೆಯಿದೆ” ಎಂದು ಒತ್ತಿ ಹೇಳಿದೆ. ಹಾಗೆಯೇ “ಸಂಗ್ರಹಿಸಿದ ಹಣವು ಅಪರಾಧದ ಆದಾಯವಲ್ಲ” ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಇದನ್ನು ಓದಿದ್ದೀರಾ? ನೇಹಾ ಹತ್ಯೆ ಪ್ರಕರಣ | ಕೆಎಫ್‍ಡಿ, ಪಿಎಫ್‍ಐ ಸಂಘಟನೆ ಜೊತೆ ಆರೋಪಿ ಸಂಪರ್ಕ ಇತ್ತೇ ಎಂಬುದು ತನಿಖೆಯಾಗಲಿ: ಆರ್.ಅಶೋಕ್

ನ್ಯಾಯಮೂರ್ತಿ ಜಸ್ಮೀತ್ ಸಿಂಗ್, “ದೂರುಗಳನ್ನು ಪರಿಶೀಲಿಸಿದಾಗ, ಯಾವುದೇ ನಿಗದಿತ ಅಪರಾಧ ಎಸಗಲಾಗಿದೆ ಎಂದು ಖಾತ್ರಿಪಡಿಸುವ ಪುರಾವೆಗಳಿಲ್ಲ. ಅರ್ಜಿದಾರರು (ಜಾಮೀನು ಅರ್ಜಿ) ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದು ದೆಹಲಿ ಗಲಭೆಯ ಮೂಲಕ ಅಂತ್ಯವಾಗಿದೆ” ಎಂದು ಹೇಳಿದ್ದಾರೆ.

“ಭವಿಷ್ಯದಲ್ಲಿ ಅಪರಾಧ ಮಾಡಲು ಕಾನೂನುಬಾಹಿರ ರೀತಿಯಲ್ಲಿ ಹಣವನ್ನು ಸಂಗ್ರಹಿಸುವುದು ಪಿಎಂಎಲ್‌ಎ ಅಡಿಯಲ್ಲಿ ಮನಿ ಲಾಂಡರಿಂಗ್ ಅಪರಾಧವಲ್ಲ. ಸಂಗ್ರಹಿಸಿರುವ ಹಣವು ಅಕ್ರಮ, ಅಪರಾಧದ ಆದಾಯವಲ್ಲ. ಅಪರಾಧ ಮಾಡಿ ಅದರಿಂದ ಹಣವನ್ನು ಸಂಗ್ರಹಿಸಿದರೆ ಮಾತ್ರ ಅದು ಅಕ್ರಮ ಹಣ ವರ್ಗಾವಣೆಯಾಗುತ್ತದೆ. ಇಡಿ ದಾಖಲಿಸಿರುವ ಈ ಪ್ರಕರಣವು ಕುದುರೆಗಿಂತ ಮುಂದೆ ಬಂಡಿ ಇರಿಸಿದಂತಿದೆ” ಎಂದು ಕೋರ್ಟ್ ಟೀಕಿಸಿದೆ.

ಇದನ್ನು ಓದಿದ್ದೀರಾ? ಆರ್‌ಎಸ್‌ಎಸ್‌ ಬ್ಯಾನ್‌ ಮಾಡಿ ಅಥವಾ ಭಯೋತ್ಪಾದಕ ಸಂಘಟನೆ ಅಂತ ಹೆಸರಿಡಿ: ಕೆನಡಾ ಆಗ್ರಹಕ್ಕೆ ಕಾರಣವೇನು?

ಹಾಗೆಯೇ, “ಇಂತಹ ವಿಶೇಷ ಕಾನೂನುಗಳು ಜಾಮೀನು ಮಂಜೂರು ಮಾಡಲು ಕಠಿಣ ಷರತ್ತುಗಳನ್ನು ಹೊಂದಿವೆ. ಆದರೆ ವಿಚಾರಣೆಯನ್ನೇ ಮಾಡದೆ ಆರೋಪಿಗಳನ್ನು ಬಂಧನದಲ್ಲಿಡಲು ಈ ಕಾನೂನುಗಳು ಸಾಧನವಾಗಬಾರದು. ಈ ಕಾನೂನು ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸುವ (ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಶಿಕ್ಷೆಯಾಗಬಾರದು” ಎಂದು ಹೈಕೋರ್ಟ್ ಅಭಿಪ್ರಾಯಿಸಿದೆ.

“ಪ್ರಸ್ತುತ ಪ್ರಕರಣದಲ್ಲಿ ಪಿಎಂಎಲ್‌ಎಯ ಸೆಕ್ಷನ್ 45ರ ಅಡಿಯಲ್ಲಿ ಅವಳಿ ಷರತ್ತುಗಳನ್ನು ಪೂರೈಕೆಯಾಗುವುದಿಲ್ಲ. ಅಕ್ರಮ ಹಣ ವರ್ಗಾವಣೆ ಮಾಡಲಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಿಸುತ್ತದೆ” ಎಂದು ಆದೇಶ ನೀಡಿ ಮೂವರಿಗೂ ಜಾಮೀನು ಮಂಜೂರು ಮಾಡಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X