ಹಲ್ಲೆಗೈದು, ಬೆನ್ನಲ್ಲಿ ‘ಪಿಎಫ್‌ಐ’ ಎಂದು ಬರೆದ ಘಟನೆ; ಸೈನಿಕನ ನಾಟಕ ಬಯಲುಗೊಳಿಸಿದ ಕೇರಳ ಪೊಲೀಸರು

Date:

  • ‘ಪ್ರಚಾರ ಪಡೆಯುವ ಹಿನ್ನೆಲೆಯಲ್ಲಿ ಈ ನಾಟಕವಾಡಿದ್ದಾನೆ’ ಎಂದು ಬಾಯ್ಬಿಟ್ಟ ಯೋಧನ ಸ್ನೇಹಿತ
  • ‘ಪಿಎಫ್‌ಐ’ ಎಂದು ಬರೆಯಲು ಬಳಸಿದ್ದ ಪೈಂಟ್ ಹಾಗೂ ಬ್ರಶ್ ವಶಕ್ಕೆ ಪಡೆದ ಪೊಲೀಸರು

ರಜೆಯಲ್ಲಿ ಊರಿಗೆ ಬಂದಿದ್ದ ಸೈನಿಕನೋರ್ವನ ಮೇಲೆ ಆರು ಮಂದಿಯ ಗುಂಪು ಹಲ್ಲೆ ನಡೆಸಿ, ಬೆನ್ನಲ್ಲಿ ಹಸಿರು ಬಣ್ಣದಲ್ಲಿ ‘ಪಿಎಫ್ಐ’ ಎಂದು ಬರೆದ ಘಟನೆಯನ್ನು ಭೇದಿಸಿರುವ ಕೇರಳ ಪೊಲೀಸರು, ಎಲ್ಲವೂ ಸುಳ್ಳು, ಬರೀ ನಾಟಕ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಘಟನೆಯ ಸಂಬಂಧ ಸುಳ್ಳು ದೂರು ನೀಡಿ, ಸಮಾಜದಲ್ಲಿ ಗಲಭೆಗೆ ಪ್ರಚೋದನೆ ನೀಡಿದ್ದಲ್ಲದೇ ಅಧಿಕಾರಿಗಳನ್ನು ದಾರಿ ತಪ್ಪಿಸಿದ ಯೋಧ ಶೈನ್ ಕುಮಾರ್ ಮತ್ತು ಆತನ ಸ್ನೇಹಿತ ಜೋಶಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಬೆನ್ನಿನ ಮೇಲೆ ಪಿಎಫ್‌ಐ ಎಂದು ಬರೆಯಲು ಬಳಸಿದ ಹಸಿರು ಬಣ್ಣದ ಪೈಂಟ್‌ನ ಡಬ್ಬ ಮತ್ತು ಬ್ರಶ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆಯ ಬಗ್ಗೆ ನೀಡಿದ ಕೆಲವು ಹೇಳಿಕೆಗಳಿಂದ ಅನುಮಾನಗೊಂಡ ಪೊಲೀಸರು, ಯೋಧನ ಸ್ನೇಹಿತ ಜೋಶಿಯನ್ನು ವಿಚಾರಣೆಗೊಳಪಡಿಸಿದಾಗ ಎಲ್ಲವೂ ನಾಟಕ ಎಂದು ಬಯಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಫೇಮಸ್ ಆಗಬೇಕೆಂಬ ಯೋಧ ಶೈನ್ ಕುಮಾರ್ ಅವರ ಆಸೆಗಾಗಿ ಈ ರೀತಿಯ ನಾಟಕವಾಡಿದ್ದಾನೆ” ಎಂದು ತಿಳಿಸಿರುವ ಕೇರಳ ಪೊಲೀಸರು, ಯೋಧನ ಸ್ನೇಹಿತ ಜೋಶಿ ನೀಡಿರುವ ವಿಡಿಯೋ ಹೇಳಿಕೆಯನ್ನು ದಾಖಲಿಸಿದ್ದಾರೆ.

ಶೈನ್ ಕುಮಾರ್ ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಹಾಗೂ ಮೆಕಾನಿಕಲ್ ಇಂಜಿನಿಯರ್ಸ್ ಕಾರ್ಪ್ಸ್ ನಲ್ಲಿ ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಜೆಯಲ್ಲಿ ಊರಿಗೆ ಬಂದಿದ್ದರು. ರಜೆ ಮುಗಿಸಿ ಹಿಂದಿರುಗುವ ಮುನ್ನಾದಿನದಂದು ಈ ಘಟನೆ ನಡೆದಿದೆ.

ಪೊಲೀಸರು ವಿಚಾರಣೆ ನಡೆಸಿದಾಗ ಯೋಧ ಶೈನ್ ಕುಮಾರ್ ಅವರು ತನ್ನ ಹೇಳಿಕೆ ಸತ್ಯವೆಂದೇ ವಾದಿಸುತ್ತಿದ್ದರು.ಆದರೆ ಆತನ ಸ್ನೇಹಿತ ಜೋಶಿ ಸತ್ಯವನ್ನು ಬಹಿರಂಗಪಡಿಸಿದ ನಂತರ ಎಲ್ಲವೂ ನಾಟಕ ಎಂದು ಬಯಲಾಗಿದೆ.

ಏನಿದು ಘಟನೆ?
ಭಾರತೀಯ ಸೇನೆಯ ಯೋಧನಾಗಿರುವ ಶೈನ್‌ ಕುಮಾರ್ ಮೇಲೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಅಪರಿಚಿತರಿಂದ ದಾಳಿ ನಡೆದಿದ್ದು, ಸೈನಿಕನ ಬೆನ್ನ ಮೇಲೆ ಪಿಎಫ್‌ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಎಂದು ಬರೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದರು.

ಪೊಲೀಸ್‌ ಠಾಣೆಗೆ ನೀಡಿದ್ದ ದೂರಿನಲ್ಲಿ, “ತಮ್ಮ ನಿವಾಸದ ಬಳಿ ಇರುವ ರಬ್ಬರ್‌ ಫಾರೆಸ್ಟ್‌ನಲ್ಲಿ ಆರು ಜನರ ಗುಂಪೊಂದು ಭಾನುವಾರ ರಾತ್ರಿ ನನ್ನ ಮೇಲೆ ಏಕಾಏಕಿ ದಾಳಿ ನಡೆಸಿದೆ. ದುಷ್ಕರ್ಮಿಗಳು ತಮ್ಮ ಎರಡು ಕೈಗಳನ್ನು ಟೇಪ್‌ನಿಂದ ಕಟ್ಟಿ ನನ್ನ ಬೆನ್ನ ಹಿಂದೆ ಹಸಿರು ಬಣ್ಣದಲ್ಲಿ ಪಿಎಫ್‌ಐ ಎಂದು ಬರೆದರು” ಎಂದು ಯೋಧ ವಿವರಿಸಿದ್ದರು.

ಇದು ಸುದ್ದಿಯಾದ ಬೆನ್ನಲ್ಲೇ ಪೊಲೀಸರು ಸಹಿತ ಸೇನಾ ಗುಪ್ತಚರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಕೈಗೊಂಡು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ಆದರೆ, ಪ್ರಕರಣದ ಗಂಭೀರತೆಯನ್ನುಅರಿತು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿದ ಪೊಲೀಸರಿಗೆ ಯೋಧನ ದೂರಿನಲ್ಲಿ ಮತ್ತು ಹೇಳಿಕೆಯಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದವು. ಪೊಲೀಸರು ವಿಸ್ತ್ರತವಾದ ತನಿಖೆ ನಡೆಸಿದರು. ನಂತರದ ತನಿಖೆಯಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಸಿದ ನಾಟಕ ಎನ್ನುವುದು ಬಯಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಗನಯಾತ್ರಿ ಪ್ರಶಾಂತ್ ನಾಯರ್ ನನ್ನ ಪತಿ: ಮದುವೆಯ ಗುಟ್ಟು ಬಿಟ್ಟುಕೊಟ್ಟ ಮಲಯಾಳಂ ನಟಿ ಲೀನಾ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಗಗನಯಾನ್‌ನ ಭಾಗವಾಗಿ ಕಕ್ಷೆಗೆ ಹಾರುವ ನಾಲ್ಕು...

ಲೋಕಪಾಲ್‌ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇಮಕ

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅಜಯ್ ಮಾಣಿಕ್‌ ರಾವ್ ಖಾನ್ವಿಲ್ಕರ್ ಅವರನ್ನು...

ಉತ್ತರ ಪ್ರದೇಶ | ದೇಶದ ಹಿರಿಯ ಎಸ್‌ಪಿ ಸಂಸದ ಶಫೀಕುರ್ ರೆಹಮಾನ್ ಬರ್ಕ್ ನಿಧನ

ದೇಶದ ಹಿರಿಯ ಸಂಸದರಾಗಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಶಫೀಕುರ್...

ಬಾಬಾ ರಾಮ್‌ದೇವ್‌ ಮಾಲೀಕತ್ವದ ಪತಂಜಲಿಯ ಜಾಹೀರಾತಿಗೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆಯೇ? ಸುಪ್ರೀಂ ಕೋರ್ಟ್‌ ಗರಂ ಸುಪ್ರೀಂ...