ಕಳೆದ ಒಂದು ವಾರದಲ್ಲಿ ‘ಘೀಬ್ಲಿ ಟ್ರೆಂಡ್’ನ ಆ್ಯನಿಮೇಟೆಡ್ ಚಿತ್ರಗಳು ಸಾಮಾಜಿಕ ಜಾಲತಾಣಗಳನ್ನು ತುಂಬಿಕೊಂಡಿವೆ. ನೆಟ್ಟಿಗರು ತಮ್ಮ ಚಿತ್ರಗಳನ್ನು ‘ಘೀಬ್ಲಿ ಟ್ರೆಂಡ್’ನ ಆ್ಯನಿಮೇಟೆಡ್ ಚಿತ್ರವಾಗಿ ಮಾರ್ಪಡಿಸಿಕೊಂಡು, ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ‘ಘೀಬ್ಲಿ ಟ್ರೆಂಡ್’ನ ಆ್ಯನಿಮೇಟೆಡ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿವೆ. ಉಳಿದವರನ್ನು ಬಳಸುವಂತೆ ಪ್ರೇರೇಪಿಸುತ್ತಿವೆ.
ಆರಂಭದಲ್ಲಿ ಐಟಿ ತಂತ್ರಜ್ಞಾನದಲ್ಲಿ ಗಮನ ಸೆಳೆದಿದ್ದ ‘ಚಾಟ್‌ಜಿಪಿಟಿ‘ಯಲ್ಲಿ ಹೊಸದಾಗಿ ‘ಘೀಬ್ಲಿ ಟ್ರೆಂಡ್’ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಬಳಸಿ ತಮ್ಮ ಚಿತ್ರಗಳನ್ನು ಆ್ಯನಿಮೇಟೆಡ್ ಚಿತ್ರಗಳಾಗಿ ಕೆಲವೇ ಸೆಕೆಂಡುಗಳಲ್ಲಿ ಮಾರ್ಪಡಿಸಬಹುದಾಗಿದೆ. ಈ ‘ಘೀಬ್ಲಿ ಟ್ರೆಂಡ್’ನ ಅಬ್ಬರ-ಹಾವಳಿಯ ನಡುವೆ ಗೋವಾ ಪೊಲೀಸರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ‘ಘೀಬ್ಲಿ ಟ್ರೆಂಡ್’ ಬಳಸುವ ಬಗ್ಗೆ ಎಚ್ಚರಿಕೆ ಇರಲಿ ಎಂದು ಮನವಿ ಮಾಡಿದ್ದಾರೆ.
ಗೋವಾ ಪೊಲೀಸರ ಎಚ್ಚರಿಕೆ ಸಂದೇಶ ಹೀಗಿದೆ: “ನಿಮ್ಮ (ಸಾರ್ವಜನಿಕರು) ಫೋಟೊಗಳನ್ನು ‘ಘೀಬ್ಲಿ ಟ್ರೆಂಡ್’ ಆ್ಯನಿಮೇಟೆಡ್ ಚಿತ್ರಗಳನ್ನಾಗಿ ಬದಲಾಯಿಸುವ ಮುನ್ನ ಎಚ್ಚರಿಕೆ ಇರಲಿ. ಇದು ಮನರಂಜನೆಯ ಭಾಗವಾಗಿರಬಹುದು. ಆದರೆ, ನಿಮ್ಮ ವೈಯಕ್ತಿಕ ಚಿತ್ರಗಳನ್ನು ನಿರ್ದಿಷ್ಟ ಆ್ಯಪ್‌ಗಳಲ್ಲಿ ಅಪ್‌ಲೋಡ್ ಮಾಡಿದಾಗ ನಿಮ್ಮ ಫೋಟೊಗಳು ಸೈಬರ್ ವಂಚಕರ ದುರುಪಯೋಗಕ್ಕೆ ಒಳಗಾಗಬಹುದು” ಎಂದಿದ್ದಾರೆ.
Joining the AI-generated Ghibli trend is fun, but not all AI apps protect your privacy!
— Goa Police (@Goa_Police) April 1, 2025
Ghibli art is loved for its dreamy charm, but always think before uploading personal photos and use only trusted AI Apps to generate one.
Report cybercrime at 📞1930 or… pic.twitter.com/Z6QLUwUzs1
“ನಿಮ್ಮ ಫೋಟೊಗಳು ವಂಚಕರ ಕೈಸೇರಿದ್ದು, ದುರುಪಯೋಗ ಅಥವಾ ವಂಚನೆಯಾಗುತ್ತಿದ್ದಲ್ಲಿ, ತಕ್ಷಣವೇ 1930ಗೆ ಕರೆ ಮಾಡಿ ಮಾಹಿತಿ ನೀಡಿ” ಎಂದು ಗೋವಾ ಪೊಲೀಸರು ಮನವಿ ಮಾಡಿದ್ದಾರೆ.