‘ಘೀಬ್ಲಿ ಟ್ರೆಂಡ್‌’ ಬಳಸುವ ಮುನ್ನ ಎಚ್ಚರ; ಪೊಲೀಸರು ಕೊಟ್ಟ ಸಂದೇಶವಿದು – ಓದಿ…

Date:

ಕಳೆದ ಒಂದು ವಾರದಲ್ಲಿ ‘ಘೀಬ್ಲಿ ಟ್ರೆಂಡ್‌’ನ ಆ್ಯನಿಮೇಟೆಡ್ ಚಿತ್ರಗಳು ಸಾಮಾಜಿಕ ಜಾಲತಾಣಗಳನ್ನು ತುಂಬಿಕೊಂಡಿವೆ. ನೆಟ್ಟಿಗರು ತಮ್ಮ ಚಿತ್ರಗಳನ್ನು ‘ಘೀಬ್ಲಿ ಟ್ರೆಂಡ್‌’ನ ಆ್ಯನಿಮೇಟೆಡ್ ಚಿತ್ರವಾಗಿ ಮಾರ್ಪಡಿಸಿಕೊಂಡು, ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ‘ಘೀಬ್ಲಿ ಟ್ರೆಂಡ್‌’ನ ಆ್ಯನಿಮೇಟೆಡ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗುತ್ತಿವೆ. ಉಳಿದವರನ್ನು ಬಳಸುವಂತೆ ಪ್ರೇರೇಪಿಸುತ್ತಿವೆ.

- Advertisement -

ಆರಂಭದಲ್ಲಿ ಐಟಿ ತಂತ್ರಜ್ಞಾನದಲ್ಲಿ ಗಮನ ಸೆಳೆದಿದ್ದ ‘ಚಾಟ್‌ಜಿಪಿಟಿ‘ಯಲ್ಲಿ ಹೊಸದಾಗಿ ‘ಘೀಬ್ಲಿ ಟ್ರೆಂಡ್‌’ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಬಳಸಿ ತಮ್ಮ ಚಿತ್ರಗಳನ್ನು ಆ್ಯನಿಮೇಟೆಡ್‌ ಚಿತ್ರಗಳಾಗಿ ಕೆಲವೇ ಸೆಕೆಂಡುಗಳಲ್ಲಿ ಮಾರ್ಪಡಿಸಬಹುದಾಗಿದೆ. ಈ ‘ಘೀಬ್ಲಿ ಟ್ರೆಂಡ್‌’ನ ಅಬ್ಬರ-ಹಾವಳಿಯ ನಡುವೆ ಗೋವಾ ಪೊಲೀಸರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ‘ಘೀಬ್ಲಿ ಟ್ರೆಂಡ್‌’ ಬಳಸುವ ಬಗ್ಗೆ ಎಚ್ಚರಿಕೆ ಇರಲಿ ಎಂದು ಮನವಿ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಗೋವಾ ಪೊಲೀಸರ ಎಚ್ಚರಿಕೆ ಸಂದೇಶ ಹೀಗಿದೆ: “ನಿಮ್ಮ (ಸಾರ್ವಜನಿಕರು) ಫೋಟೊಗಳನ್ನು ‘ಘೀಬ್ಲಿ ಟ್ರೆಂಡ್‌’ ಆ್ಯನಿಮೇಟೆಡ್ ಚಿತ್ರಗಳನ್ನಾಗಿ ಬದಲಾಯಿಸುವ ಮುನ್ನ ಎಚ್ಚರಿಕೆ ಇರಲಿ. ಇದು ಮನರಂಜನೆಯ ಭಾಗವಾಗಿರಬಹುದು. ಆದರೆ, ನಿಮ್ಮ ವೈಯಕ್ತಿಕ ಚಿತ್ರಗಳನ್ನು ನಿರ್ದಿಷ್ಟ ಆ್ಯಪ್‌ಗಳಲ್ಲಿ ಅಪ್‌ಲೋಡ್‌ ಮಾಡಿದಾಗ ನಿಮ್ಮ ಫೋಟೊಗಳು ಸೈಬರ್‌ ವಂಚಕರ ದುರುಪಯೋಗಕ್ಕೆ ಒಳಗಾಗಬಹುದು” ಎಂದಿದ್ದಾರೆ.

“ನಿಮ್ಮ ಫೋಟೊಗಳು ವಂಚಕರ ಕೈಸೇರಿದ್ದು, ದುರುಪಯೋಗ ಅಥವಾ ವಂಚನೆಯಾಗುತ್ತಿದ್ದಲ್ಲಿ, ತಕ್ಷಣವೇ 1930ಗೆ ಕರೆ ಮಾಡಿ ಮಾಹಿತಿ ನೀಡಿ” ಎಂದು ಗೋವಾ ಪೊಲೀಸರು ಮನವಿ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...

ಪಶ್ಚಿಮ ಬಂಗಾಳ ಉಪಚುನಾವಣೆ ವೇಳೆ ಅಕ್ರಮದ ಆರೋಪ; ಮರುಮತದಾನಕ್ಕೆ ವಿಪಕ್ಷಗಳ ಆಗ್ರಹ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ...