ಕಡಿದ ಪತ್ನಿಯ ತಲೆಯೊಂದಿಗೆ ಉದ್ಯಾನದಲ್ಲಿ ನೃತ್ಯವಾಡಿದ ಯುವಕ

Date:

35 ವರ್ಷದ ಯುವಕನೊಬ್ಬ ತನ್ನ ಪತ್ನಿಯ ತಲೆ ಕಡಿದು ಆ ತಲೆ ಹಿಡಿದುಕೊಂಡು ಉದ್ಯಾನವನದಲ್ಲಿ ನೃತ್ಯ ಮಾಡಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳ ಪುರ್ಬಾ ಮರದಿನಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಗೌತಮ್ ಗುಚ್ಚಾಯಿತ್ ಎಂದು ಗುರುತಿಸಲಾಗಿದ್ದು, ಪಶ್ಚಿಮ ಬಂಗಾಳದ ಪುರ್ಬಾ ಮರದಿನಾಪುರ ಜಿಲ್ಲೆಯ ಚಿಸ್ತಿಪುರ ಗ್ರಾಮದ ನಿವಾಸಿಯಾಗಿದ್ದಾನೆ. ಇದೇ ವ್ಯಕ್ತಿ 2021ರಲ್ಲಿ ಕೋಲ್ಕೊತಾದ ಅಲಿಪೊರೆ ಉದ್ಯಾನದಲ್ಲಿ ಸಿಂಹದ ಗುಹೆಯೊಳಗೆ ಪ್ರವೇಶಿಸಿ ಆತಂಕ ಸೃಷ್ಟಿಸಿದ್ದ.

ಪೊಲೀಸರ ವರದಿಯ ಪ್ರಕಾರ ಆರೋಪಿ ಗುಚ್ಚಾಯಿತ್ ಪತ್ನಿಯ ತಲೆ ಕಡಿದು ಆ ತಲೆಯೊಂದಿಗೆ ಉದ್ಯಾನದಲ್ಲಿ ನೃತ್ಯ ಮಾಡಿ ಕುರ್ಚಿಯ ಮೇಲೆ ಕುಳಿತ್ತಿದ್ದ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರೋಪಿಯು ಉದ್ಯಾನದ ಕುರ್ಚಿಯ ಮೇಲೆ ಸುಮಾರು 30 ನಿಮಿಷಗಳ ಕಾಲ ಕುಳಿತ್ತಿದ್ದ. ಸ್ಥಳೀಯರು ಆತನನ್ನು ಹಿಡಿಯಲು ಭಯಗೊಂಡು ಪೊಲೀಸರಿಗೆ ದೂರು ನೀಡಿದ್ದರು. ನಂತರ ಆರಕ್ಷಕರು ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತಸ್ನೇಹಿ- ಚುನಾವಣಾ ಸಮಯದ ಗಿಮಿಕ್ ಆಗದಿರಲಿ

ಪೊಲೀಸರ ಹೇಳಿಕೆ ಪ್ರಕಾರ ಆರೋಪಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಪೊಲೀಸರು ಆರೋಪಿಯ ಪತ್ನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದ್ದಾರೆ.

“ಘಟನೆ ನಡೆದ ನಂತರ ಆರೋಪಿ ಗುಚ್ಚಾಯಿತ್‌ನನ್ನು ಬಂಧಿಸಲಾಯಿತು.ತಲೆ ಹಾಗೂ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.ವಿವಾರಾತ್ಮಕ ತನಿಖೆಯ ನಂತರ ಕೊಲೆಯ ಉದ್ದೇಶ ಏನೆಂಬುದು ಗೊತ್ತಾಗಲಿದೆ. ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಜಗಳದಿಂದ ಕೊಲೆ ಸಂಭವಿಸಿರಬಹುದು” ಎಂದು ಜಿಲ್ಲಾ ಎಸ್‌ಪಿ ಸೌಮ್ಯದೀಪ್ ಬಟ್ಟಾಚಾರ್ಯ ಹೇಳಿದ್ದಾರೆ.

ಇದೇ ವ್ಯಕ್ತಿ 2021ರಲ್ಲಿ ಕೋಲ್ಕೊತಾದ ಅಲಿಪೊರೆ ಪ್ರಾಣಿ ಉದ್ಯಾನದಲ್ಲಿ ಸಿಂಹದ ಗುಹೆಯೊಳಗೆ ಪ್ರವೇಶಿಸಿ ಆತಂಕ ಸೃಷ್ಟಿಸಿದ್ದ. ನಂತರ ಸಣ್ಣಪುಟ್ಟ ಗಾಯಗೊಂಡಿದ ಈತನನ್ನು ಉದ್ಯಾನವನದ ಸಿಬ್ಬಂದಿ  ರಕ್ಷಿಸಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭೆ ಚುನಾವಣೆ | ಇನ್ನುಳಿದ ಹಂತಗಳಲ್ಲಿ ಬಿಜೆಪಿ ಸ್ಥಿತಿ ಮತ್ತಷ್ಟು ಹದಗೆಡಲಿದೆ: ಅಖಿಲೇಶ್ ಯಾದವ್

ಲೋಕಸಭೆ ಚುನಾವಣೆಯ ಉಳಿದ ಹಂತಗಳಲ್ಲಿ ಬಿಜೆಪಿಯ ಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು...

‘ತಾರಕ್ ಮೆಹ್ತಾ’ ನಟ ಗುರುಚರಣ್ ಸಿಂಗ್ ನಾಪತ್ತೆ; ಅಪಹರಣ ಪ್ರಕರಣ ದಾಖಲು

ಅತ್ಯಂತ ಜನಪ್ರಿಯ ಭಾರತೀಯ ಟಿವಿ ಶೋ ಆದ 'ತಾರಕ್ ಮೆಹ್ತಾ ಕಾ...

2ನೇ ಹಂತದ ಚುನಾವಣೆ | ಮತಗಟ್ಟೆಗೆ ಬಾರದ ಹೆಚ್ಚಿನ ಮತದಾರರು; ಬಿಜೆಪಿ ವಿರೋಧಿ ಅಲೆಯ ಸೂಚನೆಯೇ?

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ಮುಗಿದಿದೆ. 13 ರಾಜ್ಯಗಳ...