ಬಿಹಾರದಲ್ಲಿ ಗುರುವಾರ ಮತ್ತೊಂದು ಸೇತುವೆ ಕುಸಿತವಾದ ಬೆನ್ನಲ್ಲೇ ಸುಪ್ರೀಂ ಕೋರ್ಟ್ನಲ್ಲಿ ಬಿಹಾರ ಸೇತುವೆ ಕುಸಿತ ಪ್ರಕರಣಗಳಲ್ಲಿ ಸೇತುವೆಗಳ ಲೆಕ್ಕಪರಿಶೋಧನೆಗಾಗಿ ಕೋರಿ ಅರ್ಜಿ ಸಲ್ಲಿಸಲಾಗಿದೆ.
ಬಿಹಾರದಲ್ಲಿ ಬುಧವಾರ ಮೂರು ಸೇತುವೆಗಳು ಕುಸಿತವಾಗಿದ್ದು ಕಳೆದ 15 ದಿನಗಳಲ್ಲಿ ನಡೆದ ಸೇತುವೆ ಕುಸಿತ ಪ್ರಕರಣಗಳು 9ಕ್ಕೆ ಏರಿಕೆಯಾಗಿತ್ತು. ಗುರುವಾರ ಮತ್ತೊಂದು ಸೇತುವೆ ಕುಸಿತವಾಗಿದ್ದು, ಪ್ರಕರಣಗಳ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ.
ಸರನ್ನಲ್ಲಿ ಕಳೆದ 24 ಗಂಟೆಗಳಲ್ಲಿ ಮತ್ತೆರಡು ಸೇತುವೆ ಕುಸಿತ ಉಂಟಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮನ್ ಸಮೀರ್ ಹೇಳಿದ್ದಾರೆ. ಈ ಕಟ್ಟಡವನ್ನು 15 ವರ್ಷಗಳ ಹಿಂದೆ ಸ್ಥಳೀಯ ಅಧಿಕಾರಿಗಳು ನಿರ್ಮಿಸಿದ್ದಾರೆ.
ಗಂಡಕಿ ನದಿಯ ಮೇಲೆ ನಿರ್ಮಿಸಲಾದ ಸೇತುವೆಯು ಬನೇಯಪುರ ಬ್ಲಾಕ್ನಲ್ಲಿದೆ. ಸರನ್ನ ಹಲವಾರು ಹಳ್ಳಿಗಳನ್ನು ಸಿವಾನ್ನೊಂದಿಗೆ ಈ ಸೇತುವೆ ಸಂಪರ್ಕಿಸುತ್ತದೆ.
ಇದನ್ನು ಓದಿದ್ದೀರಾ? ಬಿಹಾರ| ಮತ್ತೆ ಮೂರು ಸೇತುವೆ ಕುಸಿತ; 15 ದಿನಗಳಲ್ಲಿ ಒಂಬತ್ತು ಪ್ರಕರಣ!
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ, “ನಾನು ಸ್ಥಳಕ್ಕೆ ಹೋಗುತ್ತಿದ್ದೇನೆ. ಜಿಲ್ಲಾಡಳಿತದ ಇತರ ಹಲವಾರು ಅಧಿಕಾರಿಗಳು ಈಗಾಗಲೇ ಅಲ್ಲಿಗೆ ತಲುಪಿದ್ದಾರೆ. ಸೇತುವೆ ಕುಸಿತಕ್ಕೆ ನಿಖರವಾದ ಕಾರಣವನ್ನು ಇನ್ನೂ ತಿಳಿದುಬಂದಿಲ್ಲ. ಆದರೆ ಇತ್ತೀಚೆಗಷ್ಟೇ ಹೂಳು ತೆಗೆಯುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ” ಎಂದು ಪಿಟಿಐಗೆ ಹೇಳಿದ್ದಾರೆ.
ಸೇತುವೆಗಳ ಲೆಕ್ಕಪರಿಶೋಧನೆಗಾಗಿ ಸುಪ್ರೀಂ ಕೋರ್ಟ್ನಲ್ಲಿ ಮನವಿ
ಎರಡು ವಾರಗಳಲ್ಲಿ ಒಂದಾದ ಬಳಿಕ ಒಂದು ಸೇತುವೆಗಳು ಕುಸಿಯುತ್ತಿದ್ದಂತೆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮತ್ತು ನಿರ್ಮಾಣ ಹಂತದಲ್ಲಿರುವ ಎಲ್ಲಾ ಸೇತುವೆಗಳ ರಚನಾತ್ಮಕ ಲೆಕ್ಕಪರಿಶೋಧನೆ ನಡೆಸಲು ಬಿಹಾರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
#BiharNews :A 15 year old bridge in #Saran, Bihar, collapsed on Thursday, the 10th such incident in the state in just over a fortnight. Luckily,no casualties were reported. This is the third bridge collapse in Saran in 24 hours.#BiharBridgeCollapse #BridgeCollapse #NitishKumar pic.twitter.com/ZSRlxlBG9N
— Beats in Brief (@beatsinbrief) July 4, 2024
ಕಳೆದ 15 ದಿನಗಳಲ್ಲಿ ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್ಗಂಜ್ ಜಿಲ್ಲೆಗಳಲ್ಲಿ ಒಟ್ಟು 10 ಸೇತುವೆಗಳು ಕುಸಿದಿವೆ.
ಇದನ್ನು ಓದಿದ್ದೀರಾ? 9 ದಿನಗಳಲ್ಲಿ 5ನೇ ಸೇತುವೆ ಕುಸಿತ; ನಿತೀಶ್ ಸರ್ಕಾರದ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ
ಇನ್ನು ಈ ವಿಚಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, “ಜುಲೈ 4ರಂದು ಅಂದರೆ ಇಂದು ಬೆಳಗ್ಗೆ ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿದಿದೆ. ನಿನ್ನೆ ಜುಲೈ 3ರಂದು ಐದು ಸೇತುವೆಗಳು ಕುಸಿದಿದೆ. ಜೂನ್ನಲ್ಲಿ ಇಲ್ಲಿಯವರೆಗೆ 12 ಸೇತುವೆಗಳು ಕುಸಿದಿದೆ” ಎಂದು ಹೇಳಿದ್ದಾರೆ.
“ಈ ಸಾಧನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಪೂರ್ಣವಾಗಿ ಮೌನ ಮತ್ತು ಮೂಕರಾಗಿದ್ದಾರೆ. ಈ ಮಂಗಳಕರ ಭ್ರಷ್ಟಾಚಾರವನ್ನು ಜಂಗಲ್ ರಾಜ್ ಆಗಿ ಪರಿವರ್ತಿಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ” ಎಂದು ಪ್ರಶ್ನಿಸಿದ್ದಾರೆ.
𝟒 जुलाई यानि आज सुबह बिहार में एक पुल और गिरा।
कल 𝟑 जुलाई को ही अकेले 𝟓 पुल गिरे।
𝟏𝟖 जून से लेकर अभी तक 𝟏𝟐 पुल ध्वस्त हो चुके है।
प्रधानमंत्री नरेंद्र मोदी और मुख्यमंत्री नीतीश कुमार इन उपलब्धियों पर एकदम खा़मोश एवं निरुत्तर है। सोच रहे है कि इस मंगलकारी भ्रष्टाचार को…
— Tejashwi Yadav (@yadavtejashwi) July 4, 2024