ಬಾಗಲಕೋಟೆ |ಮದ್ಯ–ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಗುರುಮಹಾಂತ ಶ್ರೀಗಳ ಸಾರಥ್ಯ

Date:

ವ್ಯಸನಮುಕ್ತ ಸಮಾಜ ನಿರ್ಮಾಣ ಹಾಗೂ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಗೌರವ ಸಲಹೆಗಾರರಾಗಿ ಇಳಕಲ್‌ನ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠದ ಮ.ನಿ.ಪ್ರ. ಡಾ. ಗುರುಮಹಾಂತ ಸ್ವಾಮಿಗಳನ್ನು ನೇಮಕ ಮಾಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ತಿಳಿಸಿದ್ದಾರೆ.

- Advertisement -

ಬಾಗಲಕೋಟೆ ಜಿಲ್ಲೆಯ ಚಿತ್ತರಗಿಯಲ್ಲಿ ನಡೆದ ವಿಜಯಮಹಾಂತ ಶಿವಯೋಗಿಗಳ 115ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿ, ಕುಟುಂಬ ಮತ್ತು ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ವ್ಯಾಪಕ ಜನಜಾಗೃತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಂಡಳಿಯು ವ್ಯಸನಮುಕ್ತ ಸಮಾಜ ನಿರ್ಮಾಣದ ಮಹತ್ವದ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಜ್ಜಳನ ಆಸ್ಥಾನದಲ್ಲಿದ್ದ ಕೊಂಡಿ ಮಂಚಣ್ಣ ಯಾರು? ಆತ ‘ಬಸವ’...

ಬಸವಣ್ಣನವರ ವಿರೋಧಿಯಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿರುವ ‘ಕೊಂಡಿ ಮಂಚಣ್ಣ’ ಈಗ ಮತ್ತೆ ಕರ್ನಾಟಕದ ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ಬಂದಿದ್ದಾನೆ. ಸಚಿವ ಎಂ.ಬಿ. ಪಾಟೀಲ್ ಅವರು ಶಂಕರ್ ಬಿದರಿ ಮತ್ತು ಮನು ಬಳಿಗಾರ್ ಅವರನ್ನು ‘21ನೇ...

ರಾಹುಲ್ ವಿರುದ್ಧ ಮೊಕದ್ದಮೆ, ಸೋನಿಯಾಗೆ ಕಾನೂನು ನೋಟಿಸ್: ಸಾವರ್ಕರ್–ಗೋಡ್ಸೆ...

ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ಮೂಲಕ ವಿವಾದ ಸೃಷ್ಟಿಸಿದ್ದ ಪುಣೆಯ ಸಾತ್ಯಕಿ ಸಾವರ್ಕರ್, ಇದೀಗ ಸೋನಿಯಾ ಗಾಂಧಿ ಅವರ ಪುಸ್ತಕದ ಐತಿಹಾಸಿಕ ಉಲ್ಲೇಖಗಳನ್ನು ಸಹಿಸದೆ ಕಾನೂನು ನೋಟಿಸ್ ನೀಡಿ ಮತ್ತೆ ಪ್ರಚಾರಕ್ಕಿಳಿದಿದ್ದಾನೆ....

ಉತ್ತರ ಕನ್ನಡ: ಬೇಡ್ತಿ ಹೋರಾಟ ಮತ್ತು ಸಂಸದ-ಶಾಸಕರ ಸೋಗಲಾಡಿತನ

ಬೇಡ್ತಿ ಸತ್ಯಾಗ್ರಹ ಎಷ್ಟು ಯೋಜನಾ ಬದ್ದವಾಗಿರುತ್ತದೆಂದರೆ, ಬೇಡ್ತಿ ನದಿ ಬಳಸುವ ಯಾವ ಯೋಜನೆಯೂ ಕಾರ್ಯಗತವಾಗದಂತೆ ಹಿಮ್ಮೆಟ್ಟಿಸಲಾಗುತ್ತಿದೆ. ಆದರೆ ಜಿಲ್ಲೆಯ ಹಿಂದುಳಿದವರು-ದುರ್ಬಲರು ಬಾಧಿತವಾಗುವ ಹಲವು ಯೋಜನೆಗಳನ್ನು ಪ್ರಭುತ್ವ ಹಠದಿಂದ ಅನುಷ್ಠಾನಗೊಳಿಸಿದೆ. ಸುಪಾ, ತಟ್ಟಿಹಳ್ಳ, ಕೊಡಸಳ್ಳಿ,...

ಸಮಾಜಮುಖಿ ಚಿಂತನೆ, ಅನುಭವ ಹಾಗೂ ಸಾಮಾಜಿಕ ಕಳಕಳಿಯುಳ್ಳ ಗಣ್ಯರ ಮಾರ್ಗದರ್ಶನ ಮಂಡಳಿಯ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಶಕ್ತಿ ತುಂಬಲಿದೆ. ಡಾ. ಗುರುಮಹಾಂತ ಸ್ವಾಮಿಗಳು ನೀಡುತ್ತಿರುವ ಅಮೂಲ್ಯ ಸಲಹೆ, ಮಾರ್ಗದರ್ಶನ ಮತ್ತು ಸಹಕಾರವನ್ನು ಪರಿಗಣಿಸಿ ಅವರನ್ನು ಗೌರವ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಹಾಗೂ ವ್ಯಸನಮುಕ್ತ ಸಮಾಜದ ಪರಿಕಲ್ಪನೆಗೆ ಪೂರಕವಾಗಿ ಶ್ರೀಗಳು ಸಲ್ಲಿಸುತ್ತಿರುವ ಸಾಮಾಜಿಕ ಸೇವೆ ಸ್ಪೂರ್ತಿದಾಯಕವಾಗಿದೆ. ಯುವಜನರನ್ನು ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನದಿಂದ ದೂರವಿಡುವುದು, ಆರೋಗ್ಯಕರ ಜೀವನಶೈಲಿಯ ಕುರಿತು ಅರಿವು ಮೂಡಿಸುವುದು ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಜನರ ಸಹಭಾಗಿತ್ವ ಹೆಚ್ಚಿಸುವುದು ಮಂಡಳಿಯ ಪ್ರಮುಖ ಆಶಯವಾಗಿದೆ. ಈ ಕಾರ್ಯಗಳಿಗೆ ಶ್ರೀಗಳ ಮಾರ್ಗದರ್ಶನ ಮಹತ್ವದ ಕೊಡುಗೆ ನೀಡಲಿದೆ ಎಂದು ಶರಣಪ್ಪ ಸಲಾದಪುರ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಂಡಳಿಯ ಕಾರ್ಯದರ್ಶಿ ಪಿ. ಕೌಸಲ್ಯ, ಕಾನೂನು ಸಲಹೆಗಾರ ಎಚ್.ಬಿ. ವೆಂಟೇಶ್, ನಂದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ವಿರುದ್ಧ ಮೊಕದ್ದಮೆ, ಸೋನಿಯಾಗೆ ಕಾನೂನು ನೋಟಿಸ್: ಸಾವರ್ಕರ್–ಗೋಡ್ಸೆ ಕುಟುಂಬದ ಸಾತ್ಯಕಿ ಯಾರು?

ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ಮೂಲಕ ವಿವಾದ ಸೃಷ್ಟಿಸಿದ್ದ ಪುಣೆಯ...

ಚಿಕ್ಕಮಗಳೂರು | ‘ನಾಟಕ ನಿಲ್ಲಿಸಿ ನಯನ ಮೋಟಮ್ಮ’ ; ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ 

ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಮೂಡಿಗೆರೆ ಮಾರ್ಗವಾಗಿ ಭದ್ರಾ ಅಭಯಾರಣ್ಯದತ್ತ ಕಾಡಾನೆಗಳನ್ನು...

ಕೋಲಾರ | ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ಜಾರಿಗೆ ಹೋರಾಟ ತೀವ್ರ: ಸುನಂದಾ

ಐದು ದಶಕಗಳಿಂದಲೂ ಗೌರವಧನದ ಆಧಾರದಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರನ್ನು ಕನಿಷ್ಠ ವೇತನದ...

ಜನಪರ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿ: ಸಚಿವ ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ...