ಬಿಜೆಪಿ ಬುಲ್ಡೋಜರ್ ರಾಜಕೀಯ: ಬಂಗಾಳದಲ್ಲಿ ಮುಂದುವರೆದ ಎಡಪಂಥೀಯರ ಪುಸ್ತಕ ಮಳಿಗೆಗಳ ಮೇಲೆ ದಾಳಿ

Date:

ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯೆಂದರೆ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಅದು ಸಾಂಸ್ಕೃತಿಕ ಮತ್ತು ವೈಚಾರಿಕ ವಿಚಾರ ವಿನಿಮಯದ ಬೃಹತ್ ವೇದಿಕೆ. ಕಳೆದ ಏಳು ದಶಕಗಳಿಗೂ ಹೆಚ್ಚು ಕಾಲದಿಂದ (ಸುಮಾರು 70 ವರ್ಷಗಳು) ದುರ್ಗೋತ್ಸವದ ಮಂಟಪಗಳ (ಪೆಂಡಾಲ್) ಬಳಿ ಎಡಪಂಥೀಯ ಸಂಘಟನೆಗಳು, ಸಿಪಿಐ(ಎಂ) ಸೇರಿದಂತೆ ವಿವಿಧ ಪಕ್ಷಗಳು ಪುಸ್ತಕ ಮಳಿಗೆಗಳನ್ನು ಹಾಕುವುದು ಬಂಗಾಳದ ಸಾಂಪ್ರದಾಯಿಕ ಪದ್ಧತಿ. ಇಲ್ಲಿ ಮಾರ್ಕ್ಸ್, ಲೆನಿನ್, ಭಗತ್ ಸಿಂಗ್ ಅವರ ಸಾಹಿತ್ಯದಿಂದ ಹಿಡಿದು ಪ್ರಚಲಿತ ಸಾಮಾಜಿಕ-ರಾಜಕೀಯ ಗ್ರಂಥಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿದ್ದವು.

- Advertisement -

ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ವೈಚಾರಿಕ ಮುಕ್ತತೆಗೆ ಸಂಕೋಲೆ ಬಿದ್ದಿದೆ. ಹಿಂದೆ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿಕಾರದಲ್ಲಿದ್ದಾಗಲೂ ಈ ಎಡಪಂಥೀಯ ಪುಸ್ತಕ ಮಳಿಗೆಗಳ ಮೇಲೆ ಸ್ಥಳೀಯ ಮಟ್ಟದಲ್ಲಿ ಕಿರುಕುಳ ಮತ್ತು ದಾಳಿಗಳು ನಡೆಯುತ್ತಿದ್ದವು. ಇದೀಗ ಸುವೇಂದು ಅಧಿಕಾರಿ ಸರ್ಕಾರ ಬಂದ ಬಳಿಕ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪರಿವಾರದ ಪ್ರಭಾವ ಹೆಚ್ಚಾಗುತ್ತಿದ್ದಂತೆ, ಈ ಮಳಿಗೆಗಳ ಮೇಲಿನ ದಾಳಿಗಳು ಮತ್ತಷ್ಟು ತೀವ್ರಗೊಂಡಿವೆ ಮತ್ತು ದಾಳಿಗಳು ಸಂಘಟಿತ ರೂಪ ಪಡೆದುಕೊಂಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಕಾವು; AI ಪೋಸ್ಟರ್‌ಗಳಲ್ಲೂ...

ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿಲ್ಲ. ಆದರೆ, ಗ್ರಾಮೀಣ ರಾಜಕಾರಣದಲ್ಲಿ ಮಾತ್ರ ಈಗಾಗಲೇ ಚುನಾವಣೆಯ ಕಾವು ಏರತೊಡಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ...

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ...

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ ಹಣಕಾಸಿನ ಕುರಿತ ಹೇಳಿಕೆಗಳು ಮತ್ತು ಸರ್ಕಾರದ ತನಿಖೆಯ ಭರವಸೆ—ಇವೆಲ್ಲವೂ ಪ್ರಕರಣದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಆದರೆ ಇವುಗಳಲ್ಲಿ ಯಾವುದೂ ಸ್ವತಃ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಇದನ್ನೂ ಓದಿ: ದುರ್ಗಾ ಉತ್ಸವ ನಡುವೆ ಸಿಪಿಎಂ ಪುಸ್ತಕ ಮಳಿಗೆಗಳ ನೆಲಸಮಕ್ಕೆ ಮುಂದಾದ ಸುವೇಂದು ಸರ್ಕಾರ; ಬಿಜೆಪಿ ಆಡಳಿತದ ವಿರುದ್ಧ ಜನರ ಪ್ರತಿಭಟನೆ

ಆರ್‌ಎಸ್‌ಎಸ್‌ಗೆ ಅವಕಾಶ: ಎಡಪಂಥಕ್ಕೆ ತಡೆ

ಪ್ರಸಕ್ತ ಸಾಲಿನ ದುರ್ಗಾ ಪೂಜಾ ಮಹೋತ್ಸವದ ವೇಳೆಯಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಪಕ್ಷಪಾತ ಎದ್ದುಕಾಣುತ್ತಿದೆ. ಕೋಲ್ಕತ್ತಾ ಹೈಕೋರ್ಟ್‌ನ ನಿರ್ದಿಷ್ಟ ಆದೇಶಗಳನ್ನು ತಪ್ಪು ವ್ಯಾಖ್ಯಾನ ಮಾಡಿ, ಪೊಲೀಸರು ಮತ್ತು ಳೀಯ ಆಡಳಿತದ ಸಹಾಯದಿಂದ ಎಡಪಂಥೀಯ ಮಳಿಗೆಗಳನ್ನು ವಿನಾಕಾರಣ ಕೆಡವಲಾಗುತ್ತಿದೆ.

ಕೋಲ್ಕತ್ತಾದ ಜಾದವ್‌ಪುರ ಸೇರಿದಂತೆ ಹಲವು ಕಡೆಗಳಲ್ಲಿ ಎಡಪಂಥೀಯ ಸಾಹಿತ್ಯ ಮಳಿಗೆಗಳಿಗೆ ಸೂಕ್ತ ಅನುಮತಿ ಇದ್ದರೂ ಪೊಲೀಸರು ಬಲವಂತವಾಗಿ ತೆರವುಗೊಳಿಸಿದ್ದಾರೆ. ಆದರೆ, ಅದೇ ಸ್ಥಳದಿಂದ ಕೆಲವೇ ಅಡಿಗಳ ಅಂತರದಲ್ಲಿ ಆರ್‌ಎಸ್‌ಎಸ್ ಮತ್ತು ಸಂಘಪರಿವಾರದ ಸಂಘಟನೆಗಳು ಹಾಕಿದ್ದ ಪುಸ್ತಕ ಮಳಿಗೆಗಳಿಗೆ ಯಾವುದೇ ಅಡೆತಡೆ ಇಲ್ಲದೆ ವ್ಯಾಪಾರ ನಡೆಸಲು ಅವಕಾಶ ನೀಡಲಾಗಿದೆ.

ಹೌರಾ, ನಾಡಿಯಾ, ಬ್ಯಾರಕ್‌ಪುರ, ಜಾದವ್‌ಪುರ ಹಾಗೂ ಬಿಜ್‌ಪುರ ಸೇರಿದಂತೆ ಹಲವು ಭಾಗಗಳಲ್ಲಿ ದುಷ್ಟರು ಪುಸ್ತಕ ಮಳಿಗೆಗಳನ್ನು ಧ್ವಂಸಗೊಳಿಸಿ, ಪುಸ್ತಕಗಳನ್ನು ಕಾಲಿನಿಂದ ಒದ್ದು, ಚರಂಡಿಗೆ ಎಸೆದು, ಕೆಸರೆರಚಿ, ಕೆಲವು ಕಡೆ ಬೆಂಕಿ ಹಚ್ಚಿರುವ ಘಟನೆಗಳೂ ವರದಿಯಾಗಿವೆ. ಇದೇ ನೀವು ಪುಸ್ತಕಕ್ಕೆ ನೀಡುವ ಗೌರವವೇ ಎಂದು ನೆಟ್ಟಿಗರು ಬಿಜೆಪಿಗರನ್ನು ಪ್ರಶ್ನಿಸುತ್ತಿದ್ದಾರೆ.

ದಾಳಿಗಳ ವಿರುದ್ಧ ಸಾರ್ವಜನಿಕರು ಮತ್ತು ಸ್ಥಳೀಯ ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಕಡೆಗಳಲ್ಲಿ ಎಡಪಂಥೀಯ ಮಳಿಗೆಗಳ ಮೇಲೆ ದಾಳಿ ನಡೆದ ತಕ್ಷಣವೇ ಸ್ಥಳೀಯ ನಿವಾಸಿಗಳು, ಯುವಕರು ಮತ್ತು ಸಾಮಾನ್ಯ ಸಾರ್ವಜನಿಕರು ಒಂದಾಗಿ ದಾಳಿಕೋರರನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ | ದುರ್ಗಾ ಪೂಜೆ ಪಂಡಾಲ್‌ನಲ್ಲಿ ಮಮತಾ ಮೇಲೆ ದಾಳಿ; ಟಿಎಂಸಿ ಮುಖಂಡರೇ ಗುರಿಯೆ?

“ದಾಳಿಗಳಿಂದ ಪುಸ್ತಕ ಪ್ರೇಮವನ್ನು ತಡೆಯಲು ಸಾಧ್ಯವಿಲ್ಲ” ಎಂದು ಸಾರಿದ ಸಾರ್ವಜನಿಕರು, ಧ್ವಂಸಗೊಂಡ ಮಳಿಗೆಗಳ ಬಳಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸಾಲಾಗಿ ನಿಂತು ಪುಸ್ತಕಗಳನ್ನು ಖರೀದಿಸುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ. ಕೆಲವು ಕಡೆ ಮಳಿಗೆಗಳನ್ನು ಮರುನಿರ್ಮಾಣ ಮಾಡಿ ಮತ್ತೆ ವ್ಯಾಪಾರ ಪ್ರಾರಂಭಿಸಲಾಗಿದೆ. “ನಾವು ಪುಸ್ತಕವನ್ನು ಓದಬೇಕೋ ಬೇಡವೋ ಎಂಬುದು ರಿಮೋಟ್ ಕಂಟ್ರೋಲ್‌ನಂತೆ ಜನರ ಕೈಯಲ್ಲಿದೆ. ಸಿದ್ಧಾಂತ ಏನೇ ಇರಲಿ, ವಿಚಾರಗಳನ್ನು ಜನರ ಮುಂದಿಡುವ ಹಕ್ಕನ್ನು ಕಸಿದುಕೊಳ್ಳುವುದು ಗೂಂಡಾಗಿರಿ” ಎಂದು ಪ್ರಜಾಸತ್ತಾತ್ಮಕ ಚಿಂತಕರು ಹಾಗೂ ಸಾರ್ವಜನಿಕರು ಖಂಡಿಸಿದ್ದಾರೆ.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಸಲೀಂ ಮತ್ತು ಹಿರಿಯ ನಾಯಕ ಬಿಮಾನ್ ಬಸು ಮಾತನಾಡಿ, “ಅವರು ಪುಸ್ತಕಗಳಿಗೆ, ವಿಚಾರಗಳಿಗೆ ಹೆದರುತ್ತಿದ್ದಾರೆ. ಸಂಕುಚಿತ ಮನೋಭಾವ ಮತ್ತು ಉದಾರವಾದಿ ಚಿಂತನೆಗಳ ನಡುವಿನ ಹೋರಾಟ ಇದಾಗಿದೆ. ಅವರು ಮಳಿಗೆಗಳನ್ನು ಎಷ್ಟೇ ಕೆಡವಿದರೂ ನಾವು ಜನರ ಬಳಿಗೆ ಕಾಲ್ನಡಿಗೆಯಲ್ಲಾದರೂ ಪುಸ್ತಕ ತಲುಪಿಸುತ್ತೇವೆ” ಎಂದು ಶಪಥ ಮಾಡಿದ್ದಾರೆ.

ಈ ದಾಳಿಗಳಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಸ್ಪಷ್ಟನೆ ನೀಡಲು ಯತ್ನಿಸಿದ್ದರೆ, ಮತ್ತೊಂದೆಡೆ ಕೆಲವು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಎಡಪಂಥೀಯ ಪ್ರಚಾರವನ್ನು ತಡೆಯುವುದಾಗಿ ಬಹಿರಂಗ ಸವಾಲೆಸೆದಿರುವುದು ವಿರೋಧಾಭಾಸಕ್ಕೆ ಕಾರಣವಾಗಿದೆ.

ದುರ್ಗಾ ಪೂಜೆಯು ಬಂಗಾಳದಲ್ಲಿ ಧರ್ಮ, ಸಂಸ್ಕೃತಿ ಮತ್ತು ಸಿದ್ಧಾಂತಗಳ ಸಹಬಾಳ್ವೆಯ ಸಂಕೇತವಾಗಿತ್ತು. ಆದರೆ, ರಾಜಕೀಯ ದ್ವೇಷಕ್ಕಾಗಿ ಪುಸ್ತಕಗಳ ಮೇಲೆ ನಡೆಸಲಾಗುತ್ತಿರುವ ಈ ‘ಬುಲ್ಡೋಜರ್ ರಾಜಕೀಯ’ ಬಂಗಾಳದ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ. ಜ್ಞಾನ ಮತ್ತು ವಿಚಾರದ ಪ್ರತೀಕವಾದ ಪುಸ್ತಕಗಳನ್ನು ನಾಶಪಡಿಸುವ ಈ ಹಿಂಸಾತ್ಮಕ ಸಂಸ್ಕೃತಿಯನ್ನು ಬಂಗಾಳದ ಪ್ರಬುದ್ಧ ಸಮಾಜ ತೀವ್ರವಾಗಿ ಖಂಡಿಸುತ್ತಿದ್ದು, ಸಿದ್ಧಾಂತಗಳ ನಡುವಿನ ಕದನ ಈಗ ಪುಸ್ತಕ ಮತ್ತು ಹಿಂಸೆಯ ನಡುವಿನ ಸಮರವಾಗಿ ಮಾರ್ಪಟ್ಟಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟೈಗರ್ ಶ್ರಾಫ್ ಫೈರಿಂಗ್ ಪ್ರಕರಣ: 34 ಸಾವಿರಕ್ಕೆ ಸುಪಾರಿ, ವಿದೇಶಿ ಉದ್ಯೋಗದ ಆಮಿಷ!

ಬಾಲಿವುಡ್‌ ನಟ ಟೈಗರ್ ಶ್ರಾಫ್‌ ಫೈರಿಂಗ್‌ ಪ್ರಕರಣದ ತನಿಖೆಯಲ್ಲಿ ಹೊಸ ಸಂಗತಿಗಳು...

‘ಜೈಲರ್ 2’ ಸಿನಿಮಾ ವೀಕ್ಷಿಸಲು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ ಸಂಜು ಸ್ಯಾಮ್ಸನ್!

ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ಚಿತ್ರ 'ಜೈಲರ್ 2' ಸಿನಿಮಾವನ್ನು...

ಫ್ರಾನ್ಸ್‌ | ಭುಗಿಲೆದ್ದ ಪ್ರತಿಭಟನೆ: 2,400ಕ್ಕೂ ಅಧಿಕ ಮಂದಿ ಬಂಧನ, ಸಾವಿರಕ್ಕೂ ಹೆಚ್ಚು ಪೊಲೀಸರಿಗೆ ಗಾಯ

ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಫ್ರಾನ್ಸ್‌ನಲ್ಲಿ ಜೀವನ ವೆಚ್ಚದ ಏರಿಕೆ, ಸಾರ್ವಜನಿಕ...

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ ಪ್ರಶ್ನೆಗಳು

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ...