ಬಾಕಿ ಉಳಿಸಿಕೊಂಡಿರುವ 105 ಕೋಟಿ ರೂ. ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಆದೇಶಕ್ಕೆ ತಡೆ ನೀಡಲು ನಿರಾಕರಿಸಿರುವ ಆದಾಯ ಇಲಾಖೆ ಮೇಲ್ಮನವಿ ಪ್ರಾಧಿಕಾರದ ಆದೇಶದ ವಿರುದ್ಧ ಕಾಂಗ್ರೆಸ್ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.
ಇಂದು ವಿಚಾರಣೆಗೆ ಕೋರ್ಟ್ ಅನುಮತಿಸಿದ ನಂತರ ಪ್ರಕರಣವನ್ನು ಉಸ್ತುವಾರಿ ಮುಖ್ಯ ನ್ಯಾಯಾಧೀಶ ಮನ್ಮೋಹನ್ ಹಾಗೂ ನ್ಯಾಯಧೀಶ ತುಷಾರ್ ರಾವ್ ಗೆಡೆಲಾ ಅವರ ಪೀಠ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಹಿರಿಯ ನ್ಯಾಯವಾದಿ ವಿವೇಕ್ ತಂಕಾ ಈ ವಿಚಾರಣೆಯ ಬಗ್ಗೆ ಮಾಹಿತಿ ನೀಡಿದರು.
ರದ್ದುಗೊಂಡಿರುವ ಕಾಂಗ್ರೆಸ್ ಖಾತೆಗಳ ಬಗ್ಗೆ ತಡೆ ನೀಡಲು ಕಳೆದ ವಾರ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರ ನಿರಾಕರಿಸಿತ್ತು. ಚುನಾವಣಾ ಸಂದರ್ಭದಲ್ಲಿ ಇದು ಮುಖ್ಯವಾಗಿದೆ. ನಮ್ಮ ಬಳಿ ಹಣವಿಲ್ಲದಿದ್ದರೆ ಹೇಗೆ ಹೋರಾಟ ನಡೆಸುವುದು? ಐಟಿಎಟಿ ನಮ್ಮನ್ನು ಸಂರಕ್ಷಿಸುತ್ತದೆ ಆದರೆ ಈಗ ಅದು ಕೂಡ ಇಲ್ಲವಾಗಿದೆ” ಎಂದು ತಂಕಾ ಕೋರ್ಟ್ಗೆ ಮನವರಿಕೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಬಾಂಡ್ ಬಹಿರಂಗಗೊಳಿಸಲು ಎಸ್‌ಬಿಐ ಏಕೆ ಹಿಂಜರಿಯುತ್ತಿದೆ?
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ ವಿಚಾರಣೆ ದಿನಾಂಕವನ್ನು ತಿಳಿಸುವುದಾಗಿ ಹೇಳಿತು.
2018-19ರ ಸಾಲಿನ 105 ಕೋಟಿ ತೆರಿಗೆ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ಗೆ ನೋಟಿಸ್ ಜಾರಿಗೊಳಿಸಿದೆ.
ಮಾರ್ಚ್ 8ರಂದು ನೀಡಿರುವ ಆದೇಶದಲ್ಲಿ ಕಾಂಗ್ರೆಸ್ ಪ್ರತಿಪಾದಿಸಿದ ಆದಾಯ ತೆರಿಗೆ ವಿನಾಯಿತಿಯನ್ನು ನಿರಾಕರಿಸುವಲ್ಲಿ ಐಟಿ ಅಧಿಕಾರಿಗಳು ಯಾವುದೇ ತಪ್ಪು ಮಾಡಿಲ್ಲ ಎಂದು ಐಟಿಎಟಿ ತೀರ್ಪು ನೀಡಿದೆ. ಜುಲೈ 2021 ರಲ್ಲಿ ಐಟಿ ಅಧಿಕಾರಿಗಳು ಕಾಂಗ್ರೆಸ್‌ನ ಶೂನ್ಯ ಆದಾಯದ ಘೋಷಣೆಯನ್ನು ತಿರಸ್ಕರಿಸಿದ್ದರು ಮತ್ತು ತೆರಿಗೆಯಾಗಿ 105 ಕೋಟಿ ರೂ. ನೀಡಬೇಕು ಎಂದು ತಿಳಿಸಿದ್ದರು.
ನಿಗದಿತ ಅವಧಿಯನ್ನು ಮೀರಿ ರಿಟರ್ನ್ ಸಲ್ಲಿಸಲಾಗಿದೆ ಮತ್ತು ಪಕ್ಷವು ವಿವಿಧ ವ್ಯಕ್ತಿಗಳಿಂದ 14,49,000 ಕೋಟಿ “ದೇಣಿಗೆ” ಪಡೆದಿದೆ. ಪ್ರತಿಯೊಂದು ದೇಣಿಗೆ 2,000 ರೂ. ಗಿಂತ ಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕಾಗಿ ತೆರಿಗೆ ಹಣ ನೀಡಬೇಕು ಎಂದು ತಿಳಿಸಲಾಗಿದೆ.
