ಜಾಮೀನು ನೀಡಿದ ವ್ಯಕ್ತಿಗೆ ರಾಜಕೀಯ ಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದು ಷರತ್ತು ವಿಧಿಸಿ ಒಡಿಶಾ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ರೀತಿಯ ಆದೇಶಗಳು ವ್ಯಕ್ತಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿ ಬಿ ಆರ್ ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠ ಒಡಿಶಾದ ಬ್ರಹ್ಮಾಪುರ್ ಪಾಲಿಕೆಯ ಮಾಜಿ ಮೇಯರ್ ಸಿಬಾ ಶಂಕರ್ ದಾಸ್ ಜನವರಿ 18ರಂದು ಒಡಿಶಾ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿದ ಅರ್ಜಿಯ ಮನವಿಯ ಮೇರೆಗೆ ಆದೇಶ ಹೊರಡಿಸಿದರು.
ಜನವರಿ 18ರಂದು ತೀರ್ಪು ನೀಡಿದ್ದ ಒಡಿಶಾ ಹೈಕೋರ್ಟ್ ಸಾರ್ವಜನಿಕವಾಗಿ ಯಾವುದೇ ಅನಪೇಕ್ಷಿತ ಪರಿಸ್ಥಿತಿಗಳನ್ನು ಸೃಷ್ಟಿ ಮಾಡಬಾರದು ಹಾಗೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಎಂದು ಅರ್ಜಿದಾರರು ಜಾಮೀನಿನ ಮೇಲೆ ವಿಧಿಸಿದ ಷರತ್ತನ್ನು ಹಿಂಪಡೆಯುವಂತೆ ಸಲ್ಲಿಸಿದ್ದ ಅರ್ಜಿಯನ್ನು ರದ್ದುಗೊಳಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಡಿಕೆ ಕದ್ದ ಕಳ್ಳ ಜೈಲಿಗೆ, ಆನೆ ಕದ್ದ ಕಳ್ಳ ಎಲ್ಲಿಗೆ?
ಆಗಸ್ಟ್ 2022ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅರ್ಜಿದಾರರಿಗೆ ಹೈಕೋರ್ಟ್ ಷರತ್ತುಗಳನ್ನು ವಿಧಿಸಿತ್ತು.
“ನಾವು ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ರದ್ದುಗೊಳಿಸಿದ್ದೇವೆ. ಇಂತಹ ಷರತ್ತನ್ನು ವಿಧಿಸುವುದು ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಹಾಗೂ ಇಂತಹ ಷರತ್ತುಗಳನ್ನು ವಿಧಿಸಬಾರದು ಎಂದು ಮಾ.22ರ ಆದೇಶದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿತ್ತು.
2022 ಆಗಸ್ಟ್ 11 ರಂದು ತಮ್ಮನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ವಿಧಿಸಿದ ಷರತ್ತನ್ನು ಮಾರ್ಪಡಿಸಬೇಕೆಂದು ಒಡಿಶಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ ಅರ್ಜಿದಾರರ ಮೇಲೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾರಣ ಕೊಲೆ ಯತ್ನ ಕೂಡ ನಡೆದಿದೆ. ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಷರತ್ತುಗಳನ್ನು ನಿರ್ಬಂರ್ಧಿಸುವುದು ಅಸಮರ್ಥನೀಯ. ಮೇಲ್ಮನವಿದಾರರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯುಂಟಾಗುತ್ತದೆ ಎಂದು ಹೈಕೋರ್ಟ್ ಷರತ್ತುಗಳ ತೆರವಿಗೆ ತಡೆಯೊಡ್ಡಿತ್ತು.
