ಈ ದಿನ ಸಮೀಕ್ಷೆ | ಮೋದಿ ಆಡಳಿತದಲ್ಲಿ ಕುಸಿದ ಭಾರತದ ಮಾನ್ಯತೆ, ಹೆಚ್ಚಾಗದ ಕೋಮು ಸಾಮರಸ್ಯ, ಬಡವರಿಗೆ ತಲುಪದ ಯೋಜನೆಗಳು

Date:


ಕಳೆದ
ಹತ್ತು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಮಾನ್ಯತೆ ಹೆಚ್ಚಾಗಿದೆ. ಭಾರತವನ್ನು ವಿಶ್ವವೇ ತಿರುಗಿ ನೋಡುವಂತಾಗಿದೆ. ಭಾರತ ವಿಶ್ವಗುರುವಾಗಿದೆ… ಎಂದು ಬಿಜೆಪಿ ಬೆಂಬಲಿತರು ಹೇಳುತ್ತಲೇ ಇದ್ದಾರೆ.

ಆದರೆ ಅಂಕಿ ಅಂಶಗಳು, ಸಮೀಕ್ಷೆಗಳು ಬೇರೆಯೇ ಹೇಳುತ್ತಿವೆ. ಮೋದಿ ಆಡಳಿತದಲ್ಲಿ ಭಾರತದ ಮಾನ್ಯತೆ ಕುಸಿದಿದೆ. ಕೋಮು ಸಾಮರಸ್ಯ ತೀರ ಕದಡಿದೆ. ಹಾಗೆಯೆ ಸರ್ಕಾರದ ಕಲ್ಯಾಣ ಯೋಜನೆಗಳು ಶೋಷಿತ ಸಮುದಾಯ ಸೇರಿದಂತೆ ಬಡವರಿಗೆ ತೀರ ಕಡಿಮೆ ಮಟ್ಟದಲ್ಲಿ ತಲುಪಿವೆ.

ಕರ್ನಾಟಕದಲ್ಲಿ ಈ ದಿನ.ಕಾಮ್‌ ಕೈಗೊಂಡ ಅಂತಿಮ ಸಮೀಕ್ಷೆ ಇವೆಲ್ಲವು ಬಹಿರಂಗಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಹೇಳುವ ಹಾಗೆ ಅಭಿವೃದ್ಧಿ ಕೇವಲ ಮಾಧ್ಯಮಗಳಲ್ಲಿ ಮಾತ್ರ ಎಂದು ರಾಜ್ಯದ ಜನತೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಶೋಷಿತ ಸಮುದಾಯಗಳು ಸೇರಿದಂತೆ ಬಡ ವರ್ಗದ ಜನತೆ ದಿನೇ ದಿನೇ ನಮ್ಮ ಕಷ್ಟ ಹೆಚ್ಚುತ್ತಿವೆ. ಯಾವುದೇ ಕೇಂದ್ರ ಸರ್ಕಾರದ ಯೋಜನೆಗಳು ನಮ್ಮನ್ನು ತಲುಪುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜನರು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಆದರೆ 2014 ರಿಂದ 2024ರವರೆಗೂ ಈ ರೀತಿಯ ಯಾವುದೇ ಪ್ರಗತಿ ಉಂಟಾಗಿಲ್ಲ ಎಂದು ಜನತೆ ಸರ್ಕಾರದಿಂದ ತಮಗಾದ ಅನುಭವವನ್ನು ಈದಿನ ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ. ದೇಶದ ಭದ್ರತೆಯೊಂದಿಗೆ ವಿವಿಧ ಧರ್ಮ, ಮತಗಳೊಡನೆ ಸಾಮರಸ್ಯತೆ ಹೆಚ್ಚಿಸಬೇಕಾದ ಕೇಂದ್ರ ಸರ್ಕಾರ ತನ್ನ ಬಲಪಂಥೀಯ ಧೋರಣೆಯೊಂದಿಗೆ ವಿವಿಧ ಜಾತಿ, ಧರ್ಮಗಳೊಡನೆ ವಿಷಬೀಜ ಬಿತ್ತಿ ಕೋಮು ಸಾಮರಸ್ಯವನ್ನು ಕಸಿಯುವ ಕೆಲಸ ಮಾಡುತ್ತಿದೆ ಎಂದು ಸಾರ್ವಜನಿಕರು ತಮ್ಮ ಹೃದಯದಲ್ಲಿರುವ ನೋವನ್ನು ಬಿಚ್ಚಿಟ್ಟಿದ್ದಾರೆ. ಇವೆಲ್ಲವೂ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.

ಈ ಸುದ್ದಿ ಓದಿದ್ದೀರಾ? 2024ರ ಚುನಾವಣೆ: ಈದಿನ ಅಂತಿಮ ಸಮೀಕ್ಷೆ

ವಿಶ್ವದಲ್ಲಿ ಕುಸಿದ ಭಾರತದ ಮಾನ್ಯತೆ

ಜಾಗತಿಕ ಮಟ್ಟದಲ್ಲಿ ಭಾರತದ ಮಾನ್ಯತೆ ತೀರ ಗಣನೀಯವಾಗಿ ಕುಸಿದಿದೆ ಎಂದು ಈ ದಿನ ಸಮೀಕ್ಷೆಯಲ್ಲಿ ಕರ್ನಾಟಕದ ಜನತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನಮ್ಮ ದೇಶಕ್ಕೆ ಕಳಂಕ ತಂದಿದ್ದಾರೆ ಎಂದು ಶೇ.16.25ರಷ್ಟು ಜನರು ತಿಳಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗುವ ರೀತಿಯಲ್ಲಿ ನಮ್ಮ ದೇಶ ಯಾವುದೇ ಶ್ರೇಷ್ಠತೆಯನ್ನು ಗಳಿಸಿಲ್ಲ ಎಂದು ಶೇ. 18.49 ರಷ್ಟು ಮಂದಿ ಹೇಳಿದ್ದಾರೆ. ಶೇ. 19.35 ರಷ್ಟು ಜನತೆ ಈ ವಿಷಯದಲ್ಲಿ ಸರ್ಕಾರದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಬಡವರಿಗೆ ತಲುಪದ ಸಮಾಜ ಕಲ್ಯಾಣ ಯೋಜನೆಗಳು      

ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳು ಕಳೆದ ಹತ್ತು ವರ್ಷದ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಆಡಳಿತದಲ್ಲಿ ದಲಿತರು, ಅಲ್ಪಸಂಖ್ಯಾತರು, ಒಬಿಸಿ ಒಳಗೊಂಡಂತೆ ಬಡ ವರ್ಗದ ಜನತೆಗೆ ತಲುಪಿಲ್ಲ. ಇವೆಲ್ಲ ಅಂಕಿಅಂಶಗಳು ಈದಿನ ಸಮೀಕ್ಷೆಯಲ್ಲಿ ವ್ಯಕ್ತವಾಗಿವೆ. ಕೇಂದ್ರ ಸರ್ಕಾರದ ಯೋಜನೆ ಕಡಿಮೆಯಾಗಿದೆ ಎಂದು ಶೇ.36.87 ಮಂದಿ ಹೇಳಿದ್ದಾರೆ. ಹಾಗೆಯೇ ಶೇ.22.83 ಮಂದಿ 10 ವರ್ಷದಲ್ಲಿ ಯಾವುದೇ ಪ್ರಗತಿ ಉಂಟಾಗಿಲ್ಲ ಎಂದು ತಿಳಿಸಿದ್ದಾರೆ. ಶೇ.13.72 ರಷ್ಟು ಜನತೆ ತಮ್ಮ ಅಭಿಪ್ರಾಯವನ್ನು ದಾಖಲಿಸಿಲ್ಲ.

ಕೋಮು ಸಾಮರಸ್ಯ ಹಾಳು

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕಳೆದ 10 ರ್ಷಗಳಿಂದ ಕೋಮು ಸಾಮರಸ್ಯ ಹಾಳಾಗುತ್ತಿದೆ. ಅಧಿಕಾರಕ್ಕಾಗಿ ಸರ್ಕಾರವು ಧರ್ಮ ಧರ್ಮಗಳು, ಜಾತಿ ಜಾತಿಗಳ ನಡುವೆ ವಿಷ ಬೀಜ ಭಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಸಾರ್ವಜನಿಕರು ತಮಗಾದ ಅನುಭವ ಮಾತ್ರವಲ್ಲದೆ ತಮ್ಮ ಅಕ್ಕಪಕ್ಕದ ಸ್ಥಳಗಳಲ್ಲಿ ನಡೆದ ಘಟನೆಯ ಬಗ್ಗೆಯೂ ಮೆಲುಕು ಹಾಕಿದ್ದಾರೆ. ಕೋಮು ಸಾಮರಸ್ಯ ಹಾಳಾಗಿದೆ ಎಂದು ಶೇ.26.74 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಹ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ ಎಂದು ಶೇ.22.08 ಮಂದಿ ತಿಳಿಸಿದ್ದಾರೆ. ಶೇ.17.97 ಮಂದಿ ಕೋಮು ಸಾಮರಸ್ಯದ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಿಲ್ಲ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಜಿ ಶಾಸಕ, ಶಿಕ್ಷಣ ಪ್ರೇಮಿ ಡಾ.ನಾಗರೆಡ್ಡಿ ಪಾಟೀಲ್ ನಿಧನ

ಕಲಬುರಗಿಯ ಜಿಲ್ಲೆಯ ಸೇಡಂ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಶಿಕ್ಷಣ ಪ್ರೇಮಿ...

ಚಾಮರಾಜನಗರ | ಮಳೆಗೆ ಬಾಳೆ ತೋಟ ನಾಶ; 25 ಕೋಟಿ ರೂ. ನಷ್ಟ!

ಚಾಮರಾಜನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ...

ಕಣದಿಂದ ಹಿಂದೆ ಸರಿದ ಇಂದೋರ್‌ ಕಾಂಗ್ರೆಸ್ ಅಭ್ಯರ್ಥಿ; ನೋಟಾದತ್ತ ಜನರ ಚಿತ್ತ!

ಇಂದೋರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ನಾಮಪತ್ರ...

ಬಿಜೆಪಿ ಬಾಗಿಲು ತೆರೆದರೂ ಹಿಂದಿರುಗಿ ಹೋಗಲ್ಲ: ಉದ್ಧವ್ ಠಾಕ್ರೆ

"ಬಿಜೆಪಿ 2022ರಲ್ಲಿ ತನ್ನ ಸರ್ಕಾರವನ್ನು 'ದ್ರೋಹ'ದಿಂದ ಉರುಳಿಸಿದೆ" ಎಂದು ಆರೋಪ ಮಾಡಿರುವ...