ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಪರಮಾಣು ಬಾಂಬ್ ಹಾಕುವುದಾಗಿ ಬೆದರಿಕೆಯೊಡ್ಡಿದ್ದ ಇಬ್ಬರು ಪ್ರಯಾಣಿಕರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಘಟನೆಯು ಏಪ್ರಿಲ್ 5 ರಂದು ನಡೆದಿದ್ದು,ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಪ್ರಯಾಣಿಕರನ್ನು ದರೋಡೆ ಮಾಡುತ್ತಿದ್ದ ನಾಲ್ವರನ್ನು ಇದೇ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತರು ಕಳೆದ ಕೆಲವು ದಿನದಿಂದ ಕಸ್ಟಮ್ಸ್ ಅಧಿಕಾರಿಗಳೆಂದು ಹೇಳಿಕೊಂಡು ವಯಸ್ಸಾದ ಪ್ರಯಾಣಿಕರನ್ನು ಗುರಿಯಾಗಿಸಿ ದರೋಡೆ ಮಾಡುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್
ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶ ಹಾಗೂ ಹೊರಗಿನ ದ್ವಾರದಲ್ಲಿ ಕಸ್ಟಮ್ಸ್ ಅಧಿಕಾರಿಗಳೆಂದು ಹೇಳಿಕೊಂಡು ಪ್ರಯಾಣಿಕರನ್ನು ದರೋಡೆ ಮಾಡುತ್ತಿದ್ದರು. ಈ ಘಟನೆ ಬೆಳಕಿದೆ ಬಂದ ನಂತರ ಸೌದಿ ಅರೇಬಿಯಾದ 50 ವರ್ಷದ ಪ್ರಯಾಣಿಕರೊಬ್ಬರು ವಂಚಕರ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರುದಾರ ಪ್ರಯಾಣಿಕರು ನಿಲ್ದಾಣದ ಟರ್ಮಿನಲ್-3 ಮೂಲಕ ವಾಪಸ್ ಬರುತ್ತಿದ್ದಾಗ ಆರೋಪಿಗಳು ತಾವು ಅಧಿಕಾರಿಗಳೆಂದು ಹೇಳಿಕೊಂಡು ಬ್ಯಾಗ್‌ಗಳನ್ನು ಪರಿಶೀಲಿಸಿದ್ದಾರೆ. ತಾವು ಕಳ್ಳಸಾಗಣೆ ಮಾಡುತ್ತಿದ್ದೀರೆಂದು ಚಿನ್ನವನ್ನು ದೋಚಿದ್ದರು. ನಂತರದಲ್ಲಿ ಇದೇ ಪ್ರಯಾಣಿಕರನ್ನು ಮೆಟ್ರೋ ನಿಲ್ದಾಣದಲ್ಲಿ ಎದುರುಗೊಂಡು ಹಣ, ಎರಡು ಮೊಬೈಲ್, ಪಾಸ್‌ಪೋರ್ಟ್ ಹಾಗೂ ಇನ್ನಿತರ ವಸ್ತುಗಳನ್ನು ಕಸಿದುಕೊಂಡಿದ್ದರು.
ಬೇರೆ ದರೋಡೆ ಪ್ರಕರಣಗಳ ಬಗ್ಗೆ ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
