ಮುರ್ಷಿದಾಬಾದ್‌ನ ರಾಣಾ ಗ್ರಾಮದಲ್ಲಿ ವಾಸಿಸುವ ಹನ್ನೊಂದು ಮಹಿಳೆಯರು 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬೆಹ್ರಾಂಪುರ ಲೋಕಸಭಾ ಅಭ್ಯರ್ಥಿ ಅಧೀರ್ ಚೌಧರಿ ಅವರನ್ನು ಬೆಂಬಲಿಸಿದ್ದು ತಮ್ಮ ಗೃಹ ಖರ್ಚಿನ ಹಣವನ್ನು ಜೋಪಾನ ಮಾಡಿ 11,000 ರೂಪಾಯಿ ದೇಣಿಗೆ ನೀಡಿದರು.
ತಮ್ಮ ಉಳಿತಾಯವನ್ನು ಒಟ್ಟುಗೂಡಿಸಿ ಈ ಮಹಿಳೆಯರು ಭಾನುವಾರ ಅಧೀರ್ ರಂಜನ್ ಚೌಧರಿ ಅವರ ಚುನಾವಣಾ ಪ್ರಚಾರಕ್ಕೆ 11,000 ರೂಪಾಯಿ ಕೊಡುಗೆ ನೀಡಿದರು.
#WATCH | Murshidabad, West Bengal: 11 women of Kandi town’s Ranagram village handed over a total of Rs 11,000 to Congress’ Behrampore Lok Sabha candidate Adhir Ranjan Chowdhury to help him in the Lok Sabha elections. The women collected the money from their household expenses,… pic.twitter.com/5QRnjldaUG
— ANI (@ANI) April 7, 2024
ಈ ಮಹಿಳೆಯರು ತಮ್ಮ ಮನೆ ಖರ್ಚಿನಲ್ಲಿ ಉಳಿಸಿದ, ಕೃಷಿ ಚಟುವಟಿಕೆಗಳಿಂದ, ಮೇಕೆ ಸಾಕಣೆಯಿಂದ ಗಳಿಸಿದ ಆದಾಯ ಇದಾಗಿದೆ. ಹಾಗೆಯೇ ಕೆಲವರು ಅವರ ಗಂಡಂದಿರು ಗಳಿಸಿದ ಒಂದು ದಿನದ ಕೂಲಿಯನ್ನು ದೇಣಿಗೆಯಾಗಿ ನೀಡಿದ್ದಾರೆ.
ಕಾಂಗ್ರೆಸ್ ಮಾರ್ಚ್ 21 ರಂದು ಲೋಕಸಭೆ ಚುನಾವಣೆಗೆ 56 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಅಧೀರ್ ಚೌಧರಿ ಅವರು 1999 ರಿಂದ ಪ್ರತಿನಿಧಿಸುತ್ತಿರುವ ಪಶ್ಚಿಮ ಬಂಗಾಳದ ಬರ್ಹಾಂಪೋರ್‌ನಿಂದಲೇ ಅವರನ್ನು ಈ ಬಾರಿ ಕಣಕ್ಕಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣೆಗೆ ಸ್ಪರ್ಧಿಸಲು ಮಮತಾ ಬ್ಯಾನರ್ಜಿ ಸಹಾಯ ನಮಗೆ ಬೇಡ: ಅಧೀರ್ ರಂಜನ್ ಚೌಧರಿ
ಪಶ್ಚಿಮ ಬಂಗಾಳದ 42 ಸಂಸದೀಯ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದ್ದು, ಇದು ಏಪ್ರಿಲ್ 19 ರಂದು ಪ್ರಾರಂಭವಾಗಿ ಜೂನ್ 1 ರಂದು ಮುಕ್ತಾಯಗೊಳ್ಳಲಿದೆ. ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) 22 ಸ್ಥಾನಗಳನ್ನು ಗಳಿಸಿದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯದ 42 ಸಂಸದೀಯ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಎರಡು ಕ್ಷೇತ್ರಗಳನ್ನು ಮಾತ್ರ ತಮ್ಮ ಪಾಲಾಗಿಸಿದೆ.