ದೆಹಲಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ದೇಶದಲ್ಲಿ ದಾಖಲಾದ ಸಾರ್ವಕಾಲಿಕ ದಾಖಲೆ ತಾಪಮಾನವಾಗಿದೆ. ತಾಪಮಾನ ಏರಿಕೆಯಾದಂತೆ ದೆಹಲಿಯಲ್ಲಿ ವಿದ್ಯುತ್ ಬಳಕೆಯೂ ಕೂಡಾ ಏರಿಕೆಯಾಗಿದೆ. ಅಧಿಕ ತಾಪಮಾನವಿದ್ದ ದೆಹಲಿಯಲ್ಲಿ ದಿಡೀರ್ ಹವಾಮಾನ ಬದಲಾಗಿದ್ದು, ಸದ್ಯ ಮೋಡ ಕವಿದ ವಾತಾವರಣವಿದೆ.
ತಾಪಮಾನ ಹೆಚ್ಚಾಗುತ್ತಿದ್ದಂತೆ ಜನರು ಅಧಿಕವಾಗಿ ಹವಾನಿಯಂತ್ರಣ (ಎಸಿ) ಬಳಕೆ ಮಾಡಲು ಆರಂಭಿಸಿದ್ದರು. ಪರಿಣಾಮ, ದೆಹಲಿಯಲ್ಲಿ ಸಾರ್ವಕಾಲಿಕ ವಿದ್ಯುತ್ ಬೇಡಿಕೆ 8,302 ಮೆಗಾವ್ಯಾಟ್ (MW) ದಾಖಲಾಗಿದೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Delhi: The highest temperature of 52.3°C was recorded at Mungeshpur AWS (Automatic weather station): Dr Kuldeep Srivastava, Head, Regional Weather Forecasting Centre, IMD
— ANI (@ANI) May 29, 2024
ಇದನ್ನು ಓದಿದ್ದೀರಾ? ರಾಜಸ್ಥಾನ| ಬಿಸಿಲಿನ ತಾಪಕ್ಕೆ ಮತ್ತೆ ಮೂವರು ಬಲಿ; ರೋಗಿಗಳ ಸಂಖ್ಯೆ 3,965ಕ್ಕೆ ಏರಿಕೆ
ಮರುಭೂಮಿಗಳ ರಾಜ್ಯವೆಂದೇ ಕರೆಯಲಾಗುವ ರಾಜಸ್ಥಾನದ ಫಲೋಡಿಯಲ್ಲಿ 50.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹರಿಯಾಣದ ಸಿರ್ಸಾದಲ್ಲಿ 50.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
#WATCH | Delhi: Sudden weather change in the National Capital as the sky is covered with clouds.
(Visuals from India Gate) pic.twitter.com/wd2E2BcueI
— ANI (@ANI) May 29, 2024
ದಕ್ಷಿಣ ರಾಜಸ್ಥಾನದ ಬಾರ್ಮರ್, ಜೋಧ್‌ಪುರ್, ಉದಯಪುರ, ಸಿರೋಹಿ ಮತ್ತು ಜಲೋರ್ ಜಿಲ್ಲೆಗಳಲ್ಲಿ ಇಂದು 4 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಕುಸಿತ ಕಂಡು ಬಂದಿದೆ.
ಇದನ್ನು ಓದಿದ್ದೀರಾ? ಭಾರತದ ಪ್ರಮುಖ 10 ನಗರಗಳಲ್ಲಿ ಬಿಸಿಗಾಳಿ ಹೆಚ್ಚಳ; ರೆಡ್ ಅಲರ್ಟ್ ಘೋಷಣೆ
ಇನ್ನು ಈಗಾಗಲೇ ರಾಜಸ್ಥಾನ, ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಮಧ್ಯಪ್ರದೇಶಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.
ಗುಜರಾತ್‌ನ ವಡೋದರಾದಲ್ಲಿ ಮೇ 22ರಿಂದ ಮೇ 27ರವರೆಗಿನ ಅವಧಿಯಲ್ಲಿ ಸುಮಾರು ಆರು ಮಂದಿ ಬಿಸಿಲಿನ ದಗೆಯಿಂದಾಗಿಯೇ ಸಾವನ್ನಪ್ಪಿದ್ದಾರೆ. 108 ತುರ್ತು ವೈದ್ಯಕೀಯ ಸೇವೆ ಸಹಾಯವಾಣಿಗೆ ಮೇ 21ರಿಂದ 100ಕ್ಕೂ ಅಧಿಕ ತಾಪಮಾನ ಸಂಬಂಧಿತ ಆರೋಗ್ಯ ಸಮಸ್ಯೆಯ ಕರೆಗಳು ಬಂದಿದೆ ಎಂದು ವರದಿಯಾಗಿದೆ.