‘ಯಾವುದು ಹಾಳಾಗಿಲ್ಲವೋ ಅದನ್ನು ಎಂದಿಗೂ ಸರಿಪಡಿಸಲು ಪ್ರಯತ್ನಿಸಬೇಡಿ’; ವಿದ್ಯಾರ್ಥಿನಿ ಪ್ರಾಚಿ ನಿಗಮ್

prachi nigam
prachi nigam

ಉತ್ತರಪ್ರದೇಶದ 10ನೇ ತರಗತಿಯ ಬೋರ್ಡ್‌ ಪರೀಕ್ಷೆಯಲ್ಲಿ 55 ಲಕ್ಷ ವಿದ್ಯಾರ್ಥಿಗಳಲ್ಲಿ ಪ್ರಾಚಿ ನಿಗಮ್‌ ಅಗ್ರಸ್ಥಾನ ಪಡೆದಿದ್ದಳು. ಆಕೆ ಗಮನಾರ್ಹ ಯಶಸ್ಸನ್ನ ಸಾಧಿಸಿದರೂ ಸಹ ಆಕೆಯ ಮುಖಚಹರೆಯ ಕಾರಣಕ್ಕಾಗಿ ಕೆಲವರು ಆಕೆಯನ್ನು ಟ್ರೋಲ್ ಮಾಡಿ ಅಪಹಾಸ್ಯ ಮಾಡಿದ್ದರು. ಆದರೂ, ಧೃತಿಗೆಡದ 16 ವರ್ಷದ ವಿದ್ಯಾರ್ಥಿನಿ ಮಹಿಳೆಯರಿಗೆ ಒಂದು ಸಂದೇಶ ರವಾನಿದ್ದಾಳೆ. ಅದೇನೆಂದರೆ, “ಆತ್ಮೀಯ ಮಹಿಳೆಯರೇ, ಯಾವುದು ಹಾಳಾಗಿಲ್ಲವೋ ಅದನ್ನು ಎಂದಿಗೂ ಸರಿಪಡಿಸುವ ಪ್ರಯತ್ನ ಮಾಡಬೇಡಿ”

ಹೌದು, ಭಾರತೀಯ ಖ್ಯಾತ ಸಂಗೀತಗಾರ ಅನೀಶ್ ಭಗತ್ ಅವರು ಯುಪಿ 10ನೇ ತರಗತಿಯ ಟಾಪರ್ ಪ್ರಾಚಿ ನಿಗಮ್ ಅವರನ್ನು ‘ಗ್ಲೋ ಅಪ್’ ವ್ಲಾಗ್‌ಗಾಗಿ ಭೇಟಿ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಶೇರ್ ಮಾಡಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ದುರದೃಷ್ಟವಶಾತ್, ಜನರ ಗಮನವು ಯುಪಿ ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದ ಪ್ರಾಚಿ ನಿಗಮ್ ಶೈಕ್ಷಣಿಕ ಯಶಸ್ಸಿನ ಮೇಲೆ ಇರಲಿಲ್ಲ. ಬದಲಾಗಿ ಆಕೆಯ ಮುಖದ ಮೇಲಿರುವ ಕೂದಲಿನಿಂದ ಹೆಚ್ಚಾಗಿ ಟ್ರೋಲ್‌ಗೆ ಒಳಗಾಗಿದ್ದಳು. ಹಲವರು ಆಕೆಯನ್ನು ಅಪಹಾಸ್ಯ ಮಾಡುತ್ತಿದ್ದರು. ಇನ್ನು ಕೆಲವು ರೇಜರ್ ಕಂಪನಿಗಳು ಆಕೆಯ ಹೆಸರು ಬಳಸಿಕೊಂಡು ಜಾಹೀರಾತು ನೀಡಲು ಆರಂಭಿಸಿದ್ದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸದ್ಯ ಇದೆಲ್ಲ ಟ್ರೋಲ್, ಟೀಕೆಗಳ ಹೊರತಾಗಿಯೂ ಪ್ರಾಚಿ ನಿಗಮ್ ಅವರು ‘ಗ್ಲೋ-ಅಪ್’ ವೀಡಿಯೊದಲ್ಲಿ ಮಹಿಳೆಯರಿಗೆ ಶಕ್ತಿಯುತ ಸಂದೇಶ ನೀಡಿದ್ದಾಳೆ. ಆಕೆಯನ್ನು ಸಂದರ್ಶಿಸಿರುವ ಅನೀಶ್ ಭಗತ್, “ನಾನು ಇವತ್ತು ಉತ್ತರ ಪ್ರದೇಶದ ಸೀತಾಪುರದ ಮೆಹಮುದಾಬಾದ್‌ ನಗರಕ್ಕೆ ತೆರಳುತ್ತಿದ್ದೇನೆ. ಅಲ್ಲಿ ನಾವೆಲ್ಲರೂ ಹೆಮ್ಮೆ ಪಡುವಂತಹ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲು ತೆರಳುತ್ತಿದ್ದೇನೆ. ಅವರು ತಮ್ಮ 10ನೇ ತರಗತಿಯಲ್ಲಿ 55 ಲಕ್ಷ ವಿದ್ಯಾರ್ಥಿಗಳಲ್ಲಿ ಟಾಪರ್‌ ಆಗಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

 

View this post on Instagram

 

A post shared by Anish Bhagat (@anishbhagatt)

ಆಕೆಯನ್ನು ಭೇಟಿ ಮಾಡಿದ ಭಗತ್ ಅವರು ಪ್ರಾಚಿಗೆ ಹೂವು ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು 10ನೇ ತರಗತಿಯ ಬೋರ್ಡ್ ಪರೀಕ್ಷೆಗಳ ನಂತರ ಆಕೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಆದವು. ಈ ವೇಳೆ, ಪ್ರಾಚಿ ಹಲವಾರು ಸಮಸ್ಯೆಗಳನ್ನು ಎದುರಿಸಿದರು. ಜನರು ಕ್ರಮೇಣ ಆಕೆಯ ಯಶಸ್ಸನ್ನು ಮರೆತು ಮುಖ ಚಹರೆ ಮೇಲೆ ಇದ್ದ ಕೂದಲಿಗೆ ಪ್ರಾಮುಖ್ಯತೆ ಕೊಟ್ಟು, ಟ್ರೋಲ್ ಮಾಡಿದರು. ಯಾಕೆ ಎಲ್ಲ ಮಹಿಳೆಯರು ತಮ್ಮ ಜೀವನದಲ್ಲಿ ಈ ರೀತಿಯ ಸಮಸ್ಯೆಯನ್ನು ಅನುಭವಿಸಬೇಕು ಎಂದು ಕೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ವಿಮಾನ ನಿಲ್ದಾಣ | ಶೌಚಾಲಯದ ಕನ್ನಡಿ ಮೇಲೆ ‘ಸ್ಫೋಟ ಮಾಡುವುದಾಗಿ’ ಬೆದರಿಕೆ ಸಂದೇಶ

ಮುಂದುವರೆದು ಭಗತ್ ಅವರು, ಪ್ರಾಚಿ ನಿಗಮ್ ಗ್ಲೋ ಅಪ್ ಮಾಡುತ್ತೇನೆ ಎಂದು ಹೇಳುತ್ತಾರೆ. ನೇಲ್‌ ಪಾಲಿಶ್ ಹಾಕಿ, ಮಸ್ಕರ್ ಹಾಕುವಂತೆ ಈ ವಿಡಿಯೋದಲ್ಲಿ ತೋರಿಸಲಾಗುತ್ತದೆ. ಆದರೆ, ಕೊನೆಗೆ ಪ್ರಾಚಿ ನಾನು ನಾನಾಗಿಯೇ ಇದೀನಿ ಎನ್ನುತ್ತಾಳೆ. ಅಲ್ಲದೇ, ಮಹಿಳೆಯರಿಗೆ ಒಂದು ಖಡಕ್ ಸಂದೇಶವನ್ನು ಕೂಡ ಈ ಸಮಯದಲ್ಲಿ ನೀಡಿದ್ದು, “ಆತ್ಮೀಯ ಮಹಿಳೆಯರೇ, ಯಾವುದು ಹಾಳಾಗಿಲ್ಲವೋ ಅದನ್ನು ಎಂದಿಗೂ ಸರಿ ಪಡಿಸುವ ಪ್ರಯತ್ನ ಮಾಡಬೇಡಿ” ಎಂದಿದ್ದಾಳೆ.

LEAVE A REPLY

Please enter your comment!
Please enter your name here