ಬಾಗಲಕೋಟೆ | ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

Date:

ಬಡವರು, ಮಧ್ಯಮ ವರ್ಗದ ಜನರ ಬದುಕಿನ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಯಿತು.

- Advertisement -

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಸಿದ್ದು ಸವದಿ ಅವರು, ಬಡವರು ದಿನನಿತ್ಯ ಬಳಕೆ ಮಾಡುವ ಆಹಾರ ಪದಾರ್ಥಗಳು, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತಷ್ಟು ಆರ್ಥಿಕ ಹೊರೆ ಬೀಳುವಂತಾಗಿದೆ. ಜನಪರ ಆಡಳಿತ ನೀಡಬೇಕಾದ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯುದ್ಧದ ನೆಪ, ಬೆಲೆ ಏರಿಕೆಯ ತಾಪ: ಅಸಲಿ ಕಾರಣಗಳೇನು?

ದೇಶವು ಚಿನ್ನ-ಬೆಳ್ಳಿಯಂತಹ ಲೋಹಗಳಿಗೆ ಆಮದನ್ನೇ ಹೆಚ್ಚಾಗಿ ನಂಬಿಕೊಂಡಿದೆ. ಒಂದೆಡೆ ಕಚ್ಚಾ ತೈಲ, ಇನ್ನೊಂದೆಡೆ ಬೆಲೆಬಾಳುವ ಲೋಹಗಳು- ಹೀಗೆ ಎರಡೂ ಕಡೆಯಿಂದ ಬೆಲೆ ಏರಿಕೆಯ ಒತ್ತಡ ಶುರುವಾಗಿದೆ. ಹಿಂದಿನ ರಷ್ಯಾ-ಉಕ್ರೇನ್ ಯುದ್ಧದ ಕಾಲಕ್ಕಿಂತ ಈಗಿನ...

ಸಮಾಜಕ್ಕೆ ಪ್ರಕೃತಿಯ ಸಮಾನತೆಯ ಪಾಠ ಹೇಳಿದ ಕನಕದಾಸರು ಮತ್ತವರ...

ಜನ್ಮದ ಆಧಾರದ ಮೇಲೆ ಮನುಷ್ಯನನ್ನು ತೂಗುವ ಸಮಾಜಕ್ಕೆ ಪ್ರಕೃತಿಯ ಸಮಾನತೆಯ ಪಾಠ ಹೇಳುತ್ತ, ಮನುಷ್ಯನ ವ್ಯಕ್ತಿಗತ ಅಹಂಕಾರವೇ ಸಮಸ್ತ ಅಧರ್ಮದ ಮೂಲವೆಂದು ಎಚ್ಚರಿಸುವ ಕನಕದಾಸರು, 'ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?'...

ಪುಸ್ತಕ ವಿವಾದಗಳ ಸುತ್ತ : ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು...

ಒಂದು ಪುಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಥವಾ ಗ್ರಂಥಾಲಯದ ಪಟ್ಟಿಯಿಂದ ಕೈಬಿಡುವುದು ಸಂಪೂರ್ಣ ನಿಷೇಧವಲ್ಲ; ಕಾನೂನಿನ ಚೌಕಟ್ಟಿನಲ್ಲಿ ಆರೋಪ ಮತ್ತು ಸತ್ಯಾಸತ್ಯತೆಗಳ ವಿಚಾರಣೆ ನಡೆದ ನಂತರವೇ ಅಂತಿಮ ತೀರ್ಮಾನವಾಗುತ್ತದೆ. ಯಾವುದೇ ಕೃತಿಯನ್ನು ನಿಷೇಧಿಸುವ...

ರಾಜ್ಯದ ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ನಡೆಸುವ ನೈತಿಕತೆ ಇಲ್ಲ. ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಇಂತಹ ಸರ್ಕಾರವನ್ನು ಅಧಿಕಾರದಿಂದ ತೊಲಗಿಸಬೇಕು ಎಂದು ಬಿಜೆಪಿ ಮುಖಂಡರು ಆಕ್ರೋಶಭರಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಜನಸಾಮಾನ್ಯರ ಜೀವನಕ್ಕೆ ಹೊರೆಯಾಗಿರುವ ಬೆಲೆ ಏರಿಕೆಯನ್ನು ತಕ್ಷಣ ನಿಯಂತ್ರಿಸಬೇಕು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಹಿತ ಕಾಪಾಡಬೇಕು ಹಾಗೂ ಜನವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀಶೈಲ ಬಿಳಗಿ. ಪ್ರವೀಣ ನಾಡಗೌಡರ. ಶಂಕರ ಕುಂಬಾರ. ಪ್ರಭು ಪೂಜಾರಿ. ನಿಂಗಪ್ಪ ನಾಯಕ ಪಾಂಡು ಯರಕಣ್ಣವರ. ಮಹದೇವ್ ಕೋಟ್ಯಾಳ. ಗೌರಿ ಮೀಳಿ. ಶ್ರೀಶೈಲ ಯಾದವಾಡ. ಶ್ರೀಮತಿ ದುರ್ಗವ್ವ ಹರಿಜನ. ಜಯಪ್ರಕಾಶ ಸೊಲ್ಲಾಪುರ.ಶಿವು ಅಂಗಡಿ ಮನೊಹರ ಶೀರೊಳ. ಮಹಾನಿಂಗ ಕುಳ್ಳೂಳಿ. ಬಸವರಾಜ. ಸಿದ್ದನಗೌಡ ಪಾಟೀಲ. ಪ್ರಭು ಮುಧೋಳ. ಶಂಕರ ಅಂಗಡಿ. ಶೇಖರ ಅಂಗಡಿ ಸೇರಿದಂತೆ ತೇರದಾಳ ಮತಕ್ಷೇತ್ರದ ಬಿಜೆಪಿ ಮುಖಂಡರು ಕಾರ್ಯಕರ್ತರು ಮತ್ತು ಮುಂತಾದವರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸಂವಿಧಾನ ದಿನಾಚರಣೆ, ಆಮ್ ಆದ್ಮಿ ಪಕ್ಷದ ಸಂಸ್ಥಾಪನಾ ದಿನ ಆಚರಣೆ

ಬೀದರ್ ನಗರದ ಆಮ್ ಆದ್ಮಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ...

ಪುಸ್ತಕ ವಿವಾದಗಳ ಸುತ್ತ : ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವೇದನೆಗಳ ಸಂಘರ್ಷ

ಒಂದು ಪುಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಥವಾ ಗ್ರಂಥಾಲಯದ ಪಟ್ಟಿಯಿಂದ ಕೈಬಿಡುವುದು...

ಬೆಳಗಾವಿ |ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವ್ಯಕ್ತಿಯ ಕೊಲೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ

ಹಳೇ ದ್ವೇಷದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬರನ್ನು...

₹18 ಲಕ್ಷ ಕೋಟಿ ಸಾಲ ರೈಟ್‌ಆಫ್: ದೇಶದ ಸಂಪತ್ತು ಯಾರಿಗಾಗಿ? ಜನರ ಬದುಕಿಗೋ, ಉದ್ಯಮಿಗಳ ಹಿತಾಸಕ್ತಿಗೋ?

ಒಂದು ಕಡೆ ರೈತರು ಸಾಲದ ಹೊರೆ ತಾಳಲಾರದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ವಿದ್ಯಾರ್ಥಿಗಳು...