ಯುದ್ಧದ ನೆಪ, ಬೆಲೆ ಏರಿಕೆಯ ತಾಪ: ಅಸಲಿ ಕಾರಣಗಳೇನು?

Date:

ದೇಶವು ಚಿನ್ನ-ಬೆಳ್ಳಿಯಂತಹ ಲೋಹಗಳಿಗೆ ಆಮದನ್ನೇ ಹೆಚ್ಚಾಗಿ ನಂಬಿಕೊಂಡಿದೆ. ಒಂದೆಡೆ ಕಚ್ಚಾ ತೈಲ, ಇನ್ನೊಂದೆಡೆ ಬೆಲೆಬಾಳುವ ಲೋಹಗಳು- ಹೀಗೆ ಎರಡೂ ಕಡೆಯಿಂದ ಬೆಲೆ ಏರಿಕೆಯ ಒತ್ತಡ ಶುರುವಾಗಿದೆ. ಹಿಂದಿನ ರಷ್ಯಾ-ಉಕ್ರೇನ್ ಯುದ್ಧದ ಕಾಲಕ್ಕಿಂತ ಈಗಿನ ಬೆಲೆ ಏರಿಕೆಯ ಬಿಸಿ ಹೆಚ್ಚು ವ್ಯಾಪಕವೂ ಹೌದು, ತೀವ್ರವೂ ಹೌದು ಎನ್ನುತ್ತದೆ RBI ವರದಿ. 

ಗ್ರಾಹಕರ ಬೆಲೆ ಸೂಚ್ಯಾಂಕ ನಮ್ಮ ದಿನನಿತ್ಯದ ಖರ್ಚು-ವೆಚ್ಚಗಳನ್ನು ಅಳೆಯುತ್ತದೆ. ಅದರಲ್ಲಿ ನಾವು ವಿದೇಶದಿಂದ ತರಿಸಿಕೊಳ್ಳುವ ವಸ್ತುಗಳ ಪಾಲು ಇರುವುದು ಕೇವಲ ಶೇ. 8.5 ಮಾತ್ರ. ಆದರೆ ಕಳೆದ ಅಕ್ಟೋಬರಿನ ಬೆಲೆ ಏರಿಕೆ ನೋಡಿದರೆ ಹಣದುಬ್ಬರಕ್ಕೆ ಈ ಆಮದು ವಸ್ತುಗಳೆ ಸುಮಾರು ಶೇಕಡ 18ರಷ್ಟು ಕಾರಣ. ಭಾರತೀಯ ರಿಸರ್ವ್ ಬ್ಯಾಂಕ್ (RBI) ತಜ್ಞರು ಸಿದ್ಧಪಡಿಸಿರುವ ಹೊಸ ವರದಿ ಇದನ್ನು ಹೇಳುತ್ತಿದೆ.

- Advertisement -

ಈ ಹಿಂದಿನ ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಿತ್ತು. ಆದರೆ ಅದಕ್ಕಿಂತ ಈಗಿನ ಪಶ್ಚಿಮ ಏಷ್ಯಾದ ಸಂಘರ್ಷದಿಂದ ತೈಲದ ಬೆಲೆ ಇನ್ನೂ ತೀವ್ರವಾಗಿ ಏರಿದೆ. ಆದರೆ ಒಂದು ಸಮಾಧಾನದ ಸಂಗತಿಯೆಂದರೆ, ನಮ್ಮ ದೇಶದಲ್ಲಿ ಈ ಬಾರಿ ಆ ಬೆಲೆ ಏರಿಕೆಯ ಬಿಸಿಯನ್ನು ಪೆಟ್ರೋಲ್, ಡೀಸೆಲ್ ದರಗಳಿಗೆ ಅಷ್ಟಾಗಿ ವರ್ಗಾಯಿಸಿಲ್ಲ. ಹಾಗಾಗಿ ಆಮದಿನಿಂದ ಆಗುತ್ತಿರುವ ಬೆಲೆ ಏರಿಕೆಯ ಒತ್ತಡ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಮಾಜಕ್ಕೆ ಪ್ರಕೃತಿಯ ಸಮಾನತೆಯ ಪಾಠ ಹೇಳಿದ ಕನಕದಾಸರು ಮತ್ತವರ...

ಜನ್ಮದ ಆಧಾರದ ಮೇಲೆ ಮನುಷ್ಯನನ್ನು ತೂಗುವ ಸಮಾಜಕ್ಕೆ ಪ್ರಕೃತಿಯ ಸಮಾನತೆಯ ಪಾಠ ಹೇಳುತ್ತ, ಮನುಷ್ಯನ ವ್ಯಕ್ತಿಗತ ಅಹಂಕಾರವೇ ಸಮಸ್ತ ಅಧರ್ಮದ ಮೂಲವೆಂದು ಎಚ್ಚರಿಸುವ ಕನಕದಾಸರು, 'ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?'...

ಪುಸ್ತಕ ವಿವಾದಗಳ ಸುತ್ತ : ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು...

ಒಂದು ಪುಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಥವಾ ಗ್ರಂಥಾಲಯದ ಪಟ್ಟಿಯಿಂದ ಕೈಬಿಡುವುದು ಸಂಪೂರ್ಣ ನಿಷೇಧವಲ್ಲ; ಕಾನೂನಿನ ಚೌಕಟ್ಟಿನಲ್ಲಿ ಆರೋಪ ಮತ್ತು ಸತ್ಯಾಸತ್ಯತೆಗಳ ವಿಚಾರಣೆ ನಡೆದ ನಂತರವೇ ಅಂತಿಮ ತೀರ್ಮಾನವಾಗುತ್ತದೆ. ಯಾವುದೇ ಕೃತಿಯನ್ನು ನಿಷೇಧಿಸುವ...

₹18 ಲಕ್ಷ ಕೋಟಿ ಸಾಲ ರೈಟ್‌ಆಫ್: ದೇಶದ ಸಂಪತ್ತು...

ಒಂದು ಕಡೆ ರೈತರು ಸಾಲದ ಹೊರೆ ತಾಳಲಾರದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣ ಸಾಲದ ಭಾರದಿಂದ ಉದ್ಯೋಗಕ್ಕಾಗಿ ಪರದಾಡುತ್ತಾರೆ. ಬಡ ಕುಟುಂಬಗಳು ಮನೆ ನಿರ್ಮಾಣದ ಕನಸಿಗಾಗಿ ಸಾಲ ಪಡೆದು ಕಂತು ಕಟ್ಟಲು ಹೆಣಗಾಡುತ್ತವೆ....

ಹಾಗೆ ನೋಡಿದರೆ, ಜಾಗತಿಕ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏರಿದಾಗಲೆಲ್ಲಾ ನಾವು ಆಮದು ಮಾಡಿಕೊಳ್ಳುವ ವಸ್ತುಗಳು ಸಹಜವಾಗಿಯೇ ತುಟ್ಟಿಯಾಗುತ್ತವೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಈ ಬೆಲೆ ಏರಿಕೆ ಬೇರೆ ಬೇರೆ ಕಾರಣಗಳಿಗೆ ಆಗುತ್ತಿವೆ. ಆರ್‌ಬಿಐನ ಆರ್ಥಿಕ ಸಂಶೋಧನಾ ವಿಭಾಗದ ಅಧಿಕಾರಿಗಳು ಹೇಳುವಂತೆ, ಈ ಬೆಲೆ ಏರಿಕೆ ಕೇವಲ ತಾತ್ಕಾಲಿಕವೇ ಅಥವಾ ದೀರ್ಘಕಾಲ ಕಾಡುವ ಸಮಸ್ಯೆಯೇ ಎಂಬುದನ್ನು ನಾವು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಸೂಕ್ತ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ.

ಇದನ್ನು ಓದಿದ್ದೀರಾ?: ಬಂಡವಾಳಶಾಹಿಯ ನಾಲ್ಕು ಕಟ್ಟುಕಥೆಗಳು ಮತ್ತು ನಮ್ಮ ಬದುಕಿನ ಬೆಲೆ

ವರದಿಯಲ್ಲಿ 2020ರಿಂದ ಇಲ್ಲಿಯವರೆಗಿನ ಬೆಲೆ ಏರಿಕೆಯ ಹಾದಿಯನ್ನು ಎರಡು ಮುಖ್ಯ ಹಂತಗಳಲ್ಲಿ ನೋಡುತ್ತದೆ.

ಮೊದಲ ಹಂತ– ತೈಲ ಮತ್ತು ಆಹಾರದ ಬಿಸಿ:

ಕೋವಿಡ್ ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಜಾಗತಿಕ ಮಟ್ಟದಲ್ಲಿ ಸರಕು ಸಾಗಣೆ ವ್ಯವಸ್ಥೆ ಏರುಪೇರಾಗಿತ್ತು. ಆಗ ಕಚ್ಚಾ ತೈಲ, ಅಡುಗೆ ಎಣ್ಣೆ ಮುಂತಾದವುಗಳ ಬೆಲೆ ಗಗನಕ್ಕೇರಿತ್ತು. ಇದರ ಪರಿಣಾಮವಾಗಿ 2021ರ ಮಧ್ಯದಿಂದ 2022ರ ಮಧ್ಯದವರೆಗೆ ನಮ್ಮಲ್ಲೂ ಆಮದು ವಸ್ತುಗಳು ಬಹಳ ತುಟ್ಟಿಯಾದವು. ಜೂನ್ 2021ರಲ್ಲಂತೂ ಆಮದು ವಸ್ತುಗಳ ಬೆಲೆ ಏರಿಕೆ ಶೇ. 19ಕ್ಕೆ ತಲುಪಿತ್ತು. ಇದರಿಂದಾಗಿ ದೇಶದ ಇಡೀ ಮಾರುಕಟ್ಟೆಯ ಬೆಲೆ ಏರಿಕೆಯ ದರವೂ ವಿಪರೀತವಾಯಿತು.

price rise1

ಎರಡನೇ ಹಂತ– ಚಿನ್ನ-ಬೆಳ್ಳಿಯ ಓಟ:

ಆದರೆ 2024 ಮತ್ತು 2025ರ ವೇಳೆಗೆ ಚಿತ್ರಣ ಬದಲಾಯಿತು. ಜಾಗತಿಕ ವ್ಯಾಪಾರದಲ್ಲಿ ಅನಿಶ್ಚಿತತೆ ಮೂಡಿತು. ಜೊತೆಗೆ ಆಮದು ಸುಂಕದ ಸಮಸ್ಯೆಗಳೂ ಹೆಚ್ಚಾದವು. ಸುರಕ್ಷತೆಯ ದೃಷ್ಟಿಯಿಂದ ಜನರು ಮತ್ತು ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನ, ಬೆಳ್ಳಿಯ ಮೇಲೆ ಹೆಚ್ಚೆಚ್ಚು ಬಂಡವಾಳ ಹೂಡತೊಡಗಿದವು. ಇದರಿಂದ ಅವುಗಳ ಬೆಲೆ ವಿಪರೀತವಾಗಿ ಏರಿತು. ಆ ಸಮಯದಲ್ಲಿ ಆಹಾರ ಮತ್ತು ಇಂಧನ ಬೆಲೆಗಳು ಹತೋಟಿಯಲ್ಲೇ ಇದ್ದವು. ಆದರೆ ಚಿನ್ನ-ಬೆಳ್ಳಿಯ ಬೆಲೆಗಳು ವಿಪರೀತ ಏರಿದ್ದರಿಂದ ಆಮದು ವಸ್ತುಗಳ ಬೆಲೆಯಲ್ಲಿ ಏರಿಕೆಯಾಯಿತು.

ಇದರ ಬೆನ್ನಲ್ಲೇ 2026ರಲ್ಲಿ ಪಶ್ಚಿಮ ಏಷ್ಯಾದ ಸಂಘರ್ಷ ಶುರುವಾಯಿತು. ಇದರಿಂದ ಕಚ್ಚಾ ತೈಲದ ಬೆಲೆ ಮತ್ತೆ ಏರತೊಡಗಿತು. ಪರಿಣಾಮವಾಗಿ, ಜೂನ್ 2026ರಲ್ಲಿ ನಮ್ಮ ಆಮದು ಹಣದುಬ್ಬರ ಶೇ. 15.3ಕ್ಕೆ ಜಿಗಿಯಿತು. ಅಕ್ಟೋಬರ್ ವೇಳೆಗೆ ಇದು ಶೇ. 11.9ಕ್ಕೆ ಇಳಿದಿದೆ ನಿಜ. ಆದರೆ ದೇಶದ ಒಟ್ಟಾರೆ ಬೆಲೆ ಏರಿಕೆಯ ದರಕ್ಕೆ (ಶೇ. 6.1) ಹೋಲಿಸಿದರೆ, ಇದು ಈಗಲೂ ತುಂಬಾ ಹೆಚ್ಚಾಗಿಯೇ ಇದೆ.

ವರದಿ ಗುರುತಿಸುವಂತೆ ರಷ್ಯಾ-ಉಕ್ರೇನ್ ಯುದ್ಧಕ್ಕೂ, ಈಗಿನ ಪಶ್ಚಿಮ ಏಷ್ಯಾ ಸಂಘರ್ಷಕ್ಕೂ ನಡುವೆ ಒಂದು ವ್ಯತ್ಯಾಸವಿದೆ. ಹಿಂದಿನ ಯುದ್ಧದ ಸಮಯದಲ್ಲಿ ಚಿನ್ನ, ಬೆಳ್ಳಿ, ಪ್ಲಾಟಿನಂ ಬೆಲೆಗಳು ಅಷ್ಟಾಗಿ ಏರಿರಲಿಲ್ಲ. ಆದರೆ ಈ ಬಾರಿ ಪಶ್ಚಿಮ ಏಷ್ಯಾ ಸಂಘರ್ಷ ಶುರುವಾಗುವ ಮುನ್ನವೇ ಇವುಗಳ ಬೆಲೆ ಏರತೊಡಗಿತು. ಈ ಏರಿಕೆ ನಂತರವೂ ಮುಂದುವರಿದಿದೆ.

ಇದನ್ನು ಓದಿದ್ದೀರಾ?: ರಾಜರ ಆಳ್ವಿಕೆಯ ವಿರೋಧ ಕೇವಲ ಟ್ರಂಪ್‌ಗೆ ಮಾತ್ರ ಸೀಮಿತವಲ್ಲ

ನಮ್ಮ ದೇಶವು ಚಿನ್ನ-ಬೆಳ್ಳಿಯಂತಹ ಲೋಹಗಳಿಗೆ ಆಮದನ್ನೇ ಹೆಚ್ಚಾಗಿ ನಂಬಿಕೊಂಡಿದೆ. ಹೀಗಾಗಿ ಒಂದೆಡೆ ಕಚ್ಚಾ ತೈಲ, ಇನ್ನೊಂದೆಡೆ ಬೆಲೆಬಾಳುವ ಲೋಹಗಳು- ಹೀಗೆ ಎರಡೂ ಕಡೆಯಿಂದ ಬೆಲೆ ಏರಿಕೆಯ ಒತ್ತಡ ಶುರುವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಹಿಂದಿನ ರಷ್ಯಾ-ಉಕ್ರೇನ್ ಯುದ್ಧದ ಕಾಲಕ್ಕಿಂತ ಈಗಿನ ಬೆಲೆ ಏರಿಕೆಯ ಬಿಸಿ ಹೆಚ್ಚು ವ್ಯಾಪಕವೂ ಹೌದು, ತೀವ್ರವೂ ಹೌದು ಎನ್ನುತ್ತದೆ ಆರ್‌ಬಿಐ ವರದಿ.

ಆದರೆ ಹಣದುಬ್ಬರಕ್ಕೆ ಕಾರಣವಾಗುವ ಇನ್ನೂ ಹಲವು ಅಂಶಗಳನ್ನು ಈ ವರದಿ ಗಮನಿಸಿಲ್ಲ. ಉದಾಹರಣೆಗೆ ಯುದ್ಧವನ್ನೇ ನೆಪ ಮಾಡಿಕೊಂಡು ದೊಡ್ಡ ಉದ್ದಿಮೆಗಳು ಬೆಲೆಗಳನ್ನು ಅತಿಯಾಗಿ ಹೆಚ್ಚಿಸಿದ್ದೂ(ಲಾಭಕೋರತನ) ಬೆಲೆ ಏರಿಕೆ ವಿಪರೀತವಾಗಲು ಒಂದು ಮುಖ್ಯ ಕಾರಣವಾಗಿದೆ.

ಕೃಪೆ: ಫೈನಾನ್ಸಿಯಲ್ ಎಕ್ಸ್‌ಪ್ರೆಸ್, ಕನ್ನಡಕ್ಕೆ: ಟಿ.ಎಸ್. ವೇಣುಗೋಪಾಲ್

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

₹18 ಲಕ್ಷ ಕೋಟಿ ಸಾಲ ರೈಟ್‌ಆಫ್: ದೇಶದ ಸಂಪತ್ತು ಯಾರಿಗಾಗಿ? ಜನರ ಬದುಕಿಗೋ, ಉದ್ಯಮಿಗಳ ಹಿತಾಸಕ್ತಿಗೋ?

ಒಂದು ಕಡೆ ರೈತರು ಸಾಲದ ಹೊರೆ ತಾಳಲಾರದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ವಿದ್ಯಾರ್ಥಿಗಳು...

ಏಪ್ರಿಲ್‌ನಿಂದ ವಿದ್ಯುತ್ ದರ ಯೂನಿಟ್‌ಗೆ 16–18 ಪೈಸೆ ಇಳಿಕೆ ಸಂಭವ

ರಾಜ್ಯದ ವಿದ್ಯುತ್ ಗ್ರಾಹಕರಿಗೆ 2027ರ ಏಪ್ರಿಲ್‌ನಿಂದ ದರ ಇಳಿಕೆಯ ಸಿಹಿಸುದ್ದಿ ಸಿಗುವ...

ದೇಶದ ಮೂರನೇ ಎರಡರಷ್ಟು ಹದಿಹರೆಯದವರಲ್ಲಿ ವಿಟಮಿನ್ ಬಿ12 ಕೊರತೆ: ಐಸಿಎಂಆರ್ ಸಮೀಕ್ಷೆ

ದೇಶದ ಸುಮಾರು ಮೂರನೇ ಎರಡರಷ್ಟು ಹದಿಹರೆಯದವರು ವಿಟಮಿನ್ ಬಿ12 ಕೊರತೆಯಿಂದ ಬಳಲುತ್ತಿದ್ದಾರೆ...

ವಿಜಯಪುರ |ಸ್ಥಳೀಯ ಸಂಸ್ಥೆಗಳ ಚುನಾವಣೆ ಗೊಂದಲ ನಿವಾರಣೆಗೆ ರಾಜ್ಯ ಚುನಾವಣೆ ಆಯೋಗಕ್ಕೆ ಮನವಿ

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳ ಕುರಿತು...