ಸಮಾಜಕ್ಕೆ ಪ್ರಕೃತಿಯ ಸಮಾನತೆಯ ಪಾಠ ಹೇಳಿದ ಕನಕದಾಸರು ಮತ್ತವರ ಧರ್ಮಪ್ರಜ್ಞೆ

Date:

ಜನ್ಮದ ಆಧಾರದ ಮೇಲೆ ಮನುಷ್ಯನನ್ನು ತೂಗುವ ಸಮಾಜಕ್ಕೆ ಪ್ರಕೃತಿಯ ಸಮಾನತೆಯ ಪಾಠ ಹೇಳುತ್ತ, ಮನುಷ್ಯನ ವ್ಯಕ್ತಿಗತ ಅಹಂಕಾರವೇ ಸಮಸ್ತ ಅಧರ್ಮದ ಮೂಲವೆಂದು ಎಚ್ಚರಿಸುವ ಕನಕದಾಸರು, 'ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?' ಎಂದು ಜಾತಿಮದವನ್ನು ನೇರವಾಗಿ ಚಂಡಾಡುತ್ತಾರೆ... ಆ ದಾರ್ಶನಿಕರ ಜಯಂತಿ ಇಂದು.

ಹದಿನಾರನೆಯ ಶತಮಾನದ ವಿಜಯನಗರ ಸಾಮ್ರಾಜ್ಯದ ಸಂಕೀರ್ಣ ಸಾಂಸ್ಕೃತಿಕ ಪರಿಸರದಲ್ಲಿ ಹೊರಹೊಮ್ಮಿದ ಕನಕದಾಸರ ಸಾಹಿತ್ಯವು, ಭಾರತೀಯ ಧರ್ಮಮೀಮಾಂಸೆಯ ಚರಿತ್ರೆಯಲ್ಲಿಯೇ ಒಂದು ಅಪೂರ್ವವಾದ ಮಾನವೀಯ ತಿರುವನ್ನು ಪ್ರತಿನಿಧಿಸುತ್ತದೆ. ಅವರ ಪಾಲಿಗೆ ಧರ್ಮವೆನ್ನುವುದು ಕೇವಲ ದೇವಾಲಯದ ಗರ್ಭಗುಡಿಗಳಿಗೋ, ಮಠ-ಮಾನ್ಯಗಳ ಶಾಸ್ತ್ರೀಯ ಕರ್ಮಕಾಂಡಗಳಿಗೋ ಅಥವಾ ಜನ್ಮಜನ್ಯ ಶ್ರೇಣೀಕರಣದ ವರ್ಣಾಶ್ರಮ ಕಟ್ಟುಪಾಡುಗಳಿಗೋ ಸೀಮಿತವಾದ ಜಡ ಸಂಹಿತೆಯಾಗಿರಲಿಲ್ಲ; ಬದಲಿಗೆ, ಅದು ಶೋಷಿತರ ಕಣ್ಣೀರೊರೆಸುವ ಕರುಣೆ, ಶ್ರಮದ ಘನತೆ ಮತ್ತು ಜೀವಪರತೆಯಿಂದ ತುಂಬಿ ತುಳುಕುವ ಒಂದು ಸಜೀವ ನೈತಿಕ ಶಕ್ತಿಯಾಗಿತ್ತು.

- Advertisement -

‘ಹರಿಭಕ್ತಿಸಾರ’ದಲ್ಲಿ ತಮ್ಮ ಅಂತರಂಗದ ಶರಣಾಗತಿಯನ್ನು ‘ದೀನ ನಾನು ಸಮಸ್ತ ಲೋಕಕೆ ದಾನಿ ನೀನು…’ ಎಂದು ಹಾಡುವ ಕನಕರು, ಕೇವಲ ಭಕ್ತಿಯ ರಸಪರವಶತೆಗೆ ಕರಗದೆ, ಸಮಾಜದ ಮಡಿವಂತಿಕೆಯ ಡಾಂಬಿಕತೆಯನ್ನು ತರ್ಕದ ಕಲ್ಲಿನ ಮೇಲೆ ತಿಕ್ಕಿ ನೋಡುತ್ತಾರೆ. ‘ತೊಲಗುವರು ಕಡೆಕಡೆಗೆ ತಾ ಹೊಲೆ ಹೊಲೆಯೆನುತ… ದೇಹದೊಳು ನೀ ನೆಲಸಿರಲು ಹೊಲೆಯುಂಟೆ’ ಎಂದು ಸವಾಲೆಸೆಯುವಾಗಲೂ, ‘ಎಂಜಲೆಂಜಲು ಎಂಬರಾ ನುಡಿ ಎಂಜಲಲ್ಲವೆ ವಾರಿ ಜಲಚರದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ’ ಎಂದು ನಿಸರ್ಗದ ಸಹಜತೆಯನ್ನೇ ಸಾಕ್ಷಿ ಮಾಡುವಾಗಲೂ, ಅವರು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆಯನ್ನು ಆಳದಿಂದ ಅಲುಗಾಡಿಸುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪುಸ್ತಕ ವಿವಾದಗಳ ಸುತ್ತ : ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು...

ಒಂದು ಪುಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಥವಾ ಗ್ರಂಥಾಲಯದ ಪಟ್ಟಿಯಿಂದ ಕೈಬಿಡುವುದು ಸಂಪೂರ್ಣ ನಿಷೇಧವಲ್ಲ; ಕಾನೂನಿನ ಚೌಕಟ್ಟಿನಲ್ಲಿ ಆರೋಪ ಮತ್ತು ಸತ್ಯಾಸತ್ಯತೆಗಳ ವಿಚಾರಣೆ ನಡೆದ ನಂತರವೇ ಅಂತಿಮ ತೀರ್ಮಾನವಾಗುತ್ತದೆ. ಯಾವುದೇ ಕೃತಿಯನ್ನು ನಿಷೇಧಿಸುವ...

₹18 ಲಕ್ಷ ಕೋಟಿ ಸಾಲ ರೈಟ್‌ಆಫ್: ದೇಶದ ಸಂಪತ್ತು...

ಒಂದು ಕಡೆ ರೈತರು ಸಾಲದ ಹೊರೆ ತಾಳಲಾರದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣ ಸಾಲದ ಭಾರದಿಂದ ಉದ್ಯೋಗಕ್ಕಾಗಿ ಪರದಾಡುತ್ತಾರೆ. ಬಡ ಕುಟುಂಬಗಳು ಮನೆ ನಿರ್ಮಾಣದ ಕನಸಿಗಾಗಿ ಸಾಲ ಪಡೆದು ಕಂತು ಕಟ್ಟಲು ಹೆಣಗಾಡುತ್ತವೆ....

ಸಂವಿಧಾನಕ್ಕೆ 77 ವರ್ಷ | ಸಂವಿಧಾನ ಸೋತಿದೆಯೇ?, ಅನುಷ್ಠಾನದಲ್ಲಿ...

26 ನವೆಂಬರ್ 1949. ಭಾರತದ ಇತಿಹಾಸದಲ್ಲಿ ಇದೊಂದು ಮಹತ್ವದ ಐತಿಹಾಸಿಕ ದಿನ. ಶತಮಾನಗಳ ಸಾಮಾಜಿಕ ಅಸಮಾನತೆ, ಶೋಷಣೆ, ದಮನ ಮತ್ತು ಅನ್ಯಾಯದ ವಿರುದ್ಧ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಸಹೋದರತ್ವದ ಆಧಾರದಲ್ಲಿ ಹೊಸ...

ಇಂತಹದ್ದೇ ಪ್ರಖರ ಸಾಮಾಜಿಕ ವಿವೇಕವು ಅವರ ‘ರಾಮಧಾನ್ಯ ಚರಿತ್ರೆ’ಯಲ್ಲಿ ಅದ್ಭುತ ರೂಪಕವಾಗಿ ಮೈದಾಳುತ್ತದೆ. ಯಾಗಶಾಲೆಗಳ ಮತ್ತು ಮೇಲ್ವರ್ಗದ ಭೋಜನದ ಆಡಂಬರವನ್ನೇ ತನ್ನ ಶ್ರೇಷ್ಠತೆಯೆಂದು ಬಣ್ಣಿಸುವ ಭತ್ತಕ್ಕೆ ಎದುರಾಗಿ, ಬಡವರ ಹಸಿವನ್ನು ನೀಗಿಸುವ ನರೆದಲೆಗನು ‘ಮಳೆದೆಗೆದು ಬೆಳೆಯಡಗಿ ಕ್ಷಾಮದ ವಿಲಯಕಾಲದೊಳನ್ನವಿಲ್ಲದೆ ಅಳಿವ ಪ್ರಾಣಿಗಳಾದರಿಸಿ ಸಲಹುವೆನು’ ಎಂದು ಎದೆತಟ್ಟಿ ನಿಲ್ಲುವಾಗ, ಕನಕದಾಸರು ಜನ್ಮಶ್ರೇಷ್ಠತೆಯ ಸಂಪ್ರದಾಯದ ಧರ್ಮವನ್ನು ಬದಿಗಿರಿಸಿ ಲೋಕೋಪಕಾರ ಮತ್ತು ಸಹಿಷ್ಣುತೆಯ ಹೊಸ ಧರ್ಮವನ್ನು ಮುನ್ನೆಲೆಗೆ ತರುತ್ತಾರೆ.

ಸಂಕಷ್ಟದ ಸೆರೆಮನೆಯಲ್ಲಿ ಭತ್ತವು ಕರಗಿ ಸೊರಗಿದರೆ, ರಾಗಿಯು ತನ್ನ ಆಂತರಿಕ ಸತ್ತ್ವದಿಂದ ಉಳಿದು, ಶ್ರೀರಾಮನಿಂದ ‘ರಾಘವ’ ಎಂಬ ಪವಿತ್ರ ಹೆಸರನ್ನು ಪಡೆದು ಗೌರವಿಸಲ್ಪಡುತ್ತದೆ. ಮೇಲ್ನೋಟಕ್ಕೆ ಇದು ಶೋಷಿತ ರಾಗಿಯ ಗೆಲುವನ್ನು ಸಂಭ್ರಮಿಸಿದಂತೆ ಕಂಡರೂ, ಈ ವಿಜಯ ಅಷ್ಟು ಸರಳವಾದದ್ದಲ್ಲ. ಇದು ಕ್ರಾಂತಿಕಾರಿ ಪಲ್ಲಟಕ್ಕಿಂತ ಹೆಚ್ಚಾಗಿ, ಸ್ಥಾಪಿತ ಅಧಿಕಾರ ವ್ಯವಸ್ಥೆಯ ಚೌಕಟ್ಟಿನಲ್ಲೇ ಮತ್ತು ಅದರ ಅನುಮತಿಯಿಂದಲೇ ಸಿಕ್ಕ ಮಾನ್ಯತೆಯಾಗಿದೆ. ಅಂಚಿನಲ್ಲಿರುವ ರಾಗಿಯ ಯೋಗ್ಯತೆಯನ್ನು ನಿರ್ಧರಿಸುವ ಮತ್ತು ಅದಕ್ಕೆ ನೈತಿಕ ಮುದ್ರೆ ಒತ್ತಿ ಪಾವಿತ್ರ್ಯ ನೀಡುವ ಅಧಿಕಾರವು ಕೇಂದ್ರದಲ್ಲಿರುವ ಸಾರ್ವಭೌಮ ರಾಮನ ಕೈಯಲ್ಲೇ ಉಳಿದಿರುತ್ತದೆ. ಅಂದರೆ, ಶೋಷಿತ ಸಮುದಾಯದ ಸಂಕೇತವಾದ ರಾಗಿಯು ತನ್ನ ಶ್ರೇಷ್ಠತೆಯನ್ನು ಸ್ವತಂತ್ರವಾಗಿ ಸ್ಥಾಪಿಸಿಕೊಳ್ಳಲಾಗದೆ, ಅಂತಿಮವಾಗಿ ಪ್ರಭುತ್ವದ ಮುಖ್ಯಸ್ಥನಿಂದಲೇ ಅದನ್ನು ಪ್ರಮಾಣೀಕರಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸಿಲುಕುತ್ತದೆ.

ಇದನ್ನು ಓದಿದ್ದೀರಾ?: ಸಂವಿಧಾನದ ಧ್ವನಿ ಜನರ ಧ್ವನಿಯಾಗಬೇಕು; ಅದರ ಆಶಯಗಳ ಸಾಕಾರಕ್ಕೆ ಜನಜಾಗೃತಿ ಅತ್ಯಗತ್ಯ: ಮಾಜಿ ಸಿಎಂ ಸಿದ್ದರಾಮಯ್ಯ

ಆದಾಗ್ಯೂ, ‘ದೇವರಿಗೆ ಪರಮಾನ್ನ ನೀ ಮನುಜಾವಳಿಗೆ ಪಕ್ವಾನ್ನವೀತನು’ ಎಂಬ ರಾಜಸಂಧಾನದ ಮೂಲಕ ವ್ಯವಸ್ಥೆಯನ್ನು ಸಾರಾಸಗಟಾಗಿ ಧ್ವಂಸ ಮಾಡದೆ, ಅದರ ಕಣ್ಣೆದುರೇ ಶ್ರಮಜೀವಿಗೆ ಸಮಾನ ಸ್ಥಾನವನ್ನು ಕಲ್ಪಿಸುವುದು ಕನಕರ ಕಾಲದ ರಾಜಕೀಯ ಮತ್ತು ಸಾಮಾಜಿಕ ಮಿತಿ-ಸಾಧ್ಯತೆಗಳೆರಡನ್ನೂ ಸೂಚಿಸುತ್ತದೆ.

ವ್ಯವಸ್ಥೆಯನ್ನು ಹೊರಗಿನಿಂದ ಉರುಳಿಸುವುದಕ್ಕಿಂತ ಒಳಗಿನಿಂದಲೇ ನೈತಿಕವಾಗಿ ಪರಿವರ್ತಿಸಬಯಸುವ ಇಂತಹ ಮಾನವೀಯ ಅಂತಃಕರಣವೇ ‘ನಳಚರಿತ್ರೆ’ಯಲ್ಲಿ ಇತಿಹಾಸದ ಚೌಕಟ್ಟನ್ನು ಮೀರಿ ಪ್ರಕಟವಾಗುತ್ತದೆ. ಕಾಡಿನಲ್ಲಿ ಹೆಬ್ಬಾವಿನ ಬಾಯಿಂದ ತನ್ನನ್ನು ರಕ್ಷಿಸಿ, ನಂತರ ಕಾಮಾತುರನಾಗಿ ಎರಗಿದ ಬೇಡನನ್ನು ಶಾಪದಿಂದ ಸುಡುವ ಬದಲು, ‘ಪ್ರಾಣ ಉಳಿಸಿದ ನೀನು ತಂದೆಗೆ ಸಮಾನ’ವೆಂದು ನುಡಿದು ಕಾಮವನ್ನು ಭಕ್ತಿಯನ್ನಾಗಿ ಪರಿವರ್ತಿಸುವ ದಮಯಂತಿಯ ಮೂಲಕ ಕನಕದಾಸರು ಪಾತಿವ್ರತ್ಯವನ್ನು ಕೇವಲ ಕಟ್ಟುಪಾಡಾಗಿ ನೋಡದೆ, ಹೃದಯಪರಿವರ್ತನೆಯ ಪರಮ ಧರ್ಮವನ್ನಾಗಿ ಉನ್ನತೀಕರಿಸುತ್ತಾರೆ.

‘ಮೋಹನತರಂಗಿಣಿ’ಯಲ್ಲಿ ಬ್ರಹ್ಮಾಂಡವನ್ನೇ ಪ್ರೇಮದ ಲೀಲೆಯಾಗಿ ಕಾಣುವ ಕವಿ, ತಮ್ಮ ಕೀರ್ತನೆಗಳಲ್ಲಿ ‘ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?’ ಎಂದು ಜಾತಿಮದವನ್ನು ನೇರವಾಗಿ ಚಂಡಾಡುತ್ತಾರೆ. ಜನ್ಮದ ಆಧಾರದ ಮೇಲೆ ಮನುಷ್ಯನನ್ನು ತೂಗುವ ಸಮಾಜಕ್ಕೆ ಪ್ರಕೃತಿಯ ಸಮಾನತೆಯ ಪಾಠ ಹೇಳುತ್ತ, ಮನುಷ್ಯನ ವ್ಯಕ್ತಿಗತ ಅಹಂಕಾರವೇ ಸಮಸ್ತ ಅಧರ್ಮದ ಮೂಲವೆಂದು ಎಚ್ಚರಿಸುವ ಅವರ ನಿಲುವು, ಮುಂಡಿಗೆಗಳ ಒಗಟಿನಲ್ಲಿ ದೇಹ-ಆತ್ಮಗಳ ನಿಗೂಢ ವೇದಾಂತಿಕ ಶೋಧನೆಯಾಗಿಯೂ ಹರಳುಗಟ್ಟುತ್ತದೆ. ಹೀಗೆ ಭಕ್ತಿ, ಕಾಯಕ, ಪ್ರತಿರೋಧ ಮತ್ತು ತತ್ತ್ವಜ್ಞಾನಗಳನ್ನು ಒಂದೇ ಸೂತ್ರದಲ್ಲಿ ಹೆಣೆದು, ಅನ್ಯಾಯವನ್ನು ಒಳಗಿನಿಂದಲೇ ನೈತಿಕವಾಗಿ ಕರಗಿಸಿ, ಕರುಣೆಯನ್ನೇ ಅಂತಿಮ ಧರ್ಮವನ್ನಾಗಿಸಿದ ಕನಕದಾಸರ ಈ ಜೀವಪರ ಧರ್ಮಪ್ರಜ್ಞೆಯು ಇಂದಿನ ಒಡಕಿನ ಜಗತ್ತಿಗೂ ಒಂದು ಸತ್ವಯುತ ದಾರಿದೀಪವಾಗಿದೆ.

Ravi sidlipura
ಡಾ. ರವಿ ಎಂ. ಸಿದ್ಲಿಪುರ
+ posts

ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿ, 'ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರ್ಯಾಯ' ಎಂಬ ವಿಮರ್ಶಾ ಲೇಖನಗಳ ಸಂಕಲನ, 'ಶಾಸನ ಓದು', 'ವಿಮರ್ಶೆ ಓದು' ಪುಸ್ತಕಗಳು ಪ್ರಕಟಗೊಂಡಿವೆ. ಯುದ್ಧ ಪರಿಕಲ್ಪನೆಯನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡ 'ಸಮರ ವ್ಯಾಪಾರ' ಎಂಬ ಪುಸ್ತಕ ಮುದ್ರಣ ಹಂತದಲ್ಲಿದೆ. ಶಾಸ್ತ್ರೀಯ ಕನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಡಾ. ರವಿ ಎಂ. ಸಿದ್ಲಿಪುರ
ಡಾ. ರವಿ ಎಂ. ಸಿದ್ಲಿಪುರ
ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿ, 'ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರ್ಯಾಯ' ಎಂಬ ವಿಮರ್ಶಾ ಲೇಖನಗಳ ಸಂಕಲನ, 'ಶಾಸನ ಓದು', 'ವಿಮರ್ಶೆ ಓದು' ಪುಸ್ತಕಗಳು ಪ್ರಕಟಗೊಂಡಿವೆ. ಯುದ್ಧ ಪರಿಕಲ್ಪನೆಯನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡ 'ಸಮರ ವ್ಯಾಪಾರ' ಎಂಬ ಪುಸ್ತಕ ಮುದ್ರಣ ಹಂತದಲ್ಲಿದೆ. ಶಾಸ್ತ್ರೀಯ ಕನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದಿನ ವಾರ ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡನೆ ಸಂಭವ

ಸಂಸತ್ತಿನ ಉಭಯ ಸದನಗಳನ್ನು ಮುಕ್ತಾಯಗೊಳಿಸದೆ ಅನಿರ್ದಿಷ್ಟಾವಧಿಗೆ ಮುಂದೂಡಿದ ನೂರು ದಿನಗಳಿಗೂ ಹೆಚ್ಚು...

ಹುಬ್ಬಳ್ಳಿ |ಬಸವಣ್ಣನವರ ಬಗ್ಗೆ ಅಪಪ್ರಚಾರ ಸಹಿಸುವುದಿಲ್ಲ; ರವಿ ಹಂಜ್ ವಿರುದ್ಧ ಕ್ರಮಕ್ಕೆ ಒತ್ತಾಯ

ವಿಶ್ವಗುರು ಬಸವಣ್ಣನವರು ಹಾಗೂ ಸಂವಿಧಾನದ ಕುರಿತು ಅವಹೇಳನಕಾರಿ ಮತ್ತು ಆಧಾರರಹಿತ ಹೇಳಿಕೆ...

ಬಾಗಲಕೋಟೆ |ಸಾಲದ ಅರ್ಜಿದಾರರನ್ನು ಬ್ಯಾಂಕ್‌ಗಳಿಗೆ ಅಲೆದಾಡಿಸಬೇಡಿ: ಗಜಾನನ ಬಾಲೆ

ಸರ್ಕಾರಿ ಯೋಜನೆಗಳಡಿ ಸಾಲ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳನ್ನು ಬ್ಯಾಂಕ್‌ಗಳಿಗೆ...

ಬೀದರ್‌ | ಸಂವಿಧಾನ ಪಾಲನೆ ಸರ್ವರ ಜವಾಬ್ದಾರಿ: ಎಸ್.ಎಂ.ಜನವಾಡಕರ್

ಭಾರತದ ಸಂವಿಧಾನಕ್ಕೆ ಜಗತ್ತಿನಲ್ಲಿಯೇ ವಿಶಿಷ್ಟ ಸ್ಥಾನ ಮತ್ತು ಮಹತ್ವವಿದೆ. ಬೃಹತ್ ಪ್ರಜಾಪ್ರಭುತ್ವ...