ಅಸ್ತಮ ಕಾಯಿಲೆಯಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅನಾರೋಗ್ಯದ ಆಧಾರದ ಮೇಲೆ ಜಾಮೀನು ಪಡೆಯಲು ಸಕ್ಕರೆ ಅಂಶ ಹೆಚ್ಚಿರುವ ಮಾವಿನ ಹಣ್ಣು, ಆಲೂ ಪುರಿ ಹಾಗೂ ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲದ ಅಧಿಕಾರಿಗಳು ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಕೇಜ್ರಿವಾಲ್ ಅವರ ವೈದ್ಯರ ಸಮಾಲೋಚನೆಯ ನೆರವಿನ ಅರ್ಜಿಯ ವಿಚಾರಣೆಗಾಗಿ ಆಗಮಿಸಿದ್ದ ಇ.ಡಿ ವಕೀಲರು ಕೋರ್ಟ್‌ಗೆ ತಿಳಿಸಿದರು.
ಅರವಿಂದ್ ಕೇಜ್ರಿವಾಲ್ ಅವರು ಯಾವ ಆಹಾರ ಸೇವಿಸುತ್ತಿದ್ದಾರೆ ಎಂದು ವರದಿ ನೀಡುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ಕೋರ್ಟ್ ಮಾಹಿತಿ ಕೇಳಿದೆ.
ಎರಡನೇ ಹಂತದ ಅಸ್ತಮ ರೋಗಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಯಾವ ಔಷಧಿಗಳನ್ನು ಸೇವಿಸುತ್ತಿದ್ದಾರೆ ಎನ್ನುವ ಮಾಹಿತಿ ಒದಗಿಸುವಂತೆ ಕೇಜ್ರಿವಾಲ್ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್‌ಗೆ ಮಾಹಿತಿ ನೀಡಿದ ಇ.ಡಿ ಅಧಿಕಾರಿಗಳು, ಕೇಜ್ರಿವಾಲ್ ಅವರಿಗೆ ಮನೆಯಿಂದ ತಯಾರಿಸಲಾಗಿರುವ ಆಹಾರವನ್ನು ನೀಡಲಾಗುತ್ತಿದ್ದು, ಜಾಮೀನು ಪಡೆಯುವುದಕ್ಕಾಗಿ ಹೆಚ್ಚು ಸಕ್ಕರೆ ಪದಾರ್ಥವಿರುವ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ದಾಖಲೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ
“ಕೇಜ್ರಿವಾಲ್ ಅವರು ಬೇಕಂತಲೇ ಸಕ್ಕರೆ ಹೆಚ್ಚಿರುವ ಬಾಳೆಹಣ್ಣು, ಸಿಹಿತಿಂಡಿ, ಪೂರಿ, ಆಲೂ ಸಬ್ಜಿ ಮುಂತಾದ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ. ಅಸ್ತಮ 2ನೇ ಹಂತದ ರೋಗಿಯಾಗಿರುವ ಅವರು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಈ ರೀತಿಯ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ” ಎಂದು ಇ.ಡಿ ಪರ ಹಾಜರಾಗಿದ್ದ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದರು.
“ಇದು ಆನಾರೋಗ್ಯಕ್ಕೆ ಕಾರಣವಾಗಿ ನ್ಯಾಯಾಲಯದಿಂದ ವೈದ್ಯಕೀಯ ಆಧಾರದ ಮೇಲೆ ಚಿಕಿತ್ಸೆ ಪಡೆಯುವ ಮಾರ್ಗವಾಗಿದೆ” ಎಂದು ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು.
ಏಪ್ರಿಲ್ 1 ರಂದು 139 ಎಂಜಿ ಯಷ್ಟಿದ್ದ ಕೇಜ್ರಿವಾಲ್ ಅವರ ಸಕ್ಕರೆ ಪ್ರಮಾಣ ಏಪ್ರಿಲ್ 14ರ ವೇಳೆಗೆ 276 ಎಂಜಿ ರಷ್ಟು ದಾಖಲಾಗಿದೆ ಎಂದು ಇ.ಡಿ ನ್ಯಾಯಾಲಯಕ್ಕೆ ದಾಖಲೆ ನೀಡಿತು.
ಇ.ಡಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕೇಜ್ರಿವಾಲ್ ವಕೀಲರು” ಸಕ್ಕರೆ ಕಾಯಿಲೆಯಿರುವ ಯಾರಾದರೂ ಈ ರೀತಿ ಮಾಡುತ್ತಾರೆಯೆ? ಎಂದರು.
ನ್ಯಾಯಾಲಯವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
