ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ “ನಾನು ಹಿಂದೂ ಎಂದು ನನ್ನನ್ನು ಬಂಧಿಸಿಲ್ಲ” ಎಂದು ಹೇಳಿದ್ದು, ಜೊತೆಗೆ ನ್ಯಾಯಾಧೀಶರುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2020ರಲ್ಲಿ ದೆಹಲಿ ಗಲಭೆಯ ನಂತರ ವಿವಾದಾತ್ಮಕ ಭಯೋತ್ಪಾದನಾ ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ 1967 ಅಡಿಯಲ್ಲಿ ದಾಖಲಿಸಲಾದ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಮತ್ತು ಇತರ ಕಾರ್ಯಕರ್ತರ ಪ್ರಕರಣಗಳಿಗೆ ಸಂಬಂಧಿಸಿದ ಪ್ರಕರಣದ ವಿಳಂಬಕ್ಕಾಗಿ ನ್ಯಾಯಾಂಗದ ವಿರುದ್ಧ ವಾಗ್ದಾಳಿ ನಡೆಸಿದರು.
ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಮುಸ್ಲಿಮರು ಎಂಬ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಆದರೆ ನಾನು ಹಿಂದೂ ಕುಟುಂಬದಲ್ಲಿ ಜನಿಸಿದ ಕಾರಣ ನನ್ನನ್ನು ಬಂಧಿಸಿಲ್ಲ ಎಂದು ಹೇಳಿದ್ದಾರೆ.
“ನಾನೂ ಕೂಡ ಚಳವಳಿಯ ಸಂದರ್ಭದಲ್ಲಿ ದನಿ ಎತ್ತಿದ್ದೆ ಮತ್ತು ಪ್ರತಿಭಟನಾಕಾರರಲ್ಲಿ ಒಬ್ಬಳಾಗಿದ್ದೆ. ಆದರೆ ನಾನು ಜೈಲಿಗೆ ಹೋಗಲಿಲ್ಲವೇಕೆ? ಏಕೆಂದರೆ ಕಾಕತಾಳೀಯವಾಗಿ, ನಾನು ಹಿಂದೂ ಕುಟುಂಬದಲ್ಲಿ ಜನಿಸಿದೆ. ಅದರಲ್ಲೂ ಸವರ್ಣೀಯರ ಕುಟುಂಬದಲ್ಲಿ ಜನಿಸಿದೆ. ನನ್ನನ್ನು ಕಂಬಿಗಳ ಹಿಂದೆ ಹಾಕುವುದು ಸೂಕ್ತವೆಂದು ಅವರಿಗೆ ಅನಿಸಿಲ್ಲ” ಎಂದು ಸ್ವರಾ ಭಾಸ್ಕರ್ ಹೇಳಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಇರದಿದ್ದರೆ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ: ಬಿಜೆಪಿಗೆ ಶಿವಸೇನೆ ನಾಯಕ ಸಂಜಯ್ ರಾವುತ್ ತಿರುಗೇಟು
“ನೀವು ಮುಸಲ್ಮಾನನನ್ನು ಭಯೋತ್ಪಾದಕ ಎಂದು ಹೇಳಬಹುದು. ಆದರೆ ಹಿಂದೂ, ಮಾಜಿ ನೌಕಾಪಡೆಯ ಅಧಿಕಾರಿಯ ಮಗಳನ್ನು ಭಯೋತ್ಪಾದಕಿ ಎಂದು ಹೇಳುವುದು ಸ್ವಲ್ಪ ಜಾಸ್ತಿ ಎನಿಸಿಬಹುದು” ಎಂದು ವ್ಯವಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಜೈಲು ಸೇರಿರುವ ಕಾರ್ಯಕರ್ತರ ಜಾಮೀನು ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಅಮಿತ್ ಶರ್ಮಾ ವಿರುದ್ಧವೂ ಸ್ವರಾ ವಾಗ್ದಾಳಿ ನಡೆಸಿದ್ದಾರೆ. “ನೀವು ವಿಚಾರಣೆ ನಡೆಸಲು ಏಕೆ ಸಾಧ್ಯವಿಲ್ಲ? ನೀವು ಶಿಕ್ಷಣ ಪಡೆದವರಲ್ಲವೇ? ನಾವು ಪಾವತಿ ಮಾಡುವ ತೆರಿಗೆಯಿಂದ ನೀವು ವೇತನ ಪಡೆಯುತ್ತೀರಿ. ಹಾಗಾದರೆ ನಿಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಹೇಗೆ ನಿಮಗೆ ಹಕ್ಕಿದೆ? ಹೀಗೆ ಮಾಡುವುರಿಂದ ನೀವು ದೇಶದ ಜನರಿಗೆ ದ್ರೋಹ ಮಾಡುತ್ತಿಲ್ಲವೇ” ಎಂದು ಪ್ರಶ್ನಿಸಿದರು.
ಸ್ವರಾ ಭಾಸ್ಕರ್ ಭಾಷಣಕ್ಕೆ ಜನಸಮೂಹದಿಂದ ಚಪ್ಪಾಳೆ ಸುರಿಮಳೆ ಕೇಳಿಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋಗೆ ಮಿಶ್ರಾ ಪ್ರತಿಕ್ರಿಯೆ ವ್ಯಕ್ತವಾಗಿದೆ.
Many Muslim youths including Umar Khalid, Sharjeel Imam etc are in jail for the last 4 years in Delhi Riot cases..I also protested but they have not arrested me. Why? Just because I am a hindu. CJI has time for Ganesh Puja with Modi but no time to hear their cases: Swara Bhaskar pic.twitter.com/D4Ff2n9KdQ
— Megh Updates 🚨™ (@MeghUpdates) September 18, 2024
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ 2019ರ ಅಂತ್ಯದಲ್ಲಿ ಮತ್ತು 2020ರ ಆರಂಭದಲ್ಲಿ ದೆಹಲಿಯಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ತೀವ್ರ ಘರ್ಷಣೆಯಲ್ಲಿ 53 ಜನರು ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಖಾಲಿದ್, ಇಮಾಮ್ ಮತ್ತು ಇತರರು ಸೇರಿದಂತೆ ಹಲವಾರು ಜನರನ್ನು ಗಲಭೆಯ ‘ಮಾಸ್ಟರ್ಮೈಂಡ್ಗಳು’ ಎಂದು ಆರೋಪಿಸಲಾಗಿದೆ. ದೇಶದ್ರೋಹದ ಜೊತೆಗೆ ವಿವಾದಾತ್ಮಕ ಯುಎಪಿಎ ಕಾಯ್ದೆಯ ಆರೋಪಗಳನ್ನು ಹೊರಿಸಲಾಗಿದೆ.
ಇಮಾಮ್ ಅವರನ್ನು ಜನವರಿ 2020ರಲ್ಲಿ ಬಂಧಿಸಲಾಗಿದೆ. ಆದರೆ 2024ರ ಮೇ ತಿಂಗಳಲ್ಲಿ ದೇಶದ್ರೋಹ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲಾಗಿದೆ. ಮತ್ತೊಂದೆಡೆ, ಖಾಲಿದ್ ಅವರನ್ನು 2020ರ ಸೆಪ್ಟೆಂಬರ್ನಲ್ಲಿ ಬಂಧಿಸಲಾಗಿದೆ. ಇನ್ನೂ ಕೂಡಾ ಜಾಮೀನು ಅರ್ಜಿಯ ವಿಚಾರಣೆ ನಡೆದಿಲ್ಲ.
