ಕೇಂದ್ರ ಸರ್ಕಾರ ಸಬ್ಸಿಡಿಯನ್ನು ಕಡಿತಗೊಳಿಸಿದ ಪರಿಣಾಮ ಗುರುವಾರದಿಂದ (ಜೂನ್ 1) ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ.
ಕೇಂದ್ರದ ಭಾರೀ ಕೈಗಾರಿಕೆಗಳ ಸಚಿವಾಲಯವು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ನೀಡುತ್ತಿದ್ದ ಫೇಮ್-2 (ಫಾಸ್ಟರ್ ಅಡಾಪ್ಷನ್, ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ & ಹೈಬ್ರಿಡ್ ವೆಹಿಕಲ್ಸ್ ಇನ್ ಇಂಡಿಯಾ ಸ್ಕೀಮ್) ಸಬ್ಸಿಡಿಯನ್ನು ಕಡಿತಗೊಳಿಸಿದೆ. ಈ ಮಹತ್ವದ ನಿರ್ಧಾರದಿಂದಾಗಿ ಎಲೆಕ್ಟ್ರಿಕ್ ವಾಹನಗಳ ದರದಲ್ಲಿ ಭಾರೀ ಬದಲಾವಣೆಯಾಗಲಿದೆ.
ಕೇಂದ್ರವು ಗರಿಷ್ಠ ಸಬ್ಸಿಡಿ ಮಿತಿಯನ್ನು ಶೇ.40ರಿಂದ ಶೇ.15ಕ್ಕೆ ಇಳಿಸಿದೆ. ಫೇಮ್-2 ಅಡಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ನೀಡಿರುವ 15,000 ರೂಪಾಯಿ ಸಬ್ಸಿಡಿಯನ್ನು ಇದೀಗ 10,000 ರೂಪಾಯಿಗೆ ಕಡಿತಗೊಳಿಸಲಾಗಿದೆ. ಹೀಗಾಗಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕನಿಗೆ 5,000 ರೂಪಾಯಿ ಹೊರೆಯಾಗಲಿದೆ. ಎಕ್ಸ್ ಶೋ ರೂಂ ಬೆಲೆ ಮೇಲೆ ಗರಿಷ್ಠ 15 ಶೇಕಡಾ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಓಲಾ ಎಲೆಕ್ಟ್ರಿಕ್, ಏಥರ್ ಎನರ್ಜಿ, ಬಜಾಜ್ ಆಟೋ ಸೇರಿದಂತೆ ಪ್ರಮುಖ ಇವಿ ತಯಾರಕರು ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ಗಳ ಬೆಲೆ ರೂ.25,000ದಿಂದ ರೂ.35,000ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
ಈ ಸುದ್ದಿ ಓದಿದ್ದೀರಾ?: ಲೋಕಸಭೆಯಿಂದ ವಜಾಗೊಳ್ಳುವ ಕಲ್ಪನೆಯೂ ಇರಲಿಲ್ಲ : ರಾಹುಲ್ ಗಾಂಧಿ
ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳು ಕೇಂದ್ರ ಸರ್ಕಾರದ ಸಬ್ಸಿಡಿ ಕಡಿತ ನಿರ್ಧಾರವನ್ನು ವಿರೋಧಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಇಂಧನ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಮಾರಾಟ ಅತೀ ಕಡಿಮೆ. ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿ ಕಡಿತಗೊಳಿಸಿದರೆ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ. ಇದರಿಂದ ಎಲಕ್ಟ್ರಿಕ್ ವಾಹನ ಮಾರಾಟ ಮತ್ತಷ್ಟು ಕುಸಿತಗೊಳ್ಳಲಿದೆ ಎಂದು ಎಲೆಕ್ಟ್ರಿಕ್ ವಾಹನ ಕಂಪನಿಗಳು ಹೇಳಿವೆ.
ಎಲೆಕ್ಟ್ರಿಕ್ ಸ್ಕೂಟರ್‌ಗಳ ಪ್ರಸ್ತುತ ಬೆಲೆಗಳು
ಪ್ರಸ್ತುತ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ರೂ. 98,079 ರಿಂದ ರೂ. 1.28 ಲಕ್ಷದವರೆಗೆ ಇದೆ. ಬಜಾಜ್ ಚೇತಕ್ ಬೆಲೆ ರೂ. 1.22 ಲಕ್ಷದಿಂದ ರೂ. 1.52 ಲಕ್ಷ, ಟಿವಿಎಸ್ ಐಕ್ಯೂಬ್ ಬೆಲೆ ರೂ. 1.06 ಲಕ್ಷ, ಓಲಾ ಎಸ್1 ಏರ್ ಬೆಲೆ ರೂ. 1.06 ಲಕ್ಷ, ಓಲಾ ಎಸ್1 ಏರ್ ಮತ್ತು ಎಸ್ 1 ಗೆ 91 ಲಕ್ಷ ಮತ್ತು ರೂ. 1.25 ಲಕ್ಷ ಇದೆ. (ಎಕ್ಸ್ ಶೋ ರೂಂ ದೆಹಲಿ).