E20 ಇಂಧನ ವಿವಾದ: ಕಾರು ಮಾಲೀಕರಿಗೆ ಮೋಸ ಮಾಡಿದ ಕಂಪನಿಗೆ ಗ್ರಾಹಕರ ಕೋರ್ಟ್‌ ಬಿಗ್ ಶಾಕ್!

Date:

ಭಾರತದಲ್ಲಿ ಇಂಧನ ಪೂರೈಕೆಯಲ್ಲಿ ಎಥೆನಾಲ್ ಮಿಶ್ರಣ (E20) ಕಡ್ಡಾಯವಾಗುತ್ತಿರುವ ಹೊತ್ತಲ್ಲೇ, ಛತ್ತೀಸ್‌ಗಢ ರಾಜ್ಯದ ರಾಯ್‌ಪುರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಕಾರು ತಯಾರಿಕಾ ಕಂಪನಿಯೊಂದಕ್ಕೆ ಶಾಕ್ ನೀಡಿದೆ. E20 ಇಂಧನಕ್ಕೆ ಹೊಂದಿಕೆಯಾಗದ ವಾಹನವನ್ನು ಮಾರಾಟ ಮಾಡಿದ್ದಲ್ಲದೆ, ಹಳೆಯ ವಾಹನವನ್ನು ಹೊಸದು ಎಂದು ನಂಬಿಸಿ ಮಾರಾಟ ಮಾಡಿದ ಆರೋಪದ ಮೇಲೆ, ಪ್ರಮುಖ ವಾಹನ ತಯಾರಕ ಕಂಪನಿ ಮತ್ತು ಅದರ ಸ್ಥಳೀಯ ಡೀಲರ್‌ಗೆ ಕಾರನ್ನು ಬದಲಾಯಿಸಲು ಅಥವಾ ಸಂಪೂರ್ಣ ಹಣವನ್ನು ಮರುಪಾವತಿಸಲು ನ್ಯಾಯಾಲಯ ಆದೇಶಿಸಿದೆ.

- Advertisement -

ಏನಿದು ಪ್ರಕರಣ?: ರಾಯ್‌ಪುರದ ವೈದ್ಯ ಡಾ. ಪ್ರೇಮ್‌ರಾಜ್ ದೇವತಾ ಅವರು ಅಧಿಕೃತ ಡೀಲರ್ ಮೂಲಕ ಗ್ರ್ಯಾಂಡ್‌ ವಿಟಾರಾದ ಹೈಬ್ರಿಡ್ ಕಾರೊಂದನ್ನು ಖರೀದಿಸಿದ್ದರು. ನೋಂದಣಿ ಶುಲ್ಕ ಮತ್ತು ವಿಮೆ ಸೇರಿದಂತೆ ಒಟ್ಟು 20,50,494 ರೂಪಾಯಿಗಳನ್ನು ಪಾವತಿಸಿದ್ದರು. ಆದರೆ, ವಾಹನವು 21,913 ಕಿ.ಮೀ ಕ್ರಮಿಸಿದ ನಂತರ ಪದೇ ಪದೇ ಕೆಟ್ಟು ನಿಲ್ಲಲು ಆರಂಭಿಸಿತು. 2024ರ ನವೆಂಬರ್ 11ರಂದು ಎಂಜಿನ್ ಮಾಲ್ ಫಂಕ್ಷನ್ ಅಲರ್ಟ್ ಬಂದು ಕಾರು ಸ್ಥಗಿತಗೊಂಡಿತು. ಈ ವೇಳೆ ಡೀಲರ್ ಬಳಿಗೆ ಕಾರನ್ನು ಐದು ಬಾರಿ ಕೊಂಡೊಯ್ದರೂ ಪ್ರಯೋಜನವಾಗಲಿಲ್ಲ. ಆರಂಭದಲ್ಲಿ, “ಇಂಧನದಲ್ಲಿ ಕಲಬೆರಕೆ ಇದೆ” ಎಂದು ಕಂಪನಿಯು ಸಬೂಬು ನೀಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ತನಿಖೆಯಲ್ಲಿ ಇಂಧನವು E20 ಆಗಿರುವುದು ದೃಢಪಟ್ಟಿತು. ಆದರೆ, ಕಂಪನಿ ಮಾರಾಟ ಮಾಡಿದ್ದ ವಾಹನದ ಎಂಜಿನ್ E20 ಇಂಧನವನ್ನು ಬೆಂಬಲಿಸುವುದಿಲ್ಲ ಎಂಬುದು ದಾಖಲೆಗಳಿಂದ ಸಾಬೀತಾಯಿತು. ಅಲ್ಲದೆ, ಗ್ರಾಹಕರಿಗೆ 2024ರ ಜೂನ್‌ನಲ್ಲಿ ಮಾರಾಟ ಮಾಡಿದ್ದ ಕಾರು ವಾಸ್ತವವಾಗಿ 2023ರ ಜನವರಿಯಲ್ಲಿ ಉತ್ಪಾದನೆಯಾಗಿದ್ದ ಹಳೆಯ ಸ್ಟಾಕ್ ಎಂಬುದು ಬೆಳಕಿಗೆ ಬಂತು. ಅಂದರೆ, ಒಂದೂವರೆ ವರ್ಷ ಹಳೆಯ ವಾಹನವನ್ನು ಹೊಸ ಕಾರಿನ ದರದಲ್ಲಿ ಮಾರಾಟ ಮಾಡಲಾಗಿತ್ತು. ಇದು ಸೇವಾ ನ್ಯೂನತೆ ಮತ್ತು ಮೋಸದ ವ್ಯಾಪಾರ ಪದ್ಧತಿ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ತೇವಾಂಶ ಹೀರುವ ಎಥೆನಾಲ್ ಗುಣವೇ ಪೆಟ್ರೋಲ್ ಮಾಲಿನ್ಯಕ್ಕೆ ಕಾರಣ: ಕಂಗೆಟ್ಟ ಬಂಕ್‌ ಮಾಲೀಕರು

ಆಯೋಗದ ಅಧ್ಯಕ್ಷ ಪ್ರಶಾಂತ್ ಕುಂಡು ಮತ್ತು ಸದಸ್ಯ ಡಾ. ಆನಂದ್ ವರ್ಗೀಸ್ ಅವರಿದ್ದ ಪೀಠವು ಜುಲೈ 14ರಂದು ಈ ಮಹತ್ವದ ತೀರ್ಪು ನೀಡಿದೆ. ದೋಷಯುಕ್ತ ವಾಹನವನ್ನು ವಾಪಸ್ ಪಡೆದು, 45 ದಿನಗಳ ಒಳಗೆ E20 ಎಂಜಿನ್ ಹೊಂದಿರುವ ಅದೇ ಮಾದರಿಯ ಹೊಸ ಕಾರನ್ನು ನೀಡಬೇಕು. ಒಂದು ವೇಳೆ ಹೊಸ ಕಾರು ನೀಡಲು ವಿಫಲವಾದರೆ, ನೋಂದಣಿ ಮತ್ತು ವಿಮೆ ಸೇರಿದಂತೆ ಒಟ್ಟು 20,50,494 ರೂಪಾಯಿಗಳನ್ನು ಗ್ರಾಹಕರಿಗೆ ಮರುಪಾವತಿಸಬೇಕು. ಮಾನಸಿಕ ಕಿರುಕುಳಕ್ಕಾಗಿ 1 ಲಕ್ಷ ರೂಪಾಯಿ ಮತ್ತು ಕಾನೂನು ಹೋರಾಟದ ಖರ್ಚಿಗಾಗಿ 10,000 ರೂಪಾಯಿಗಳನ್ನು 45 ದಿನಗಳ ಒಳಗೆ ಪಾವತಿಸಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ, ಆದೇಶದ ದಿನಾಂಕದಿಂದ ಪಾವತಿಯಾಗುವವರೆಗೆ ವಾರ್ಷಿಕ ಶೇ. 7ರಷ್ಟು ಬಡ್ಡಿಯನ್ನು ವಿಧಿಸಲಾಗುವುದು ಎಂದು ತೀರ್ಪು ನೀಡಿದೆ.

ಈ ತೀರ್ಪು E20 ಇಂಧನದ ಕುರಿತು ವಾಹನ ತಯಾರಕರು ಮತ್ತು ಗ್ರಾಹಕರ ನಡುವೆ ಉಂಟಾಗಿರುವ ಗೊಂದಲಕ್ಕೆ ಹೊಸ ಆಯಾಮ ನೀಡಿದ್ದು, ಗ್ರಾಹಕರ ಹಕ್ಕುಗಳನ್ನು ಎತ್ತಿಹಿಡಿದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...