ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ಅನುಚಿತ, ನ್ಯಾಯಸಮ್ಮತವಲ್ಲದ ಹಾಗೂ ಘನತೆಗೆ ಕುಂದುತರುವಂತ ಹೇಳಿಕೆ ನೀಡಿದ್ದ ಕಲ್ಕತ್ತಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಪಶ್ಚಿಮ ಬಂಗಾಳದ ಹಲದಿಯಾದಲ್ಲಿ ಮೇ 15 ರಂದು ಸಾರ್ವಜನಿಕ ಸಭೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಅಶ್ಲೀಲವಾಗಿ ಮಾತನಾಡಿದ್ದ ಅಭಿಜಿತ್ ಗಂಗೋಪಾಧ್ಯಾಯ ವಿರುದ್ಧ ಟಿಎಂಸಿ ದೂರು ದಾಖಲಿಸಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!
ಬಂಗಾಳದ ತುಮ್‌ಲುಕ್ ಲೋಕಸಭಾ ಕ್ಷೇತ್ರದಿಂದ ಗಂಗೋಪಾಧ್ಯಾಯ ಸ್ಪರ್ಧಿಸಿದ್ದು,ಮೇ.25 ರಂದು ಚುನಾವಣೆ ನಡೆಯಲಿದೆ.
ಮೇ. 15 ರಂದು ಮಮತಾ ಬ್ಯಾನರ್ಜಿ ಬಗ್ಗೆ ಮಾತನಾಡಿದ್ದ ಗಂಗೋಪಾಧ್ಯಾಯ ಆಕೆಯ ಬೆಲೆಯಷ್ಟು, ಆಕೆ ನಿಜವಾಗಿಯೂ ಮಹಿಳೆಯೇ ಎಂದು ಆಶ್ಲೀಲವಾಗಿ ಮಾತನಾಡಿದ್ದರು.
ಅನುಚಿತ, ನ್ಯಾಯಸಮ್ಮತವಲ್ಲದ ಹಾಗೂ ಘನತೆಗೆ ಕುಂದುತರುವಂತ ಹೇಳಿಕೆ ನೀಡಿದ್ದ ಅಭಿಜಿತ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದೆ.
