ಮತಯಂತ್ರ ತೆರೆಯಲು ಒಟಿಪಿ ಅಗತ್ಯವಿಲ್ಲ: ಮುಂಬೈ ಚುನಾವಣಾಧಿಕಾರಿ

Date:

Advertisements

ವಿದ್ಯುನ್ಮಾನ ಮತಯಂತ್ರ ತೆರೆಯಲು ಮುಂಬೈನ ಶಿವಸೇನಾ ಸಂಸದರೊಬ್ಬರ ಸಂಬಂಧಿಕರೊಬ್ಬರು ಮೊಬೈಲ್‌ ಮೂಲಕ ಒಟಿಪಿ ಬಳಸಿದ್ದಾರೆ ಎಂಬ ಆರೋಪವನ್ನು ಚುನಾವಣಾ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಮುಂಬೈ ವಾಯುವ್ಯ ಲೋಕಸಭೆ ಕ್ಷೇತ್ರದ ಚುನಾವಣಾಧಿಕಾರಿ ವಂದನಾ ಸೂರ್ಯವಂಶಿ, ಇವಿಎಂ ಸ್ವತಂತ್ರ ವ್ಯವಸ್ಥೆಯ ಯಂತ್ರವಾಗಿದ್ದು ಮತಯಂತ್ರ ತೆರೆಯಲು ಒಟಿಪಿ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮವೊಂದು ಲೋಕಸಭೆ ಚುನಾವಣೆಯಲ್ಲಿ 48 ಮತಗಳ ಅಂತರದಲ್ಲಿ ಜಯಗಳಿಸಿದ ಶಿಂಧೆ ಬಣದ ಶಿವಸೇನಾ ಅಭ್ಯರ್ಥಿಯಾದ ರವೀಂದ್ರ ವೈಕರ್‌ ಅವರ ಸಂಬಂಧಿಕರು ಜೂನ್‌ 4 ರಂದು ಮತ ಎಣಿಕೆ ಸಂದರ್ಭದಲ್ಲಿ ಪೋನ್‌ ಮೂಲಕ ಒಟಿಪಿ ಬಳಸಿ ಮತ ಯಂತ್ರವನ್ನು ತೆರೆದಿದ್ದರು ಎಂದು ಪ್ರಕಟಿಸಲಾಗಿತ್ತು.

Advertisements

ಇವಿಎಂ ಪ್ರೋಗ್ರಾಂ ವ್ಯವಸ್ಥೆ ಹೊಂದಿರದ ಹಾಗೂ ಯಾವುದೇ ವೈರ್‌ಲೆಸ್‌ ಕಮ್ಯೂನಿಕೇಷನ್‌ ಸಾಮರ್ಥ್ಯ ಬೆಂಬಲಿಸಲದ ಕಾರಣ ಮೊಬೈಲ್‌ ಮೂಲಕ ಒಟಿಪಿ ಅಗತ್ಯವಿಲ್ಲ. ಅಲ್ಲದೆ ಇವಿಎಂಗೆ ಯಾವುದೇ ಯಾವುದೇ ಹೊರಗಿನ ಸಂಪರ್ಕ ಕಲ್ಪಿಸುವುದಕ್ಕೆ ಸಾದ್ಯವಿಲ್ಲ. ಈ ಸುದ್ದಿ ಮಾಧ್ಯಮವೊಂದರ ಮೂಲಕ ಹರಡಲಾಗಿದ್ದು,ಕೆಲ ನಾಯಕರು ಸುಳ್ಳು ಸುದ್ದಿಯನ್ನು ಹರಡಿದ್ದಾರೆ” ಎಂದು ಸೂರ್ಯವಂಶಿ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು

ಸುಳ್ಳು ಸುದ್ದಿ ಹರಡಿದ ಮಾಧ್ಯಮದ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಇದೇ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ತಿಳಿಸಿದರು.

“ಆಧುನಿಕ ತಂತ್ರ ವ್ಯವಸ್ಥೆ ಹಾಗೂ ಸುರಕ್ಷಿತ ಕ್ರಮಗಳನ್ನು ಅಳವಡಿಸಿರುವುದರಿಂದ ಮತಯಂತ್ರವನ್ನು ತಿರುಚುವುದಕ್ಕೆ ಸಾಧ್ಯವಿಲ್ಲ. ಸುರಕ್ಷಿತ ಕ್ರಮಗಳನ್ನು ಒಳಗೊಂಡ ಪ್ರತಿಯೊಂದನ್ನು ಅಭ್ಯರ್ಥಿಗಳು ಹಾಗೂ ಅವರ ಏಜೆಂಟ್‌ಗಳ ಉಪಸ್ಥಿತಿಯಲ್ಲಿ ಅಳವಡಿಸಲಾಗಿರುತ್ತದೆ” ಎಂದು ಸೂರ್ಯವಂಶಿ ತಿಳಿಸಿದ್ದಾರೆ.

ಸಂಸದ ರವೀಂದ್ರ ವೈಕರ್‌ ಅವರ ಸಂಬಂಧಿ ಮಂಗೇಶ್ ಪಂಡ್ಲಿಕರ್‌ ಜೂನ್‌ 4 ರಂದು ಮತಯಂತ್ರ ತೆರೆಯಲು ಒಟಿಪಿ ಬಳಸಿದ್ದರು ಎಂದು ಮಾಧ್ಯಮದಲ್ಲಿ ಪ್ರಕಟವಾಗಿತ್ತು.

ಮೊಬೈಲ್‌ ಫೋನಿನಲ್ಲಿರುವ ಕರೆ ವಿವರಗಳನ್ನು ಪತ್ತೆ ಹಚ್ಚಲು ಹಾಗೂ ಬೇರೆ ಉದ್ದೇಶಕ್ಕೆ ಬಳಸಲಾಗಿದೆಯೆ ಎಂಬುದನ್ನು ಪರೀಕ್ಷಿಸಲು ಫೋರೆನ್ಸಿಕ್‌ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗೇಶ್ ಪಂಡ್ಲಿಕರ್‌ ವಿರುದ್ಧ ಮತಗಟ್ಟೆ ಅಧಿಕಾರಿ ದಿನೇಶ್ ಗೌರವ್‌ ಕೂಡ ದೂರು ನೀಡಿದ್ದಾರೆ. ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ಮಂಗೇಶ್ ಪಂಡ್ಲಿಕರ್‌ ಫೋನ್‌ ಬಳಸಿರುವುದನ್ನು ಗಮನಿಸಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರ | ತನ್ನ 6 ವರ್ಷದ ಮಗನನ್ನು ಎತ್ತಿ ನೆಲಕ್ಕೆ ಎಸೆದು ಕೊಂದ ತಂದೆ: ಪರಾರಿ

ಹೋಟೆಲ್‌ ಕೋಣೆಯಲ್ಲಿ ತನ್ನ 6 ವರ್ಷದ ಮಗನನ್ನು ಥಳಿಸಿ ಕೊಂದು ತಂದೆ...

ಬಿಜೆಪಿಗೆ ವೇದಾಂತ ನೀಡಿದ ದೇಣಿಗೆ ನಾಲ್ಕು ಪಟ್ಟು ಹೆಚ್ಚಳ: 97 ಕೋಟಿ ರೂ. ನೀಡಿದ ಗಣಿಗಾರಿಕೆ ಸಂಸ್ಥೆ

ಬಿಲಿಯನೇರ್ ಅನಿಲ್ ಅಗರ್ವಾಲ್ ಅವರ ಗಣಿಗಾರಿಕೆ ಸಂಸ್ಥೆ ವೇದಾಂತ ಲಿಮಿಟೆಡ್, ಆಡಳಿತಾರೂಢ...

ಚುನಾವಣಾ ಆಯೋಗ ಯಾವಾಗಲೂ ಮೋದಿ ಸರ್ಕಾರದ ‘ಕೈಗೊಂಬೆ’ಯಾಗಿದೆ: ಕಪಿಲ್ ಸಿಬಲ್

ಚುನಾವಣಾ ಆಯೋಗವು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೈಯಲ್ಲಿ 'ಕೈಗೊಂಬೆ'ಯಾಗಿದೆ...

ದೆಹಲಿ ವಿವಿ ವಿದ್ಯಾರ್ಥಿನಿ ನಾಪತ್ತೆ; ಪ್ರಶ್ನೆಯ ಕೇಂದ್ರವಾಗಿವೆ ಪ್ರಮುಖ ಬ್ರಿಡ್ಜ್‌ನಲ್ಲಿ ಸಿಸಿ ಕ್ಯಾಮೆರಾಗಳು

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸ್ನೇಹಾ ದೇಬ್ನಾಥ್ (19 ವರ್ಷ) ನಾಪತ್ತೆಯಾಗಿದ್ದಾರೆ. ಅವರು...

Download Eedina App Android / iOS

X