ಸರ್ಕಾರದ ಎಂಎಸ್‌ಪಿ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ನಾಯಕರು: ಫೆ.21ರಿಂದ ದೆಹಲಿ ಚಲೋ ಆರಂಭ

Date:

ಕೇಂದ್ರ ಸರ್ಕಾರ ನೀಡಿದ ಎಂಎಸ್‌ಪಿ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ನಾಯಕರು, ಇದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತನಾಯಕ ಜಗಜಿತ್ ಸಿಂಗ್ ದಲ್ಲೇವಾಲ್,”ಎರಡೂ ಕಡೆಯ ವೇದಿಕೆಯಿಂದ ನಡೆದ ಚರ್ಚೆಯ ನಂತರ ಸರ್ಕಾರ ನೀಡಿರುವ ಪ್ರಸ್ತಾಪದಲ್ಲಿ ಏನು ಇಲ್ಲ ಎಂದು ನಿರ್ಧರಿಸಲಾಗಿದೆ. ಇದರಿಂದ ರೈತರಿಗೆ ಪ್ರಯೋಜನವಾಗುವುದಿಲ್ಲ. ಆದಕಾರಣ ನಾವು ತಿರಸ್ಕರಿಸುತ್ತೇವೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಾಂಡೇರ್ ಮಾತನಾಡಿ, ಕೇಂದ್ರವು ಚರ್ಚೆಯಲ್ಲಿ ಬೇರೆ ಏನೊ ಇದೆ ಎಂದು ಹೇಳುತ್ತಿದೆ. ಅವರು ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಯಾವುದೇ ಬೇರೆ ಪ್ರಸ್ತಾಪವನ್ನು ನೀಡಿಲ್ಲ. ದೆಹಲಿ ಚಲೋ ಮೆರವಣಿಗೆಯನ್ನು ಫೆ.21ರಂದು ಬೆಳಿಗ್ಗೆ 11 ಗಂಟೆಯಿಂದ ಪುನಃ ಆರಂಭಿಸಲಾಗುವುದು ಎಂದು ತಿಳಿಸಿದರು.

ಹರಿಯಾಣದ ಶಂಭು ಗಡಿಯಲ್ಲಿ ರೈತರನ್ನು ನಡೆಸಿಕೊಂಡ ರೀತಿ ಖಂಡನೀಯ. ರೈತರಿಗೆ ತಡೆಯೊಡ್ಡಿರುವ ಬ್ಯಾರಿಕೇಡ್‌ಗಳು ಹಾಗೂ ಆಶ್ರುವಾಯು ಪ್ರಯೋಗಿಸುತ್ತಿರುವುದರ ಸಮಸ್ಯೆಗಳನ್ನು ಚರ್ಚಿಸಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಈ ಸಮಸ್ಯೆಗಳನ್ನು ಬಗೆಹರಿಸುವುವುದಾಗಿ ಅವರು ತಿಳಿಸಿದ್ದಾರೆ. ಪಂಜಾಬ್‌ ಸಿಎಂ ಈ ಸಮಸ್ಯೆಗಳನ್ನು ಕೇಂದ್ರದ ಮಂತ್ರಿಗಳ ಮುಂದೆ ಇಡಬೇಕು. ಹರಿಯಾಣ ಡಿಜಿಪಿ ಕೂಡ ಪ್ರಕಟಣೆ ಹೊರಡಿಸಿ ಪೆಲಟ್ ಗನ್ ಹಾಗೂ ಅಶ್ರುವಾಯು ಶೆಲ್‌ಗಳನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ. ಈ ರೀತಿ ಮಾಡುವುದರ ವಿರುದ್ಧ ಸ್ವಯಂಪ್ರೇರಿತ ಗಂಭೀರ ಪ್ರಕರಣ ದಾಖಲಿಸಬೇಕೆಂದು ನಾವು ಸುಪ್ರೀಂ ಕೋರ್ಟಿಗೂ ಮನವಿ ಮಾಡಿದ್ದೇವೆ ಎಂದು ದಲ್ಲೇವಾಲ್ ಹೇಳಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತವನ್ನು ಗೆಲ್ಲಿಸಿದ ಬಡವರ ಮಕ್ಕಳ ಬೆರಗಿನ ಆಟ

ಚಂಡೀಗಢದಲ್ಲಿ ರೈತರೊಂದಿಗೆ ನಡೆದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸಚಿವರಾದ ಪಿಯೂಶ್ ಗೋಯಲ್, ಅರ್ಜುನ್ ಮುಂಡಾ ಹಾಗೂ ನಿತ್ಯಾನಂದ್ ರೈ ಕೂಡ ಭಾಗವಹಿಸಿದ್ದರು.

ಎಂಎಸ್‌ಪಿ ಖಾತರಿ ಜೊತೆಗೆ ರೈತರು ಎಂ ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳು, ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಪಿಂಚಣಿ, ಸಾಲ ಮನ್ನಾ, ವಿದ್ಯುತ್ ಶುಲ್ಕ ಇಳಿಕೆ, 2021ರಲ್ಲಿ ಲಕೀಮ್‌ಪುರ ಖೇರಿ ಗಲಭೆಯಲ್ಲಿ ರೈತರ ಮೇಲೆ ದಾಖಲಿಸಿದ್ದ ಪೊಲೀಸ್ ಪ್ರಕರಣಗಳ ರದ್ದು, 2013ರ ಭೂಸ್ವಾಧೀನ ಕಾಯ್ದೆ ಮರು ಸ್ಥಾಪನೆ ಹಾಗೂ 2020-21ರ ರೈತ ಪ್ರತಿಭಟನೆಯಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ಪರಿಹಾರ ನೀಡುವುದು ರೈತರ ಬೇಡಿಕೆಗಳಾಗಿವೆ.

ರೈತರೊಂದಿಗೆ ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪಿಯೂಶ್ ಗೋಯಲ್,” ಸಹಕಾರಿ ಸಂಸ್ಥೆಗಳಾದ ಎನ್ಸಿಸಿಸಿಎಫ್ ಹಾಗೂ ಎನ್ಎಎಫ್ಇಡಿ, ಪ್ರಮುಖ ಬೆಳೆ ಬೆಳೆಯುವ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಮುಂದಿನ ಐದು ವರ್ಷಗಳವರೆಗೆ ಎಂಎಸ್ಪಿಯಡಿ ಬೆಳೆಗಳನ್ನು ಖರೀದಿಸಲಿದೆ ಎಂದರು.

“ಖರೀದಿಯಲ್ಲಿ ಪ್ರಮಾಣದ ಬಗ್ಗೆ ಯಾವುದೇ ಮಿತಿಯಿರುವುದಿಲ್ಲ ಹಾಗೂ ಇದಕ್ಕಾಗಿ ಪೋರ್ಟಲ್ಅನ್ನು ಕೂಡ ಅಭಿವೃದ್ಧಿಗೊಳಿಸಲಾಗುವುದು.ಚುನಾವಣೆಗಳು ಬರಲಿದ್ದು, ನೂತನ ಸರ್ಕಾರ ರಚಿತವಾಗಲಿದೆ. ಇಂತಹ ಕೆಲವೊಂದು ಸಮಸ್ಯೆಗಳ ಬಗ್ಗೆ ಚರ್ಚೆಗಳು ಮುಂದುವರಿಯಲಿದೆ” ಎಂದು ಗೋಯಲ್ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಗಾಳವನ್ನು BJPಗೆ ಕೊಟ್ಟ ಗ್ಯಾನೇಶ್‌ ಕುಮಾರ್‌ಗೆ ‘ಭಾರತ ರತ್ನ’ ಕೊಡಿ: ಜೆಕೆ ಸಿಎಂ ಒಮರ್ ಅಬ್ದುಲ್ಲಾ

ಇಡೀ ಪಶ್ಚಿಮ ಬಂಗಾಳವನ್ನೇ ಬಿಜೆಪಿಗೆ ಒಪ್ಪಿಸಿರುವ ಕೇಂದ್ರ ಚುನಾವಣಾ ಆಯೋಗದ (ECI)...

ನಾವು ‘ಇಂಡಿಯಾ’ ಒಕ್ಕೂಟದ ಭಾಗವಲ್ಲ, ಸಭೆಗೆ ಹಾಜರಾಗಲ್ಲ: ಎಎಪಿ ನಾಯಕ ಸಂಜಯ್ ಸಿಂಗ್

ವಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಸಭೆಯಿಂದ ಆಮ್ ಆದ್ಮಿ ಪಾರ್ಟಿ (ಎಎಪಿ)...

SIR | ಫಾರ್ಮ್-6 ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ; ಆದರೆ, ಪೂರ್ಣ ವಿನಾಯಿತಿಯಲ್ಲ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಹೊಸ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಸಂಕೀರ್ಣ ಕಾಗದಪತ್ರಗಳ ಕಟ್ಟುನಿಟ್ಟಿನ...

​’ಇದು ಶತಮಾನದ ಅತಿ ದೊಡ್ಡ ನಾಟಕ’: ನಿರ್ಮಲಾ ಸೀತಾರಾಮನ್ ಸಿಟಿ ಬಸ್ ಪ್ರಯಾಣಕ್ಕೆ ನೆಟ್ಟಿಗರ ಕಟು ಟೀಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ...