ಚತುಷ್ಪಥ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಇನೋವಾ ಕಾರೊಂದು ಮೊದಲು ದ್ವಿಚಕ್ರ ವಾಹನಕ್ಕೆ ಗುದ್ದಿ ಆಮೇಲೆ ಡಿವೈಡರ್‌ಗೆ ಢಿಕ್ಕಿ ಹೊಡೆದು ಗಾಳಿಯಲ್ಲಿ ಹಾರಿಕೊಂಡು ಬಿದ್ದಿರುವ ಭೀಕರ ಅಪಘಾತ ತಮಿಳುನಾಡಿನಲ್ಲಿ ನಡೆದಿದೆ.
ಕಾರಿನಲ್ಲಿದ್ದ ಐವರು ಪ್ರಯಾಣಿಕರಲ್ಲಿ ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೈಕ್ ಸವಾರ ಪಂಡಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಮೃತರನ್ನು ಕನಗವೇಲ್ ಹಾಗೂ ಆತನ ಪತ್ನಿ ಕೃಷ್ಣಕುಮಾರಿ, ಸಂಬಂಧಿ ನಾಗಜ್ಯೋತಿ, 8 ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ.
Five people, including four a family killed in a road accident near Thirumangalam in Madurai on Wednesday.@xpresstn @NewIndianXpress pic.twitter.com/um5goQeR4F
— S Mannar Mannan (@mannar_mannan) April 10, 2024
ಮಧುರೈ ಸಮೀಪದ ತಿರುಮಂಗಲಂ ಬಳಿ ಭೀಕರ ಅಪಘಾತ ನಡೆದಿದೆ. ವಿಲ್ಲಾಪುರಂ ಮೂಲದ ಕನಗವೇಲ್ ಎಂಬಾತ ಕುಟುಂಬಸಮೇತ ತಲವೈಪುರಂ ದೇವಸ್ಥಾನಕ್ಕೆ ಹೋಗಿ ವಾಪಸ್ ಆಗುತ್ತಿದ್ದರು. ಕಾರು ಚಾಲಕ ಮಣಿಕಂದಂ ಚತುಷ್ಪಥ ಹೆದ್ದಾರಿಯಲ್ಲಿ ವೇಗವಾಗಿ ಬರುವಾಗ ಕಾರು ನಿಯಂತ್ರಣ ತಪ್ಪಿದೆ.
ಈ ಸುದ್ದಿ ಓದಿದ್ದೀರಾ? ಜೈಲಿನಲ್ಲಿ ಕೇಜ್ರಿವಾಲ್: ಭ್ರಷ್ಟಾಚಾರದ ಕಾರಣ ನೀಡಿ ಎಎಪಿಗೆ ಸಚಿವ ರಾಜೀನಾಮೆ
ಹೆದ್ದಾರಿಯ ಎಡಬದಿಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಮೊದಲು ಗುದ್ದಿದ ಕಾರು ಬಳಿಕ ಅದೇ ವೇಗದಲ್ಲಿ ಡಿವೈಡರ್‌ಗೆ ಢಿಕ್ಕಿ ಹೊಡೆದು ತರಗೆಲೆಯಂತೆ ಗಾಳಿಯಲ್ಲಿ ಹಾರಿ ಮತ್ತೊಂದು ಬದಿಗೆ ಪಲ್ಟಿ ಹೊಡೆದು ಬಿದ್ದಿದೆ.
ತಿರುಮಂಗಲಂ ಬಳಿ ನಡೆದಿರುವ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
