ಫೆಂಗಲ್ ಚಂಡಮಾರುತಕ್ಕೂ ಮುನ್ನ ಇಂಡಿಗೋ ವಿಮಾನವೊಂದು ಚೆನ್ನೈನಲ್ಲಿ ಲ್ಯಾಂಡಿಂಗ್ ಮಾಡಲು ಹರಸಾಹಸಪಟ್ಟ ವಿಡಿಯೋ ಸದ್ಯ ವೈರಲ್ ಆಗಿದೆ. ಭಾರೀ ಮಳೆ ಮತ್ತು ತೀವ್ರವಾದ ಗಾಳಿಯ ನಡುವೆ ಲ್ಯಾಂಡಿಂಗ್ ಮಾಡಲಾಗದೆ ವಿಮಾನ ತೂರಾಡಿರುವುದು ವಿಡಿಯೋದಲ್ಲಿ ಕಾಣಬಹುದು.
ಕೊನೆಗೆ ವಿಮಾನವನ್ನು ಲ್ಯಾಂಡಿಂಗ್ ಮಾಡದೆ ಮತ್ತೆ ಮೇಲೆ ಹಾರಿಸಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂಡಿಗೋ ಘಟನೆಯನ್ನು ದೃಢಪಡಿಸಿದೆ. ಮುಂಬೈ-ಚೆನ್ನೈ ವಿಮಾನ ಹಾರಾಟದ ವೇಳೆ ಮಳೆ ಮತ್ತು ಜೋರಾದ ಗಾಳಿ ಸೇರಿದಂತೆ ಪ್ರತಿಕೂಲ ಹವಾಮಾನದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಫೆಂಗಲ್ ಚಂಡಮಾರುತ; ಹಲವೆಡೆ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ
“ಮಳೆ ಮತ್ತು ಬಲವಾದ ಗಾಳಿ ಸೇರಿದಂತೆ ಪ್ರತಿಕೂಲ ಹವಾಮಾನದ ಕಾರಣ (ನಂತರ ಚೆನ್ನೈ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು) ಮುಂಬೈ ಮತ್ತು ಚೆನ್ನೈ ನಡುವೆ ಕಾರ್ಯನಿರ್ವಹಿಸುತ್ತಿರುವ ವಿಮಾನ 6E 683 ಲ್ಯಾಂಡಿಂಗ್ ಸಮಸ್ಯೆಯಾಯಿತು” ಎಂದು ಇಂಡಿಗೋ ಹೇಳಿದೆ.
Scary touchdown of a flight (claiming #Indigo) amid stormy weather, due to #CycloneFengal yesterday.
— Surya Reddy (@jsuryareddy) December 1, 2024
In the #viralvideo, close save for Indigo flyers, as flight unsuccessfully attempted landing at #Chennai International Airport on Saturday, amidst #FengalCyclone alert. Plane… pic.twitter.com/kFY6NjYMNq
ಇನ್ನು ಇಂತಹ ಸಮಸ್ಯೆಗಳನ್ನು ನಿರ್ವಹಿಸಲು ಬೇಕಾದ ಅಗತ್ಯ ತರಬೇತಿಯನ್ನು ಪೈಲಟ್‌ಗಳಿಗೆ ನೀಡಲಾಗಿದೆ. ನಮ್ಮ ಪೈಲಟ್‌ಗಳು ವೃತ್ತಿಪರರು. ಮಧ್ಯಾಹ್ನ 12:40ರ ಸುಮಾರಿಗೆ ವಿಮಾನವು ಚೆನ್ನೈನಲ್ಲಿ ಲ್ಯಾಂಡ್ ಆಗಿದೆ ಎಂದು ಸ್ಪಷ್ಟಪಡಿಸಿದೆ.
