ಗುಣಮಟ್ಟ ಪರೀಕ್ಷೆಯಲ್ಲಿ ವಿಫಲರಾದ 54 ಕೆಮ್ಮಿನ ಸಿರಪ್ ತಯಾರಕರು

Date:

ದೇಶದಲ್ಲಿ ಕೆಮ್ಮಿನ ಸಿರಪ್‌ ಗಳನ್ನು ತಯಾರಿಸುತ್ತಿರುವ 54 ಕಂಪನಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ ಎಂದು ಸರಕಾರಿ ವರದಿಯೊಂದು ಹೇಳಿದೆ.

ಭಾರತದಲ್ಲಿ ತಯಾರಾದ ಕೆಮ್ಮಿನ ಸಿರಪ್‌ ಗಳಿಗೂ ವಿಶ್ವಾದ್ಯಂತ 141 ಮಕ್ಕಳ ಸಾವಿಗೂ ತಳುಕು ಹಾಕಿದ ವರದಿಗಳ ಬಳಿಕ ವಿವಿಧ ರಾಜ್ಯಗಳಲ್ಲಿ ನಡೆಸಲಾದ ಪ್ರಯೋಗಾಲಯ ಪರೀಕ್ಷೆಗಳನ್ನು ವರದಿಯು ಉಲ್ಲೇಖಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಅಕ್ಟೋಬರ್‌ವರೆಗೆ ಬಿಡುಗಡೆಗೊಳಿಸಲಾದ 2,104 ಪರೀಕ್ಷಾ ವರದಿಗಳ ಪೈಕಿ 54 ಕಂಪನಿಗಳಿಗೆ ಸಂಬಂಧಿಸಿದ 126 (ಶೇ.6) ವರದಿಗಳು ಪ್ರಮಾಣಿತ ಗುಣಮಟ್ಟಕ್ಕೆ ಅನುಗುಣವಾಗಿರಲಿಲ್ಲ ಎಂದು ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ)ಯ ವರದಿಯು ತಿಳಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವರದಿಯು ಕೆಮ್ಮಿನ ಸಿರಪ್‌ಗಳು ಕಳಪೆ ಗುಣಮಟ್ಟದ್ದಾಗಿರುವ ನಿರ್ದಿಷ್ಟ ಪ್ರಕರಣಗಳನ್ನು ಬೆಟ್ಟು ಮಾಡಿದೆ. ಉದಾಹರಣೆಗೆ ಗುಜರಾತಿನ ಆಹಾರ ಮತ್ತು ಔಷಧಿ ಪ್ರಯೋಗಶಾಲೆಯು ಅಕ್ಟೋಬರ್‌ವರೆಗೆ 385 ಸ್ಯಾಂಪಲ್‌ಗಳನ್ನು ವಿಶ್ಲೇಷಿಸಿದ್ದು,ಈ ಪೈಕಿ 20 ಕಂಪನಿಗಳ 51 ಕೆಮ್ಮಿನ್ ಸಿರಪ್‌ಗಳು ಪ್ರಮಾಣಿತ ಗುಣಮಟ್ಟದ್ದಾಗಿರಲಿಲ್ಲ. ಈ ಪೈಕಿ 10 ಕಂಪನಿಗಳ 18 ಸ್ಯಾಂಪಲ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ.

ಈ ಸುದ್ದಿ ಓದಿದ್ದೀರಾ? ಫೋಟೋ ಆಲ್ಬಮ್ | ಮಳೆ ಅಬ್ಬರಕ್ಕೆ ತಮಿಳುನಾಡು ತತ್ತರ

ಚಂಡಿಗಡದ ಪ್ರಾದೇಶಿಕ ಔಷಧಿ ಪರೀಕ್ಷಾ ಪ್ರಯೋಗಾಲಯವು 284 ಪರೀಕ್ಷಾ ವರದಿಗಳನ್ನು ಬಿಡುಗಡೆಗೊಳಿಸಿದ್ದು,10 ಕಂಪನಿಗಳ 23 ಸ್ಯಾಂಪಲ್‌ಗಳು ಪ್ರಮಾಣಿತ ಗುಣಮಟ್ಟದ್ದಾಗಿರಲಿಲ್ಲ. ಗಾಝಿಯಾಬಾದ್‌ನ ಇಂಡಿಯನ್ ಫಾರ್ಮಾಕೋಪಿಯಾ ಕಮಿಷನ್ 502 ವರದಿಗಳನ್ನು ಬಿಡುಗಡೆಗೊಳಿಸಿದ್ದು ಒಂಭತ್ತು ಕಂಪನಿಗಳ 29 ಸ್ಯಾಂಪಲ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ.

ಗಾಂಬಿಯಾದಲ್ಲಿ ಮೂತ್ರಪಿಂಡ ವೈಫಲ್ಯದಿಂದಾಗಿ ಸಂಭವಿಸಿದ್ದ 70 ಮಕ್ಕಳ ಸಾವುಗಳಿಗೂ ಭಾರತೀಯ ಕಂಪನಿ ಮೇಡನ್ ಫಾರ್ಮಾಸ್ಯೂಟಿಕಲ್ಸ್ ಲಿ. ತಯಾರಿಸಿದ್ದ ಕೆಮ್ಮು ಮತ್ತು ಶೀತದ ಸಿರಪ್‌ಗಳಿಗೂ ನಂಟು ಕಲ್ಪಿಸಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ  ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹೇಳಿದ ಬಳಿಕ ಭಾರತದಲ್ಲಿ ಉತ್ಪಾದಿತ ಕೆಮ್ಮಿನ ಸಿರಪ್‌ಗಳು ನಿಗಾದಲ್ಲಿವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭೆ ಚುನಾವಣೆ | ಇನ್ನುಳಿದ ಹಂತಗಳಲ್ಲಿ ಬಿಜೆಪಿ ಸ್ಥಿತಿ ಮತ್ತಷ್ಟು ಹದಗೆಡಲಿದೆ: ಅಖಿಲೇಶ್ ಯಾದವ್

ಲೋಕಸಭೆ ಚುನಾವಣೆಯ ಉಳಿದ ಹಂತಗಳಲ್ಲಿ ಬಿಜೆಪಿಯ ಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು...

‘ತಾರಕ್ ಮೆಹ್ತಾ’ ನಟ ಗುರುಚರಣ್ ಸಿಂಗ್ ನಾಪತ್ತೆ; ಅಪಹರಣ ಪ್ರಕರಣ ದಾಖಲು

ಅತ್ಯಂತ ಜನಪ್ರಿಯ ಭಾರತೀಯ ಟಿವಿ ಶೋ ಆದ 'ತಾರಕ್ ಮೆಹ್ತಾ ಕಾ...

2ನೇ ಹಂತದ ಚುನಾವಣೆ | ಮತಗಟ್ಟೆಗೆ ಬಾರದ ಹೆಚ್ಚಿನ ಮತದಾರರು; ಬಿಜೆಪಿ ವಿರೋಧಿ ಅಲೆಯ ಸೂಚನೆಯೇ?

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ಮುಗಿದಿದೆ. 13 ರಾಜ್ಯಗಳ...