ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಬುಧವಾರ ಆರಂಭವಾಗಿದೆ. 26 ಸ್ಥಾನಗಳಿಗೆ ಕಣದಲ್ಲಿರುವ 239 ಅಭ್ಯರ್ಥಿಗಳ ಭವಿಷ್ಯವನ್ನು ಇಂದು 25 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ.
ಬಿಗಿ ಭದ್ರತೆಯ ನಡುವೆ 26 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಕಣದಲ್ಲಿರುವ ಕ್ಷೇತ್ರದ ಮತದಾನವೂ ಇಂದು ನಡೆಯುತ್ತಿದೆ. ಅವರು ಬುದ್ಗಾಮ್ ಮತ್ತು ಗಂದರ್ಬಾಲ್ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ.
ಇನ್ನು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಅವರು ನೌಶೇರಾ ವಿಧಾನಸಭಾ ಕ್ಷೇತ್ರದಿಂದ ಮತ್ತು ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಅವರು ಸೆಂಟ್ರಲ್-ಶಾಲ್ತೆಂಗ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ: ಮೊದಲ ಹಂತದ 24 ಕ್ಷೇತ್ರಗಳಲ್ಲಿ ಮತದಾನ ಆರಂಭ
ಇಂದು ಕಂಗನ್, ಗಂದರ್‌ಬಾಲ್, ಹಜರತ್‌ಬಾಲ್, ಖನ್ಯಾರ್, ಹಬ್ಬಕದಲ್, ಲಾಲ್ ಚೌಕ್, ಚನ್ನಪೋರಾ, ಝಡಿಬಲ್, ಈದ್ಗಾ, ಸೆಂಟ್ರಲ್ ಶಾಲ್ತೆಂಗ್, ಬುದ್ಗಾಮ್, ಬೀರ್ವಾ, ಖಾನ್‌ಸಾಹಿಬ್, ಚ್ರಾರ್-ಐ-ಶರೀಫ್, ಚದೂರ, ಗುಲಾಬ್‌ಗಢ್, ರಿಯಾಸಿ, ಶ್ರೀ ಮಾತಾ ವೈಷ್ಣೋ ದೇವಿ, ಕಲಕೋಟೆ – ಸುಂದರ್‌ಬಾನಿ, ನೌಶೇರಾ, ರಾಜೌರಿ, ಬುಧಾಲ್, ತನ್ನಮಂಡಿ, ಸುರನ್‌ಕೋಟೆ, ಪೂಂಚ್ ಹವೇಲಿ ಮತ್ತು ಮೆಂಧರ್ ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ.
ಅಕ್ಟೋಬರ್ 1ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.
VIDEO | Jammu and Kashmir Election 2024: Polling begins for second phase. Visuals from a polling booth in #Budgam.#JammuKashmirElections2024 #JammuKashmirAssemblyElections2024
— Press Trust of India (@PTI_News) September 25, 2024
(Full video available on PTI Videos – https://t.co/n147TvqRQz) pic.twitter.com/ZH9XeMVBdK
