ಜನ್ ಧನ್ | ಪ್ರತಿ ನಾಲ್ಕರಲ್ಲಿ ಒಂದು ಖಾತೆ ನಿಷ್ಕ್ರಿಯ; 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್

Date:

ದೇಶದ ಬಡವರು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿದವರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯೊಳಗೆ ತರಲು ಕೇಂದ್ರ ಸರ್ಕಾರ ಆರಂಭಿಸಿದ್ದ ಪ್ರಧಾನಮಂತ್ರಿ ಜನ್ ಧನ್ ಯೋಜನೆ ವೈಫಲ್ಯ ಕಂಡಿದೆ. ಈ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕು ಖಾತೆಗಳಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳು ನಿಷ್ಕ್ರಿಯವಾಗಿವೆ. ಮಾತ್ರವಲ್ಲ, 5.72 ಕೋಟಿಗೂ ಅಧಿಕ ಖಾತೆಗಳಲ್ಲಿ ಯಾವುದೇ ಹಣವಿಲ್ಲ. ಅವುಗಳು ದೀರ್ಘಕಾಲದಿಂದ ಶೂನ್ಯ ಬ್ಯಾಲೆನ್ಸ್‌ನಲ್ಲೇ ಉಳಿದಿವೆ ಎಂಬ ಮಹತ್ವದ ಮಾಹಿತಿ ಬಹಿರಂಗವಾಗಿದೆ.

- Advertisement -

ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಹಣಕಾಸು ಸಚಿವಾಲಯದ ಮಾಹಿತಿ ನೀಡಿದೆ. ಆ ಮಾಹಿತಿ ಪ್ರಕಾರ, 2026ರ ಆಗಸ್ಟ್ 12ರ ವೇಳೆಗೆ ದೇಶಾದ್ಯಂತ ಪ್ರಧಾನಮಂತ್ರಿ ಜನ್ ಧನ್ ಯೋಜನೆ (PMJDY) ಅಡಿಯಲ್ಲಿ ಒಟ್ಟು 59,03,74,907 ಖಾತೆಗಳಿದ್ದವು. ಈ ಖಾತೆಗಳಲ್ಲಿ ಒಟ್ಟಾರೆ 3,15,179.90 ಕೋಟಿ ರೂ. ಠೇವಣಿ ಇತ್ತು. ಆದಾಗ್ಯೂ, ಯೋಜನೆಯಡಿಯ ಒಟ್ಟು ಖಾತೆಗಳಲ್ಲಿ 15,36,77,009 ಖಾತೆಗಳನ್ನು ನಿಷ್ಕ್ರಿಯ ಖಾತೆಗಳೆಂದು ವರ್ಗೀಕರಿಸಲಾಗಿದೆ. ಅಂದರೆ, ಒಟ್ಟು ಖಾತೆಗಳ ಪೈಕಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಖಾತೆಗಳು ಸಕ್ರಿಯ ಬಳಕೆಯಿಂದ ಹೊರಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಮಾತ್ರಲ್ಲದೆ, 5,72,35,490 ಖಾತೆಗಳು ಶೂನ್ಯ ಬ್ಯಾಲೆನ್ಸ್‌ನಲ್ಲಿವೆ. ಅಂದರೆ, ಜನ್ ಧನ್ ಯೋಜನೆಯಡಿ ಬ್ಯಾಂಕ್ ಖಾತೆ ತೆರೆದಿದ್ದರೂ ಕೋಟ್ಯಂತರ ಖಾತೆಗಳಲ್ಲಿ ಯಾವುದೇ ಹಣ ಉಳಿದಿಲ್ಲ. ಈ ಖಾತೆಗಳ ಮೂಲಕ ಖಾತೆದಾರರು ಯಾವುದೇ ವಹಿವಾಟು ನಡೆಸುತ್ತಿಲ್ಲ.

ರಾಜ್ಯವಾರು ಅಂಕಿ-ಅಂಶಗಳನ್ನು ಗಮನಿಸಿದರೆ, ಉತ್ತರ ಪ್ರದೇಶದಲ್ಲಿ 3.23 ಕೋಟಿ ಜನ್ ಧನ್ ಖಾತೆಗಳು ನಿಷ್ಕ್ರಿಯವಾಗಿವೆ. ನಂತರದ ಸ್ಥಾನದಲ್ಲಿ ಬಿಹಾರ ಇದ್ದು, ಅಲ್ಲಿ 1.59 ಕೋಟಿ ಖಾತೆಗಳು ನಿಷ್ಕ್ರಿಯವಾಗಿವೆ. ಮಧ್ಯಪ್ರದೇಶದಲ್ಲಿ 1.35 ಕೋಟಿ, ಪಶ್ಚಿಮ ಬಂಗಾಳದಲ್ಲಿ 1.02 ಕೋಟಿ ಹಾಗೂ ಮಹಾರಾಷ್ಟ್ರದಲ್ಲಿ 97.94 ಲಕ್ಷ ಜನ್ ಧನ್ ಖಾತೆಗಳು ನಿಷ್ಕ್ರಿಯವಾಗಿವೆ.

ಶೂನ್ಯ ಬ್ಯಾಲೆನ್ಸ್ ಹೊಂದಿರುವ ಖಾತೆಗಳ ಸಂಖ್ಯೆಯಲ್ಲಿಯೂ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಅಲ್ಲಿ ಇಂತಹ ಖಾತೆಗಳ ಸಂಖ್ಯೆ 95.92 ಲಕ್ಷ ಇದೆ. ಬಿಹಾರದಲ್ಲಿ 62.35 ಲಕ್ಷ, ಪಶ್ಚಿಮ ಬಂಗಾಳದಲ್ಲಿ 37.20 ಲಕ್ಷ, ಅಸ್ಸಾಂನಲ್ಲಿ 36.30 ಲಕ್ಷ ಹಾಗೂ ಮಹಾರಾಷ್ಟ್ರದಲ್ಲಿ 36.04 ಲಕ್ಷ ಶೂನ್ಯ ಬ್ಯಾಲೆನ್ಸ್ ಖಾತೆಗಳಿವೆ.

ಆರ್‌ಟಿಐ ಉತ್ತರದ ಮತ್ತೊಂದು ಗಮನಾರ್ಹ ಅಂಶವೆಂದರೆ, ಜನ್ ಧನ್ ಖಾತೆಗಳ ಕುರಿತು ಕೆಲವು ಪ್ರಮುಖ ಮಾಹಿತಿಗಳನ್ನು ಕೇಂದ್ರ ಮಟ್ಟದಲ್ಲಿ ನಿರ್ವಹಿಸಲಾಗುತ್ತಿಲ್ಲ. ಉದಾಹರಣೆಗೆ, 100 ರೂ.ಗಿಂತ ಕಡಿಮೆ ಬ್ಯಾಲೆನ್ಸ್ ಹೊಂದಿರುವ ಖಾತೆಗಳು, ಕಳೆದ ಐದು ವರ್ಷಗಳಲ್ಲಿ ಮುಚ್ಚಲ್ಪಟ್ಟ ಖಾತೆಗಳು ಹಾಗೂ ಶಂಕಿತ ವಹಿವಾಟು ಅಥವಾ ಸೈಬರ್ ವಂಚನೆಯ ಕಾರಣಕ್ಕೆ ಬ್ಲಾಕ್ ಅಥವಾ ಫ್ರೀಜ್ ಮಾಡಲಾಗಿರುವ ಖಾತೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಹಣಕಾಸು ಸೇವೆಗಳ ಇಲಾಖೆ ತಿಳಿಸಿದೆ.

ಹೀಗಾಗಿ, ಒಟ್ಟು 59 ಕೋಟಿಗೂ ಅಧಿಕ ಖಾತೆಗಳ ಪೈಕಿ ಎಷ್ಟು ಖಾತೆಗಳು ನಿಜವಾಗಿ ನಿಯಮಿತವಾಗಿ ಬಳಕೆಯಾಗುತ್ತಿವೆ ಎಂಬುದನ್ನು ಈ ದತ್ತಾಂಶದಿಂದ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ.

ಪ್ರಧಾನಮಂತ್ರಿ ಜನ್ ಧನ್ ಯೋಜನೆಯನ್ನು 2014ರ ಆಗಸ್ಟ್‌ನಲ್ಲಿ ರಾಷ್ಟ್ರೀಯ ಹಣಕಾಸು ಸೇರ್ಪಡೆ ಕಾರ್ಯಕ್ರಮವಾಗಿ ಆರಂಭಿಸಲಾಯಿತು. ಬ್ಯಾಂಕಿಂಗ್ ಸೇವೆಗಳಿಂದ ದೂರವಿರುವ ಕುಟುಂಬಗಳಿಗೆ ಕನಿಷ್ಠ ಒಂದು ಮೂಲಭೂತ ಬ್ಯಾಂಕ್ ಖಾತೆ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು. ಇದರ ಜೊತೆಗೆ ಹಣಕಾಸು ಸಾಕ್ಷರತೆ ಮತ್ತು ಸಾಮಾಜಿಕ ಭದ್ರತಾ ಸೇವೆಗಳನ್ನು ಜನರಿಗೆ ತಲುಪಿಸುವ ಗುರಿಯನ್ನೂ ಯೋಜನೆ ಹೊಂದಿತ್ತು.

ಈ ಲೇಖನ ಓದಿದ್ದೀರಾ?: ಕುಸಿದ ಮೋದಿ ಜನಪ್ರಿಯತೆ – ʼಪ್ರಜಾಪ್ರಭುತ್ವ ಅಪಾಯದಲ್ಲಿದೆʼ ಎನ್ನುತ್ತಿರುವ ಜನತೆ; ಸಮೀಕ್ಷಾ ವರದಿ

ಬ್ಯಾಂಕ್ ಶಾಖೆಗಳಿಗೆ ಸುಲಭವಾಗಿ ತಲುಪಲು ಸಾಧ್ಯವಾಗದ ಬಡವರು, ಗ್ರಾಮೀಣ ಕುಟುಂಬಗಳು, ಮಹಿಳೆಯರು ಹಾಗೂ ದುರ್ಬಲ ವರ್ಗಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತರುವ ಪ್ರಯತ್ನವಾಗಿ ಜನ್ ಧನ್ ಯೋಜನೆಯನ್ನು ಸರ್ಕಾರ ವ್ಯಾಪಕವಾಗಿ ಪ್ರಚಾರ ಮಾಡಿತ್ತು.

ಜನ್ ಧನ್ ಯೋಜನೆಯಡಿ ತೆರೆಯಲಾಗಿರುವ ಖಾತೆಗಳಲ್ಲಿ ಮಹಿಳೆಯರ ಪಾಲು ಗಮನಾರ್ಹವಾಗಿದೆ. ಲಭ್ಯವಿರುವ ಆರ್‌ಟಿಐ ಮಾಹಿತಿಯ ಪ್ರಕಾರ, 32.89 ಕೋಟಿ ಖಾತೆಗಳನ್ನು ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಹೊಂದಿದ್ದಾರೆ. ಪುರುಷರ ಹೆಸರಿನಲ್ಲಿ ತೆರೆಯಲಾಗಿರುವ ಖಾತೆಗಳ ಸಂಖ್ಯೆ 26.14 ಕೋಟಿಯಷ್ಟಿದೆ.

ಆದರೆ ಈಗ ಬಹಿರಂಗವಾಗಿರುವ ನಿಷ್ಕ್ರಿಯ ಮತ್ತು ಶೂನ್ಯ ಬ್ಯಾಲೆನ್ಸ್ ಖಾತೆಗಳ ಸಂಖ್ಯೆಯು ಖಾತೆ ತೆರೆಯುವಿಕೆಯ ಹೊರತಾಗಿ ಮತ್ತೇನನ್ನೂ ಸರ್ಕಾರ ಸಾಧಿಸಲಾಗಿಲ್ಲ ಎಂಬುದನ್ನು ಸೂಚಿಸಿವೆ. ಮಹಿಳೆಯರ ಹೆಸರಿನಲ್ಲಿ ಖಾತೆಗಳು ತೆರೆಯಲ್ಪಟ್ಟಿವೆ ಎಂಬ ಅಂಕಿ ಮಾತ್ರ ಸಾಕಾಗುವುದಿಲ್ಲ. ಅವು ನಿಜವಾಗಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಎಷ್ಟರ ಮಟ್ಟಿಗೆ ನೆರವಾಗುತ್ತಿವೆ ಎಂಬುದನ್ನು ಅಳೆಯುವ ಅಗತ್ಯವೂ ಇದೆ ಎಂಬುದನ್ನು ಆರ್‌ಟಿಐ ಮಾಹಿತಿ ಸೂಚಿಸುತ್ತದೆ.

ಆರ್‌ಟಿಐ ಮೂಲಕ ಹೊರಬಂದಿರುವ ಈ ಅಂಕಿ-ಅಂಶಗಳು ಜನ್ ಧನ್ ಯೋಜನೆ ವಿಫಲವಾಗಿದೆ ಎಂಬುದನ್ನು ಮಾತ್ರ ಸಾಬೀತುಪಡಿಸುವುದಿಲ್ಲ. ಬದಲಾಗಿ, ಯೋಜನೆಯ ಮುಂದಿನ ಹಂತ ಯಾವುದು ಎಂಬ ಪ್ರಶ್ನೆಯನ್ನು ಹೆಚ್ಚು ಗಂಭೀರವಾಗಿ ಕೇಳುವಂತೆ ಮಾಡಿವೆ. ಕೋಟ್ಯಂತರ ಖಾತೆಗಳನ್ನು ತೆರೆಯಲಾಗಿದೆ; ಈಗ ಅವು ನಿಷ್ಕ್ರಿಯ ಸಂಖ್ಯೆಗಳಾಗದೆ, ಜನರ ಆರ್ಥಿಕ ಬದುಕಿನ ಸಕ್ರಿಯ ಸಾಧನಗಳಾಗುವಂತೆ ಮಾಡುವುದು ಹೇಗೆ? ಎಂಬುದೇ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತಿಭಟನೆಗಳ ವಿರುದ್ಧ ಅತಿಯಾದ ಬಲಪ್ರಯೋಗ ನಿಲ್ಲಿಸಿ; ಮೋದಿ ಸರ್ಕಾರಕ್ಕೆ ವಿಶ್ವಸಂಸ್ಥೆ ತಜ್ಞರ ಆಗ್ರಹ

ಭಾರತದಲ್ಲಿ ಇತ್ತೀಚಿನ ಪ್ರತಿಭಟನೆಗಳ ಸಂದರ್ಭದಲ್ಲಿ ಅಧಿಕಾರಿಗಳು ನಡೆದುಕೊಂಡ ರೀತಿಯ ಬಗ್ಗೆ ಸ್ವತಂತ್ರ...

ಪ್ರಧಾನಿ ಮೋದಿ ವಿದೇಶಿ ಪ್ರವಾಸದ ದಾಖಲೆ ಬಹಿರಂಗಕ್ಕೆ ದೆಹಲಿ ಹೈಕೋರ್ಟ್ ನಕಾರ

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ...

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ...

ಈ ದಿನ ಸಂಪಾದಕೀಯ | ʼಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದ್ಯಾ ಈ ಪ್ರಪಂಚದಲ್ಲಿ?ʼ

ಸೌದಿ ಅರೇಬಿಯಾದ ಮರಣದಂಡನೆ ಪ್ರಕರಣದಿಂದ ಚಿಂತನೆಗೆ ಹಚ್ಚುವ ಸಂಗತಿ ಎಂದರೆ, ಧಾರ್ಮಿಕ...