ದರ್ಗಾ ಇದ್ದ ಮಾತ್ರಕ್ಕೆ ಭೂಮಿ ವಕ್ಫ್ ಆಸ್ತಿ ಆಗುವುದಿಲ್ಲ: ಮದ್ರಾಸ್‌ ಹೈಕೋರ್ಟ್

Date:

ಕೇವಲ ದರ್ಗಾ ಅಸ್ತಿತ್ವದಲ್ಲಿದೆ ಎಂಬ ಕಾರಣಕ್ಕೆ, ಅದು ಇರುವ ಭೂಮಿಯು ಸ್ವಯಂಚಾಲಿತವಾಗಿ ವಕ್ಫ್ ಮಂಡಳಿಯ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.

- Advertisement -

‘ಸರ್ಕಾರ್ ಸೈಯದ್ ಹಬೀಬುಲ್ಲಾ ಶಾ ಕಹ್ದಾರಿ ಆರಿಫ್ vs ತಮಿಳುನಾಡು ವಕ್ಫ್ ಬೋರ್ಡ್’ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಗೋವಿಂದರಾಜನ್ ತಿಲಕಾವತಿ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. “ಯಾವುದೇ ಸಂಸ್ಥೆಯನ್ನು ಕಾನೂನುಬದ್ಧವಾಗಿ ವಕ್ಫ್ ಎಂದು ಪರಿಗಣಿಸದ ಹೊರತು ಅಥವಾ ಸ್ಥಾಪಿಸದ ಹೊರತು ವಕ್ಫ್ ಮಂಡಳಿಗೆ ಅದರ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಮಂಡಳಿಯು ಮೊದಲು ಆ ಭೂಮಿಯ ಮೇಲಿನ ತನ್ನ ಮಾಲೀಕತ್ವವನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಬೇಕು” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಮುಸ್ಲಿಂ ಕಾನೂನಿನಿಂದ ಮಾನ್ಯತೆ ಪಡೆದ ಧಾರ್ಮಿಕ, ಪವಿತ್ರ ಅಥವಾ ದತ್ತಿ ಉದ್ದೇಶಗಳಿಗಾಗಿ ಮುಸ್ಲಿಂ ವ್ಯಕ್ತಿಯೊಬ್ಬರಿಂದ ಆಸ್ತಿಯನ್ನು ಶಾಶ್ವತವಾಗಿ ಮುಡಿಪಾಗಿಟ್ಟ ದಾಖಲೆ ಇರಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಚೆನ್ನೈನ ಟ್ರಿಪ್ಲಿಕೇನ್‌ನಲ್ಲಿರುವ ‘ಸರ್ಕಾರ್ ಸೈಯದ್ ಹಬೀಬುಲ್ಲಾ ಶಾ ಖಾದರಿ ಆರಿಫ್ ರಬ್ಬಾನಿ ಹಜರತ್ ದರ್ಗಾ’ಕ್ಕೆ ವಕ್ಫ್ ಮಂಡಳಿಯು ನಿಯಮಾವಳಿಗಳನ್ನು ಗಾಳಿಗೆ ತೂರಿ, ಯಾವುದೇ ಪೂರ್ವ ಸಮೀಕ್ಷೆ ನಡೆಸದೆ ಮೇಲ್ವಿಚಾರಕರೊ ಒಬ್ಬರನ್ನು ನೇಮಕ ಮಾಡಿತ್ತು. ಅಲ್ಲದೆ ದರ್ಗಾವನ್ನು ವಕ್ಫ್ ಆಕ್ಟ್ ಅಡಿಯಲ್ಲಿ ನೋಂದಾಯಿಸಲು ಆದೇಶಿಸಿ ನಿರ್ಣಯ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ದರ್ಗಾದ ಪ್ರಸ್ತುತ ಮೇಲ್ವಿಚಾರಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ದರ್ಗಾ ಸುಮಾರು 240 ವರ್ಷಗಳಷ್ಟು ಹಳೆಯದಾಗಿದ್ದು, ಕಳೆದ 40 ವರ್ಷಗಳಿಂದ ತಮ್ಮ ಕುಟುಂಬವೇ ಇದನ್ನು ನಿರ್ವಹಿಸುತ್ತಿದೆ. ಈ ಭೂಮಿ ಲೋಕೋಪಯೋಗಿ ಇಲಾಖೆಗೆ (PWD) ಸೇರಿದ್ದಾಗಿದ್ದು, ವಕ್ಫ್ ಮಂಡಳಿಗೆ ಇದರ ಮೇಲೆ ಯಾವುದೇ ಹಕ್ಕಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಜತೆಗೆ ಈ ಜಮೀನು ಸರ್ಕಾರದ ‘ಪೊರಂಬೋಕು’ (ಸರ್ಕಾರಿ ಬಂಜರು) ಭೂಮಿಯಾಗಿದ್ದು, ಇದನ್ನು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಗೆ ಉಚಿತವಾಗಿ ನೀಡಲಾಗಿದೆ ಎಂದು PWD ಇಲಾಖೆ ಕೋರ್ಟ್‌ಗೆ ತಿಳಿಸಿದೆ. ಆದರೆ, ಈ ಜಮೀನು ಮೂಲತಃ ದರ್ಗಾಕ್ಕೆ ಸೇರಿದ್ದಾಗಿದ್ದು, ನಂತರದ ದಿನಗಳಲ್ಲಿ ಮುನ್ಸಿಪಾಲಿಟಿ ಮತ್ತು ಲೋಕೋಪಯೋಗಿ ಇಲಾಖೆಯ ವಶಕ್ಕೆ ಹೋಗಿದೆ ಎಂದು ಮಂಡಳಿ ವಾದಿಸಿತ್ತು.

ಇಂತಹ ಸಂಸ್ಥೆಯ ಮೇಲೆ ನಿಯಂತ್ರಣ ಚಲಾಯಿಸುವ ಮುನ್ನ ವಕ್ಫ್ ಮಂಡಳಿಯು ಮೊದಲು ತನ್ನ ಅಧಿಕಾರ ವ್ಯಾಪ್ತಿಯ ಸತ್ಯಾಸತ್ಯತೆಗಳನ್ನು ಸಾಬೀತುಪಡಿಸಬೇಕು. ಮೇಲ್ವಿಚಾರಕರ ನೇಮಕಾತಿಯು ಸಾಮಾನ್ಯವಾಗಿ ವಕ್ಫ್ ಅಸ್ತಿತ್ವದಲ್ಲಿದೆ ಎಂಬುದನ್ನು ಮೊದಲೇ ಸೂಚಿಸುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಅರ್ಜಿದಾರರು ಮತ್ತು ಪ್ರತಿವಾದಿಗಳು ಇಬ್ಬರೂ ದರ್ಗಾದ ಮೇಲೆ ಹಕ್ಕು ಸಾಧಿಸುತ್ತಿರುವುದರಿಂದ, ಈ ವಿವಾದವನ್ನು ಮೊದಲು ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ:ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ನಿರಾಕರಣೆ; BJPಗೆ ಶರಣಾದರೇ ಎಚ್‌ಡಿಕೆ?

“ಈ ಆಸ್ತಿಯನ್ನು ವಕ್ಫ್ ಎಂದು ಸಮರ್ಪಿಸಲಾಗಿದೆ ಎಂಬುದಕ್ಕೆ ಯಾವುದೇ ಕಾನೂನು ದಾಖಲೆಗಳಿಲ್ಲ. ಆದ್ದರಿಂದ, ಯಾವುದೇ ಪೂರ್ವ ಸಮೀಕ್ಷೆ ಇಲ್ಲದೆ ಸೆಕ್ಷನ್ 36(4) ರ ಅಡಿಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುದೀರ್ಘ ವಿಚಾರಣಾಧೀನ ಬಂಧನ ‘ಶಿಕ್ಷೆ’ಯಾಗದಿರಲಿ: ₹979 ಕೋಟಿ ಹಗರಣದ ಆರೋಪಿಗಳಿಗೆ ಸುಪ್ರೀಂ ಜಾಮೀನು

​₹979.45 ಕೋಟಿ ಮೌಲ್ಯದ ಸರ್ಕಾರಿ ಗುತ್ತಿಗೆಗಳನ್ನು ಪಡೆಯಲು ವಂಚನೆ ಹಾಗೂ ಅಕ್ರಮ...

ಏಕನಾಥ ಶಿಂಧೆ ಒಲಿಸಿಕೊಳ್ಳಲು 500 ಕೋಟಿ ಹಣ ನೀಡಿದ ಬಿಜೆಪಿ: ಜಾರಂಗೆ ಪಾಟೀಲ್ ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಬಿಡುಗಡೆ ಮಾಡಿರುವ ವಿವಾದಾತ್ಮಕ ಆಡಿಯೊ...

ಅರುಣಾಚಲ ಗಡಿಯ ಹಲವೆಡೆ ಚೀನಾ ಸೇನೆ ಜೊತೆ ಸಂಘರ್ಷ ಮುಂದುವರಿಕೆ: ಐಟಿಬಿಪಿ ಮಹಾನಿರ್ದೇಶಕ

ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಚೀನಾ ಸೇನೆಯ ಜೊತೆಗಿನ ಮುಖಾಮುಖಿ ಹಾಗೂ...