ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ನಿರಾಕರಣೆ; BJPಗೆ ಶರಣಾದರೇ ಎಚ್‌ಡಿಕೆ?

Date:

ಬಿಜೆಪಿಯ ಈ ಧೋರಣೆ ಮತ್ತು ಜೆಡಿಎಸ್‌ ಮೌನಸಮ್ಮತಿಯು ಜೆಡಿಎಸ್‌ನ ಸದ್ಯದ ದುರ್ಬಲ ಸ್ಥಿತಿ ಮತ್ತು ಬಿಜೆಪಿಯ ಬಿಗಿ ಹಿಡಿತವನ್ನು ಜಗಜ್ಜಾಹೀರುಗೊಳಿಸಿದೆ. ಜೊತೆಗೆ, ‘ರಾಜ್ಯಸಭೆಗೆ ದೇವೇಗೌಡರು ಅವರಾಗಿಯೇ ಸಾಕು ಎಂದು ಸುಮ್ಮನಾದರೇ ಅಥವಾ ಅವರ ಆಯ್ಕೆಯನ್ನು ಬಿಜೆಪಿ ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಿತೇ’ ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

- Advertisement -

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪ್ರಾದೇಶಿಕ ಅಸ್ಮಿತೆ ಮತ್ತು ಸ್ವಾಭಿಮಾನದ ಹೆಸರಿನಲ್ಲಿ ದಶಕಗಳ ಕಾಲ ರಾಜಕಾರಣ ಮಾಡಿದ್ದು ಜೆಡಿಎಸ್‌. ಇದೇ ಸ್ವಾಭಿಮಾನವನ್ನು ಮುಂದಿಟ್ಟು ಜೆಡಿಎಸ್‌ನ ಸರ್ವೋಚ್ಚ ನಾಯಕ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಗ್ಗಾಗ್ಗೆ ಗಂಭೀರವಾದ ಹೇಳಿಕೆಗಳನ್ನು ನೀಡಿದ್ದೂ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್‌ ಮತ್ತು ದೇವೇಗೌಡರು ಸ್ವಾಭಿಮಾನ ಕಳೆದುಕೊಂಡು, ಆಧಿಕಾರ ಲಾಲಸೆಯಲ್ಲಿ ತೇಲುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಈಗ, ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ದೇವೇಗೌಡರಿಗೆ ಬಿಜೆಪಿ ರಾಜ್ಯಸಭಾ ನಾಮನಿರ್ದೇಶನವನ್ನು ನಿರಾಕರಿಸಿ, ತನ್ನದೇ ಪಕ್ಷದ ಪದಾಧಿಕಾರಿಗೆ ಮಣೆ ಹಾಕಿದೆ. ಪಕ್ಷದ ಬಿಜೆಪಿ ಉಪಾಧ್ಯಕ್ಷ ಮತ್ತು ‘ಜಿಲ್ಲಾ ಕಟ್ಟಡ ನಿರ್ಮಾಣ’ ವಿಭಾಗದ ಉಸ್ತುವಾರಿಯಾಗಿರುವ ಎಂ. ನಾಗರಾಜ ಅವರನ್ನು ರಾಜ್ಯಸಭೆಗೆ ನಾಮನಿರ್ದೆಶನ ಮಾಡಲಾಗಿದೆ. ದೇವೇಗೌಡರ ರಾಜಕೀಯ ಜೀವನದ ಸಂಧ್ಯಾವಧಿಯಲ್ಲಿ ಅವರಿಗೆ ಸಿಗಬೇಕಾದ ಗೌರವವನ್ನು ಬಿಜೆಪಿ ನಿರಾಕರಿಸಿದೆ.

ಬಿಜೆಪಿಯ ಈ ಧೋರಣೆ ಮತ್ತು ಜೆಡಿಎಸ್‌ ಮೌನಸಮ್ಮತಿಯು ಜೆಡಿಎಸ್‌ನ ಸದ್ಯದ ದುರ್ಬಲ ಸ್ಥಿತಿ ಮತ್ತು ಬಿಜೆಪಿಯ ಬಿಗಿ ಹಿಡಿತವನ್ನು ಜಗಜ್ಜಾಹೀರುಗೊಳಿಸಿದೆ. ಜೊತೆಗೆ, ‘ರಾಜ್ಯಸಭೆಗೆ ದೇವೇಗೌಡರು ಅವರಾಗಿಯೇ ಸಾಕು ಎಂದು ಸುಮ್ಮನಾದರೇ ಅಥವಾ ಅವರ ಆಯ್ಕೆಯನ್ನು ಬಿಜೆಪಿ ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಿತೇ’ ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ದೇವೇಗೌಡರ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಅವರು ಬಿಜೆಪಿಯ ಕೋಮು ರಾಜಕಾರಣದ ವಿರುದ್ಧ ಸದಾ ತೀಕ್ಷ್ಣ ವಾಗ್ದಾಳಿ ನಡೆಸುತ್ತಾ ಬಂದವರು. ತಮ್ಮ ಮಗ ಎಚ್.ಡಿ. ಕುಮಾರಸ್ವಾಮಿಯವರು ಈ ಹಿಂದೆ ಬಿಜೆಪಿ ಜೊತೆ ಕೈಜೋಡಿಸಿದಾಗ, ‘ಕುಮಾರಸ್ವಾಮಿ ಅವರನ್ನೇ ಕೈಬಿಡುತ್ತೇನೆ’ ಎಂದು ಸಾರ್ವಜನಿಕವಾಗಿಯೇ ಘೋಷಿಸಿದ್ದರು. ಆದರೆ, ಕಾಲ ಬದಲಾದಂತೆ ರಾಜಕೀಯ ಲೆಕ್ಕಾಚಾರಗಳೂ ಬದಲಾಗಿವೆ. ದೇವೇಗೌಡರೂ ಬಿಜೆಪಿಯನ್ನು ಅಪ್ಪಿಕೊಳ್ಳಲು ಆರಂಭಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವೇಗೌಡರನ್ನು ಬಿಜೆಪಿಯ ಜಿ.ಎಸ್. ಬಸವರಾಜು ಅವರು ಸೋಲಿಸಿದ್ದರು. ಅದು ದೇವೇಗೌಡರ ರಾಜಕೀಯ ಜೀವನದ ದೊಡ್ಡ ಹಿನ್ನಡೆಯಾಗಿತ್ತು. ಆದಾಗ್ಯೂ, ಭಿನ್ನಾಭಿಪ್ರಾಯಗಳು ಮತ್ತು ಮೈತ್ರಿ ಮುರಿದುಬಿದ್ದ ಕಹಿ ಘಟನೆಗಳಿದ್ದರೂ, ದೇವೇಗೌಡರ ರಾಜಕೀಯ ಅಡಗಿಹೋಗಬಾರದು ಎಂದು ಕಾಂಗ್ರೆಸ್‌ ಸೌಜನ್ಯ ತೋರಿಸಿತ್ತು. 2020ರ ರಾಜ್ಯಸಭಾ ಚುನಾವಣೆಯ ಸಮಯದಲ್ಲಿ, ದೇವೇಗೌಡರ ಮಾಜಿ ಪ್ರಧಾನಮಂತ್ರಿ ಎಂಬ ಸ್ಥಾನಮಾನಕ್ಕೆ ಗೌರವ ನೀಡಿ, ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿಯವರು ದೇವೇಗೌಡರನ್ನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಲು ಬೆಂಬಲ ನೀಡಿದ್ದರು.

ಆದರೆ, 2023ರಲ್ಲಿ ಜೆಡಿಎಸ್ ತನ್ನ ಹಳೇ ಸಿದ್ಧಾಂತಗಳನ್ನು ಮರೆತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತು. ಇದರ ಫಲವಾಗಿ ಎಚ್.ಡಿ. ಕುಮಾರಸ್ವಾಮಿಯವರು ಕೇಂದ್ರ ಸರ್ಕಾರದಲ್ಲಿ ಭಾರಿ ಕೈಗಾರಿಕೆಗಳ ಸಚಿವರೂ ಆದರು.

ಈಗ, ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ತಮ್ಮ ಪ್ರಭಾವಿ ಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಕುಟುಂಬದ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ದೊಡ್ಡ ಬೆಲೆಯನ್ನೇ ತೆರಬೇಕಾಗಿ ಬಂದಿದೆ. ದೇವೇಗೌಡರ ರಾಜ್ಯಸಭೆ ಮತ್ತು ರಾಜಕೀಯ ಹಾದಿಗೆ ಅಂತ್ಯ ಹಾಡಲಾಗಿದೆ.

ಒಂದು ಕಾಲದಲ್ಲಿ ಕಿಂಗ್ ಮೇಕರ್ ಆಗಿದ್ದ ಜೆಡಿಎಸ್, ಇಂದು ಕೇವಲ ಒಂದು ಸಚಿವ ಸ್ಥಾನಕ್ಕಾಗಿ ಬಿಜೆಪಿಯ ಎಲ್ಲ ಷರತ್ತುಗಳಿಗೆ ತಲೆಬಾಗುವ ಸ್ಥಿತಿಗೆ ತಲುಪಿದೆ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದರೂ, ತಮ್ಮ ತಂದೆ, ದೇಶದ ಮಾಜಿ ಪ್ರಧಾನಿಯನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸಲು ಬಿಜೆಪಿಯನ್ನು ಒಪ್ಪಿಸಲು ಸಾಧ್ಯವಾಗಲಿಲ್ಲ. ಇದು ಜೆಡಿಎಸ್‌ನ ಆಂತರಿಕ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ.

ಆದಾಗ್ಯೂ, ಜೆಡಿಎಸ್‌ ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಸಮರ್ಥನೆಯ ಸಮಜಾಯಶಿ ನೀಡುತ್ತಿದೆ. ವಯೋಸಹಜ ಕಾರಣಗಳಿಂದ ದೇವೇಗೌಡರು ತಾವಾಗಿಯೇ ವಿಶ್ರಾಂತಿ ಬಯಸಿ ಸುಮ್ಮನಾದರು ಎಂದು ಹೇಳಿಕೊಳ್ಳುತ್ತಿದೆ.

ಆದರೆ, ರಾಜಕೀಯದ ಆಳ-ಅಗಲ ಅರಿತವರು ಬೇರೆಯೇ ವಿಮರ್ಶೆ ಮುಂದಿಟ್ಟಿದ್ದಾರೆ. ಬಿಜೆಪಿ ಎಂದಿಗೂ ತನ್ನ ಪಾಲುದಾರ ಪಕ್ಷಗಳನ್ನು ಸಮಾನವಾಗಿ ಕಾಣುವುದಿಲ್ಲ. ಬದಲಿಗೆ ಅವುಗಳನ್ನು ತನ್ನೊಳಗೆ ವಿಲೀನಗೊಳಿಸಿಕೊಳ್ಳಲು ಅಥವಾ ದುರ್ಬಲಗೊಳಿಸಲು ಯತ್ನಿಸುತ್ತದೆ. ದೇವೇಗೌಡರಿಗೆ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿ ಹೈಕಮಾಂಡ್, ‘ಮೈತ್ರಿಯಲ್ಲಿ ನಾವೇ ಬಾಸ್, ನಮ್ಮ ತೀರ್ಮಾನವೇ ಅಂತಿಮ’ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ಈ ಲೇಖನ ಓದಿದ್ದೀರಾ?: ಒಡೆದ ಟಿಎಂಸಿ, ದೂರವಾದ ಡಿಎಂಕೆ: ವಿವಾದಿತ ಕಾಯ್ದೆಗಳ ಜಾರಿಗೆ ಬಿಜೆಪಿ ಪಡೆಯುವುದೇ ‘ಲೋಕ’ಬಲ?

ಇದು ಕೇವಲ ಟಿಕೆಟ್ ನಿರಾಕರಣೆಯಲ್ಲ, ಬದಲಿಗೆ ಜೆಡಿಎಸ್‌ ಮೇಲೆ ಬಿಜೆಪಿ ಸಾಧಿಸುತ್ತಿರುವ ಸಂಪೂರ್ಣ ರಾಜಕೀಯ ನಿಯಂತ್ರಣ. ಈ ಅವಮಾನವನ್ನು ಸಹಿಸಿಕೊಂಡೂ ಕುಮಾರಸ್ವಾಮಿಯವರು ಮೌನವಾಗಿರುವುದು ‘ರಾಜಕೀಯ ಶರಣಾಗತಿಯ ಪರಮಾವಧಿ’ ಎನ್ನುತ್ತಿದ್ದಾರೆ.

ಈ ಬೆಳವಣಿಗೆಯ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಜೆಡಿಎಸ್‌ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನವೂ ವ್ಯಕ್ತವಾಗುತ್ತಿದೆ. “ದೇಶದ ಹಿರಿಯ ಮುತ್ಸದ್ದಿ, ರೈತರ ಧ್ವನಿ ಎನಿಸಿಕೊಂಡವರನ್ನು ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ಒಪ್ಪದಿರುವುದು ಇಡೀ ಕರ್ನಾಟಕಕ್ಕೆ ಮಾಡಿದ ಅಪಮಾನ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಜೆಡಿಎಸ್ ಇಷ್ಟೊಂದು ವೀಕ್ ಆಗಬಾರದಿತ್ತು. ನಾಯಕರಿಗೆ ಸ್ವಲ್ಪನಾದರೂ ಸ್ವಾಭಿಮಾನ ಇದ್ದರೆ ತಕ್ಷಣವೇ ಬಿಜೆಪಿ ಮೈತ್ರಿ ಬಿಟ್ಟು ಹೊರಗೆ ಬರಬೇಕು” ಎಂದು ಜೆಡಿಎಸ್‌ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಜೆಡಿಎಸ್‌ ಕಾರ್ಯಕರ್ತರು ಇಂದಿಗೂ ಸ್ವಾಭಿಮಾನವನ್ನು ನೋಡುತ್ತಿದ್ದಾರೆ. ಆದರೆ, ನಾಯಕರು ಅಧಿಕಾರಕ್ಕೆ ಜೋತುಬಿದ್ದಿದ್ದಾರೆ. ಅಧಿಕಾರಕ್ಕಾಗಿ ಪದೇ-ಪದೇ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡಿರುವ ಕುಮಾರಸ್ವಾಮಿ, ಮತ್ತೆ ಬಿಜೆಪಿ ಮರ್ಜಿಗೆ ಸಿಕ್ಕಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಂಧ್ರಪ್ರದೇಶ | ರಸ್ತೆ ಕಾಮಗಾರಿ ವೇಳೆ ಜೆಲಾಟಿನ್ ಸ್ಫೋಟ; ಶಾಲಾ ಶಿಕ್ಷಕಿ ಸೇರಿದಂತೆ ಹಲವರ ಸಾವು

ರಸ್ತೆ ಕಾಮಗಾರಿಗಾಗಿ ಬಳಸಲಾಗುತ್ತಿದ್ದ ಜೆಲಾಟಿನ್ ಸ್ಟಿಕ್‌ಗಳು ಅನಿರೀಕ್ಷಿತವಾಗಿ ಸ್ಫೋಟಗೊಂಡು, ಶಾಲಾ ಶಿಕ್ಷಕಿಯೊಬ್ಬರು...

ಬಸವಕಲ್ಯಾಣ ಅನುಭವ ಮಂಟಪ ನಿರ್ಮಾಣ ಕಾರ್ಯ ವರ್ಷದೊಳಗೆ ಪೂರ್ಣ : ಸಚಿವ ಈಶ್ವರ ಖಂಡ್ರೆ

ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳನ್ನು ನೀಡಿದ ಬಸವಣ್ಣನವರು ಮನುಕುಲದ...

ಮಕ್ಕಳಿಗೆ ಇಂಟರ್ನೆಟ್‌ ನಿರ್ಬಂಧ | ಸ್ವಾತಂತ್ರ್ಯಕ್ಕೆ ಕಡಿವಾಣವಲ್ಲ, ಡಿಜಿಟಲ್ ಜಗತ್ತಿಗೆ ಹೊಣೆಗಾರಿಕೆಯ ಚೌಕಟ್ಟು ಅಗತ್ಯ

ಇಂಟರ್ನೆಟ್ ಪ್ರವೇಶವನ್ನು ಕೇವಲ ತಾಂತ್ರಿಕ ಸೌಲಭ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಇದೇ ಡಿಜಿಟಲ್...

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...