ಪ್ರಧಾನಿ ನರೇಂದ್ರ ಮೋದಿ ಉಪನಾಮ ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೆ ತಡೆ ನೀಡಿದ ನಂತರ ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನು ಊರ್ಜಿತಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಲಖನೌ ಮೂಲದ ವಕೀಲ ಅಶೋಕ್ ಪಾಂಡೆಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಜನವರಿ 19) ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಒಂದು ಲಕ್ಷ ರೂ. ದಂಡ ವಿಧಿಸಿದೆ.
ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು, ಅರ್ಜಿಯನ್ನು ವಜಾಗೊಳಿಸಿ, ಈ ಅರ್ಜಿದಾರರಿಗೆ ನಿಷ್ಪ್ರಯೋಜಕ ಪಿಐಎಲ್ ಸಲ್ಲಿಸುವುದು ಹವ್ಯಾಸವಾಗಿದೆ. ಅದಕ್ಕೆ ಇದೊಂದು ಸೇರ್ಪಡೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಸ್ಪೃಶ್ಯತೆ, ಮೌಢ್ಯ, ಜಾತೀಯತೆ ತೊಲಗಿಸಿ ಬಸವಣ್ಣನಿಗೆ ನಿಜ ಗೌರವ ಸಲ್ಲಿಸೋಣ
“ಇಂತಹ ಪಿಐಎಲ್ ಅನ್ನು ಸಲ್ಲಿಸಿದಾಗ ಹಲವು ಬಾರಿ ಕರೆದಿದ್ದರು ಕೂಡಾ ಅರ್ಜಿದಾರರು ಗೈರುಹಾಜರಾಗಿದ್ದರು. ಅರ್ಜಿದಾರರು ನಿಷ್ಪ್ರಯೋಜಕ ಪಿಐಎಲ್‌ಗಳನ್ನು ಸಲ್ಲಿಸುವ ಅಭ್ಯಾಸ ಹೊಂದಿದ್ದಾರೆ. ಇದರಿಂದಾಗಿ ನ್ಯಾಯಾಲಯದ ಅಮೂಲ್ಯ ಸಮಯ ಮತ್ತು ನೋಂದಣಿ ಕೂಡ ವ್ಯರ್ಥವಾಗುತ್ತದೆ. ನಾವು ಈ ಅರ್ಜಿಯನ್ನು ವಜಾಗೊಳಿಸಿ, ಒಂದು ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ” ಸುಪ್ರೀಂ ಪೀಠ ಆದೇಶ ನೀಡಿದೆ.
ಲೋಕಸಭಾ ಸದಸ್ಯರನ್ನು ಖುಲಾಸೆಗೊಳಿಸುವವರೆಗೆ ಸಂಸತ್ ಸ್ಥಾನದಿಂದ ಅನರ್ಹನಾಗಿರುತ್ತಾರೆ ಎಂದು ಕಾನೂನು ಹೇಳುತ್ತದೆ. ಅಲ್ಲದೇ ತಕ್ಷಣವೇ ವಯನಾಡಿನಲ್ಲಿ ಉಪಚುನಾವಣೆ ನಡೆಸುವಂತೆಯೂ ಕಾನೂನು ಹೇಳುತ್ತದೆ ಎಂದು ಅಶೋಕ್ ಪಾಂಡೆ ಪಿಐಎಲ್‌ನಲ್ಲಿ ವಾದಿಸಿದ್ದರು.