ಕರ್ನಾಟಕ ಪೊಲೀಸ್ ಇಲಾಖೆಯ ನೇತ್ರತ್ವದಲ್ಲಿ ಬೀದರ್ ನಗರದ ನೆಹರು ಕ್ರಿಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಪಂಜಿನ ಕವಾಯತು ಪ್ರದರ್ಶನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜ್ಯೋತಿ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದ್ದು, ಶುಕ್ರವಾರ ಸಂಜೆ 4 ಗಂಟೆಗೆ ಬೀದರ ನಗರಕ್ಕೆ ಆಗಮಿಸಿತು. ನಂತರ ಸಂಜೆ 5 ರಿಂದ ಕನ್ನಡ ಜ್ಯೋತಿ ರಥ ಯಾತ್ರೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ 50ರ ಸಂಭ್ರಮದ ಲೋಗೋ ನಿರ್ಮಾಣ ಜನಮನಸೊರೆಗೊಳಿಸಿದವು.
ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...
ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...
ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ ಹಾಗೂ ಚಂದ್ರಕಾಂತ ಪೂಜಾರಿ ಮತ್ತು ಡಿಎಸ್ಪಿ ಶಿವನಗೌಡ ಪಾಟೀಲ್ ಅವರ ಸಮ್ಮುಖದಲ್ಲಿ ಪೊಲೀಸ್, ಅಬಕಾರಿ ಸೇರಿದಂತೆ ವಿವಿಧ ಸಮವಸ್ತ್ರಧಾರಿ ಇಲಾಖೆಯ ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಪ್ರದರ್ಶನಗೊಂಡ ಪಂಜಿನ ಕವಾಯತು ಅಕ್ಷರಶಃ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು.
ವಿಶೇಷವಾಗಿ ಪಂಜಿನ ಕವಾಯತು ವೀಕ್ಷಿಸಲು ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರನ್ನು ಮನರಂಜನೆ ನೀಡಿದ್ದು ಅಲ್ಲದೆ, ಮೈಸೂರು ದಸರಾದಲ್ಲಿ ನೆರೆವೇರುವ ಪಂಜಿನ ಕವಾಯತು ಗಡಿ ಜಿಲ್ಲೆಯಲ್ಲೂ ಸಾಹಸ ಪ್ರದರ್ಶನ ಮೆರೆದ ಪೊಲೀಸ್ ನೇತ್ರತ್ವದ ಪಂಜಿನ ಕವಾಯತು ತಂಡಕ್ಕೆ ಎಲ್ಲರೂ ʼಭೇಷ್ʼ ಎಂದು ಚಪ್ಪಾಳೆ ತಟ್ಟಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಸ್ಪೃಶ್ಯತೆ, ಮೌಢ್ಯ, ಜಾತೀಯತೆ ತೊಲಗಿಸಿ ಬಸವಣ್ಣನಿಗೆ ನಿಜ ಗೌರವ ಸಲ್ಲಿಸೋಣ
ಪಂಜಿನ ಕವಾಯತನಲ್ಲಿ ಬೀದರ್, ಕರ್ನಾಟಕ -50 ಸೇರಿದಂತೆ ವಿವಿಧ ಮಾದರಿಗಳನ್ನು ಪ್ರದರ್ಶನಗೊಂಡಿದ್ದವು, ಸಮವಸ್ತ್ರ ಇಲಾಖೆಗಳ ಪೈಕಿ ಪೊಲೀಸ್, ಅಬಕಾರಿ, ಎಎಸ್ಐಎಸ್ಎಫ್, ಕೆಎಸ್ಆರ್ಪಿ, ಅಗ್ನಿಶಾಮಕ ದಳ, ಕಾರಾಗೃಹ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ಸಿಬ್ಬಂದಿಗಳು ಪಂಜಿನ ಕವಾಯತು ಪ್ರದರ್ಶನ ನೀಡಿದರು.




