ಕುಸ್ತಿ ಪಂದ್ಯಾವಳಿಯಲ್ಲಿ ತಪ್ಪು ತೀರ್ಪು ನೀಡಿದ್ದಾರೆಂದು ಕುಸ್ತಿಪಟು ಒಬ್ಬರು ‘ರೆಫರಿ’ಗೆ ಕಾಲಿನಿಂದ ಒದ್ದು, ದಾಂಧಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೆಫರಿ ಮೇಲೆ ಹಲ್ಲೆ ನಡೆಸಿದ ಕುಸ್ತಿಪಟುವನ್ನು ಮಹಾರಾಷ್ಟ್ರದ ನಾಂದೇಡ್‌ನ ಶಿವರಾಜ್ ರಕ್ಷೆ ಎಂದು ಹೇಳಲಾಗಿದೆ.
ಅಹಲ್ಯಾನಗರದಲ್ಲಿ ‘ಕೇಸರಿ ಕುಸ್ತಿ ಪಂದ್ಯಾವಳಿ’ ಆಯೋಜಿಸಲಾಗಿತ್ತು. ಪಂದ್ಯಾವಳಿಯಲ್ಲಿ ಶಿವರಾಜ್ ರಕ್ಷೆ ಮತ್ತು ಪೃಥ್ವಿರಾಜ್ ಮೊಹೋಲ್ ನಡುವೆ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು. ಪಂದ್ಯದಲ್ಲಿ ಪೃಥ್ವಿರಾಜ್ ಮೊಹೋಲ್ ಗೆದಿದ್ದಾರೆಂದು ರೆಫರಿಗಳು ಘೋಷಿಸಿದರು.
ಈ ವೇಳೆ, ರೆಫರಿಗಳು ತಪ್ಪು ತೀರ್ಪು ನೀಡಿದ್ದಾರೆ. ಅಪ್ರಮಾಣಿಕವಾಗಿ ತೀರ್ಪು ಪ್ರಕಟಿಸಿದ್ದಾರೆ ಎಂದು ರೆಫರಿ ಮೇಲೆ ಶಿವರಾಜ್ ರಕ್ಷೆ ಹಲ್ಲೆ ನಡೆಸಿದ್ದಾರೆ.
Kalesh During the wrestling match b/w Shivraj Rakshe and Prithviraj Mohol, the referee made an incorrect decision, leading to a heated argument between Shivraj and the referee pic.twitter.com/awpoLdqoZC
— Ghar Ke Kalesh (@gharkekalesh) February 2, 2025
ಘಟನೆಯ ಬಳಿಕ ಶಿವರಾಜ್ ರಕ್ಷೆ ಅವರನ್ನು ಪಂದ್ಯಾವಳಿಯಿಂದ ಹೊರಗಿಡಲಾಗಿದೆ.
“ನನ್ನನ್ನು ತಪ್ಪಾಗಿ ಹೊರಗಿಡಲಾಗಿದೆ. ರೆಫರಿಯ ನಿರ್ಧಾರದಲ್ಲಿ ಸ್ಪಷ್ಟವಾಗಿ ಪಕ್ಷಪಾತವಿತ್ತು. ನಾನು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ದೂರು ನೀಡಿದ್ದೇನೆ. ತನಿಖೆಯಾಗಲಿ. ರೆಫರಿ ನಿರ್ಧಾರ ಸರಿಯಾಗಿದೆ ಎಂದಾದರೆ, ನಾನು ಆಟವನ್ನು ಬಿಡುತ್ತೇನೆ” ಎಂದು ಹೇಳಿದ್ದಾರೆ.