ಕಳೆದ ಏಪ್ರಿಲ್ 21ರಂದು ರಾಜಸ್ಥಾನದಲ್ಲಿ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮುಸಲ್ಮಾನರ ವಿರುದ್ಧ ಖುದ್ದು ದ್ವೇಷ ಭಾಷಣಗೈದಿದ್ದ ಪ್ರಧಾನಿ ನರೇಂದ್ರ ಮೋದಿ, “ದೇಶದ ಸಂಪತ್ತನ್ನು ಒಟ್ಟುಗೂಡಿಸಿ, ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುವುದೇ ಕಾಂಗ್ರೆಸ್ನ ಪ್ರಣಾಳಿಕೆ” ಎಂದಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವುದರ ಜೊತೆ ದೊಡ್ಡ ವಿವಾದಕ್ಕೆ ನಾಂದಿ ಹಾಡಿತ್ತು.
ಪ್ರಧಾನಿಯವರ ಈ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಿರುವ ಬೆಳವಣಿಗೆ ನಡೆದಿದೆ.
ರಾಜಸ್ಥಾನ | ಮುಸಲ್ಮಾನರ ವಿರುದ್ಧ ಖುದ್ದು ದ್ವೇಷ ಭಾಷಣಗೈದ ಪ್ರಧಾನಿ ನರೇಂದ್ರ ಮೋದಿ!
‘ದೇಶದ ಸಂಪತ್ತನ್ನು ಒಟ್ಟುಗೂಡಿಸಿ, ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುವುದು ಕಾಂಗ್ರೆಸ್ನ ಪ್ರಣಾಳಿಕೆ’ ಎಂದ ಮೋದಿ!
ವಿಡಿಯೋ ವೈರಲ್: ವಿವಾದಕ್ಕೆ ನಾಂದಿ ಹಾಡಿದ ಪ್ರಧಾನಿ#ModiTohGayo #NarendraModi #LokSabhaElections2024 pic.twitter.com/IhX7RZs7QV
— eedina.com (@eedinanews) April 21, 2024
ಹಿಂದಿಯ ಖಾಸಗಿ ಸುದ್ದಿ ಸಂಸ್ಥೆ 24 ನ್ಯೂಸ್ ಪತ್ರಕರ್ತ ರಾಜೀವ್ ರಂಜನ್ ಅವರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ‘ಮಹೋಲ್ ಕ್ಯಾ ಹೇ’ ಎಂಬ ಕಾರ್ಯಕ್ರಮವನ್ನು ಜನರ ನಡುವೆ ನಡೆಸುತ್ತಿದ್ದರು. ಈ ವೇಳೆ ಅನಿರೀಕ್ಷಿತವಾಗಿ ಬಿಕಾನೇರ್ನ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಸ್ಮಾನ್ ಘನಿ ಅವರನ್ನು ಮಾತನಾಡಿಸಿದ್ದಾರೆ.
ಪ್ರಧಾನಿಯ ದ್ವೇಷ ಭಾಷಣದ ಬಗ್ಗೆ ಪತ್ರಕರ್ತ ಅಭಿಪ್ರಾಯ ಕೇಳಿದಾಗ, “ಪ್ರಧಾನಿ ನರೇಂದ್ರ ಮೋದಿ ಭಾರತದ ಮುಸ್ಲಿಮರನ್ನು ಅವಮಾನಿಸಬಾರದು. ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆಯುವ ಬಗ್ಗೆ ಕೂಡ ಯೋಚನೆ ಮಾಡುತ್ತಿದ್ದೇನೆ” ಎಂದು ಅವರು ವಿಡಿಯೋದಲ್ಲಿ ಹೇಳಿದ್ದರು.
इस वीडियो के वायरल होने के बाद, बीकानेर भाजपा अल्पसंख्यक मोर्चा के अध्यक्ष उस्मान गनी भाजपा से निष्कासित। उन्हों ने वीडियो में कहा था प्रधान मंत्री मोदी को हिंदुस्तान के मुस्लालमाम पे अपमान नही करना चाहिए, डेवलपमेंट पे फोकस रखना चाहिए। इस सुझाव के लिए इन्हे टाटा वाई बाई बोल्डिया… pic.twitter.com/LJh4qSRkCf
— Mohammed Zubair (@zoo_bear) April 24, 2024
ಈ ವಿಡಿಯೋ ವೈರಲ್ ಆದ ನಂತರ, ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸ್ಥಾನದಿಂದ ಉಸ್ಮಾನ್ ಘನಿ ಅವರನ್ನು ಉಚ್ಚಾಟಿಸಲಾಗಿದೆ. ‘ದ್ವೇಷ ಭಾಷಣ ಬೇಡ’ ಎಂದು ಸಲಹೆ ನೀಡಿದ್ದಕ್ಕೆ ಬಿಜೆಪಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
‘ಪಕ್ಷದ ವರ್ಚಸ್ಸು ಹಾಳು ಮಾಡಿದ್ದಕ್ಕಾಗಿ ಈ ಕ್ರಮ’ ಎಂದ ಬಿಜೆಪಿ!
ಈ ಬಗ್ಗೆ ಪ್ರಕಟಣೆ ಹೊರಟಿಸಿರುವ ರಾಜಸ್ಥಾನ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಓಂಕಾರ್ ಸಿಂಗ್ ಲಖಾವತ್, “ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿಜೆಪಿಯ ವರ್ಚಸ್ಸು ಹಾಳು ಮಾಡಿದ್ದಕ್ಕಾಗಿ, ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಉಸ್ಮಾನ್ ಘನಿ ಅವರನ್ನು ಪಕ್ಷದ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ” ಎಂದು ತಿಳಿಸಿದ್ದಾರೆ.
Action Reaction pic.twitter.com/qMvpgyDf7a
— Mobin LLB (@immobink) April 24, 2024
