ಪೊಲೀಸ್ ದೌರ್ಜನ್ಯ ಖಂಡಿಸಿದ ಮುರಳಿ ಮನೋಹರ್ ಜೋಶಿ: ‘ನಿಮ್ಮ ನಾಯಕರು ಕೇಳುತ್ತಾರೆಯೇ?’ ಎಂದ ನೆಟ್ಟಿಗರು

Date:

ದೆಹಲಿಯಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಯುವ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಬಲಪ್ರಯೋಗ ಮಾಡಿರುವುದನ್ನು ಖಂಡಿಸಿ ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಅವರು ಹೇಳಿಕೆ ನೀಡಿದ್ದು, ಸದ್ಯ ಈ ಹೇಳಿಕೆಯು ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. “ಜೋಶಿ ಅವರ ಮಾತುಗಳನ್ನು ಸ್ವತಃ ಅವರದ್ದೇ ಪಕ್ಷದ ನಾಯಕರು ಕೇಳುತ್ತಾರೆಯೇ?” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

- Advertisement -

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮುರಳಿ ಮನೋಹರ್ ಜೋಶಿ, “ದೇಶದ ವಿವಿಧ ಭಾಗಗಳಿಂದ ಬಂದ ಯುವ ವಿದ್ಯಾರ್ಥಿಗಳು ನವದೆಹಲಿಯ ಬೀದಿಗಳಲ್ಲಿ ದಿನಗಟ್ಟಲೆ ಜಮಾಯಿಸಿರುವುದನ್ನು ನೋಡಿ ನೋವುಂಟಾಗಿದೆ. ಪರೀಕ್ಷಾ ವ್ಯವಸ್ಥೆಯ ಬಗ್ಗೆ ಅವರ ಆತಂಕಗಳು ಮತ್ತು ಕಳವಳಗಳು ಪ್ರಾಮಾಣಿಕವಾದದ್ದು. ಅವುಗಳನ್ನು ಸಹಾನುಭೂತಿ ಮತ್ತು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಬಯಕೆಯಿಂದ ನಿರ್ವಹಿಸಬೇಕು” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಇದನ್ನೂ ಓದಿ: ಮೋದಿ ಸರ್ಕಾರದ 4ನೇ ಆಹ್ವಾನ ತಿರಸ್ಕರಿಸಿದ ಸಿಜೆಪಿ; ನಾಳೆ ದೇಶವ್ಯಾಪಿ ಹೋರಾಟದ ಎಚ್ಚರಿಕೆ

“ಇದನ್ನು ಕೇವಲ ಬಲಪ್ರಯೋಗದ ಮೂಲಕ ಪರಿಹರಿಸಬೇಕಾದ ಕಾನೂನು-ಸುವ್ಯವಸ್ಥೆಯ ಸಮಸ್ಯೆಯಾಗಿ ಪರಿಗಣಿಸಬಾರದು ಎಂಬುದು ನನ್ನ ಅನಿಸಿಕೆ. ಯುವತಿಯರನ್ನು ಅಮಾನುಷವಾಗಿ ನಡೆಸಿಕೊಂಡಿದ್ದು ನಿಜಕ್ಕೂ ಕಷ್ಟಕರ ಸಂಗತಿ. ಇಂತಹ ಬಲಪ್ರಯೋಗವು ಭಾರತೀಯ ಸಮಾಜದ ದೊಡ್ಡ ವರ್ಗವನ್ನು ‘ವಿಕಸಿತ ಭಾರತ’ದ ರಾಷ್ಟ್ರೀಯ ಗುರಿಯಿಂದ ದೂರ ತಳ್ಳುತ್ತದೆ” ಎಂದು ಹೇಳಿದ್ದಾರೆ.

ನೆಟ್ಟಿಗರು ಹೇಳುವುದೇನು?

ಮುರಳಿ ಮನೋಹರ್ ಜೋಶಿ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನೆಟ್ಟಿಗರು ಹಾಗೂ ವಿರೋಧ ಪಕ್ಷದ ಬೆಂಬಲಿಗರು ಜೋಶಿ ಅವರ ಹೇಳಿಕೆಯನ್ನು ಆಧರಿಸಿ ಆಡಳಿತಾರೂಢ ಬಿಜೆಪಿಗೆ ಪ್ರತ್ಯಾಕ್ರಮಣ ಮಾಡಿದ್ದಾರೆ.

ಬಿಜೆಪಿಯಲ್ಲಿದ್ದುಕೊಂಡೇ ಜೋಶಿ ಅವರು ಸರ್ಕಾರದ ನಡೆಗೆ ವಿರುದ್ಧವಾಗಿ ಮಾತನಾಡಿರುವುದನ್ನು ನೋಡಿ ನೆಟ್ಟಿಗರು, “ಮಾರ್ಗದರ್ಶಕ ಮಂಡಳಿಯಲ್ಲಿದ್ದ ಹಿರಿಯ ನಾಯಕರಿಗೂ ಕೊನೆಗೂ ಸರ್ಕಾರದ ನಿಲುವುಗಳು ತಪ್ಪು ಎಂದು ಅರ್ಥವಾಯಿತೇ?” ಎಂದು ವ್ಯಂಗ್ಯವಾಡಿದ್ದಾರೆ.

ಪ್ರಸ್ತುತ ಬಿಜೆಪಿಯಲ್ಲಿ ಹಿರಿಯ ನಾಯಕರ ಮಾತುಗಳಿಗೆ ಮೌಲ್ಯವಿಲ್ಲದಂತಾಗಿದೆ ಎಂಬುದನ್ನು ಎತ್ತಿಹಿಡಿದ ಕೆಲವರು, “ಜೋಶಿ ಅವರ ಮಾತುಗಳನ್ನು ಸ್ವತಃ ಅವರದ್ದೇ ಪಕ್ಷದ ನಾಯಕರು ಕೇಳುತ್ತಾರೆಯೇ? ಇದು ಕೇವಲ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಸೀಮಿತವಾಗಲಿದೆ” ಎಂದು ಕಾಲೆಳೆದಿದ್ದಾರೆ.

ಜೋಶಿ ಅವರ ಹೇಳಿಕೆಯನ್ನು ರಾಜಕೀಯವಾಗಿ ಚರ್ಚೆಗೆ ಎಳೆದಿರುವ ವಿರೋಧ ಪಕ್ಷದ ಕಾರ್ಯಕರ್ತರು, “ನಿಮ್ಮದೇ ಪಕ್ಷದ ಹಿರಿಯ ಸ್ಥಾಪಕ ನಾಯಕರು ಹೇಳುತ್ತಿರುವುದನ್ನಾದರೂ ಸರ್ಕಾರ ಕೇಳಲಿ. ‘ವಿಕಸಿತ ಭಾರತ’ ಎಂಬುದು ಕೇವಲ ಜಾಹೀರಾತುಗಳಿಗೆ ಸೀಮಿತವೇ” ಎಂದು ಪ್ರಶ್ನಿಸಿದ್ದಾರೆ.

ಯುವತಿಯರ ಮೇಲೆ ನಡೆದ ಪೊಲೀಸ್ ಬಲಪ್ರಯೋಗದ ಕುರಿತು ಜೋಶಿ ಹೇಳಿದ್ದನ್ನು ನೆಟ್ಟಿಗರು ಬೆಂಬಲಿಸಿದ್ದು, ವಿದ್ಯಾರ್ಥಿಗಳ ನ್ಯಾಯಯುತ ಹೋರಾಟವನ್ನು ಹತೋಟಿಗೆ ತರಲು ಸರ್ಕಾರ ಹೀಗೆ ದೌರ್ಜನ್ಯ ಎಸಗುತ್ತಿರುವುದು ಖಂಡನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...