ಉತ್ತರಾಖಂಡ | ನಾನಕ್ ಮಠ ಗುರುದ್ವಾರ ಕರ ಸೇವಾ ಮುಖ್ಯಸ್ಥನ ಹತ್ಯೆ

Date:

ಉತ್ತರಾಖಂಡದ ನಾನಕ್ ಮಠ ಗುರುದ್ವಾರ ಕರ ಸೇವಾ ಪ್ರಮುಖ್‌ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಗುರುವಾರ ಬೆಳಗ್ಗೆ ಉಧಮ್ ಸಿಂಗ್ ನಗರದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬೆಳಿಗ್ಗೆ 6:30 ರ ಸುಮಾರಿಗೆ ಡೇರಾದೊಳಗೆ ಬಾಬಾ ತಾರ್ಸೆಮ್ ಸಿಂಗ್ ಮೇಲೆ ಗುಂಡು ಹಾರಿಸಿದ್ದಾರೆ. ಸಿಂಗ್ ಅವರನ್ನು ಖತಿಮಾದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಉಧಮ್ ಸಿಂಗ್ ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮಂಜುನಾಥ್ ಟಿಸಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಉತ್ತರಾಖಂಡ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಎಪಿ ಅಂಶುಮಾನ್, “ಬೆಳಿಗ್ಗೆ 6:30 ರ ಸುಮಾರಿಗೆ ಡೇರಾದ ನಾನಕ್ ಮಠ ಕರ ಸೇವಾ ಮುಖ್ಯಸ್ಥ ಬಾಬಾ ತಾರ್ಸೆಮ್ ಸಿಂಗ್ ಅವರ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಹಂತಕರನ್ನು ಪತ್ತೆಹಚ್ಚಲು ನಾವು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಜೊತೆಗೆ ಹಲವಾರು ಪೊಲೀಸ್ ತಂಡಗಳನ್ನು ನಿಯೋಜಿಸಿದ್ದೇವೆ. ಹತ್ಯೆಯ ತನಿಖೆಗಾಗಿ ನಾವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುತ್ತೇವೆ” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ಮಾತನಾಡಿ, ” ಇದು ತುಂಬಾ ಗಂಭೀರವಾದ ವಿಷಯ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಎಸ್‌ಎಸ್‌ಪಿ ಈಗಾಗಲೇ ಅಲ್ಲಿದ್ದಾರೆ, ಡಿಐಜಿ ಕೂಡಾ ಅಲ್ಲಿಗೆ ತಲುಪುತ್ತಿದ್ದಾರೆ. ಅವರು ಅಪರಾಧದ ಸ್ಥಳವನ್ನು ಪರಿಶೀಲಿಸುತ್ತಾರೆ” ಎಂದು ಹೇಳಿದರು.

ನಾನಕ್ ಮಠ ಸಾಹಿಬ್ ಎಂದೂ ಕರೆಯಲ್ಪಡುವ ನಾನಕ್ ಮಠ ಗುರುದ್ವಾರವು ಸಿಖ್ ತೀರ್ಥಯಾತ್ರಾ ಸ್ಥಳವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೈಲಿನಲ್ಲಿ ದೆಹಲಿ ಸಿಎಂ; ಎಎಪಿ ಚುನಾವಣಾ ಪ್ರಚಾರದಲ್ಲಿ ಕೇಜ್ರಿವಾಲ್ ಪತ್ನಿಗೆ ಪ್ರಮುಖ ಪಾತ್ರ

ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದು ಈಗ...

ತೆಲಂಗಾಣ | 4,568 ಕೋಟಿ ರೂ. ಒಡೆಯ ಕೆ.ವಿಶ್ವೇಶ್ವರ ರೆಡ್ಡಿ ರಾಜ್ಯದ ಅತ್ಯಂತ ಶ್ರೀಮಂತ ಬಿಜೆಪಿ ಅಭ್ಯರ್ಥಿ

ತೆಲಂಗಾಣದ ಲೋಕಸಭಾ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಚೆವೆಳ್ಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...

ಮಣಿಪುರ ಹಿಂಸಾಚಾರ | ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮ

ಮಣಿಪುರದ ನರಂಸೇನಾ ಪ್ರದೇಶದಲ್ಲಿ ಶುಕ್ರವಾರ ಮಧ್ಯರಾತ್ರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಕೇಂದ್ರೀಯ...

ಪಶ್ಚಿಮ ಬಂಗಾಳ | ಪ್ರಧಾನಿ ಚುನಾವಣಾ ರ್‍ಯಾಲಿ ಬಳಿಕ ಟಿಎಂಸಿಯಿಂದ ಮೋದಿ ಹೇಳಿಕೆಗಳ ಫ್ಯಾಕ್ಟ್‌ಚೆಕ್!

ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭರ್ಜರಿಯಾಗಿ ರ್‍ಯಾಲಿ ನಡೆಸಿ ಚುನಾವಣಾ...