ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ಆದಾಯ ತೆರಿಗೆ ಸ್ಲ್ಯಾಬ್‌ನ ಪರಿಷ್ಕೃತ ಆವೃತ್ತಿಯನ್ನು ಘೋಷಿಸಿದ್ದಾರೆ.
- ಮೂರು ಲಕ್ಷ ಆದಾಯವಿರುವವರು ಯಾವುದೇ ತೆರಿಗೆ ಪಾವತಿಸುವಂತಿಲ್ಲ.
- 3 ರಿಂದ 7 ಲಕ್ಷ ರೂ. ವಿದ್ದಲ್ಲಿ ಶೇ.5 ರಷ್ಟು ತೆರಿಗೆ
- 7 ರಿಂದ 10 ಲಕ್ಷ ರೂ. ಆದಾಯವಿರುವವರು ಶೇ.10 ರಷ್ಟು ತೆರಿಗೆ
- 10 ರಿಂದ 12 ಲಕ್ಷ ರೂ.ಆದಾಯಕ್ಕೆ ಶೇ.15 ರಷ್ಟು ತೆರಿಗೆ
- 12 ರಿಂದ 15 ಲಕ್ಷ ರೂ. ಆದಾಯವಿರುವವರು ಶೇ.20 ರಷ್ಟು ತೆರಿಗೆ
- 15 ಲಕ್ಷಕ್ಕೂ ಹೆಚ್ಚಿನ ಆದಯವಿದ್ದವರು ಶೇ.30 ರಷ್ಟು ತೆರಿಗೆ ಪಾವತಿಸಬೇಕು
- ಅದೇ ರೀತಿ ಪ್ರಮಾಣಿತ ತೆರಿಗೆ ಕಡಿತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂ.ವರೆಗೆ ಹೆಚ್ಚಿಸಲಾಗಿದೆ.
- ಅಲ್ಪಾವಧಿ ಲಾಭ ಪಡೆಯುವ ಆಸ್ತಿಗಳಿಗೆ ಶೇ. 20 ರಷ್ಟು ತೆರಿಗೆ ವಿಧಿಸಿದರೆ, ದೀರ್ಘಾವಧಿ ಲಾಭ ಪಡೆಯುವ ಆಸ್ತಿಗಳು ಹಾಗೂ ಹಣಕಾಸಿನೇತರ ಸ್ವತ್ತಿನ ಮೇಲೆ ಶೇ. 12.5 ರಷ್ಟು ತೆರಿಗೆ ವಿಧಿಸಲಾಗುತ್ತದೆ.
- ವಿದೇಶಿ ಕಂಪನಿಗಳಿಗೆ ಕಾರ್ಪೋರೇಟ್ ತೆರಿಗೆಯನ್ನು ಶೇ.40 ರಿಂದ 35ಕ್ಕೆ ಇಳಿಸಲಾಗಿದೆ
- ಹೊರ ತೆರಿಗೆ ಪದ್ಧತಿಯಿಂದ ಪ್ರತಿಯೊಬ್ಬ ವೇತನದಾರರು 17 ಸಾವಿರ ರೂ. ಉಳಿಸಬಹುದು