ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್ನಲ್ಲಿ ಮಧ್ಯಮ ವರ್ಗವನ್ನೇ ಗುರಿ ಮಾಡಿಕೊಂಡಿದ್ದು, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಏರಿಕೆ ಮಾಡಿದೆ.
ಬಜೆಟ್ ಭಾಷಣದ ವೇಳೆ ಈ ವಿನಾಯಿತಿಯನ್ನು ಘೋಷಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ನಮ್ಮ ದೇಶದ ಮಧ್ಯಮ ವರ್ಗವು ದೇಶದ ಆರ್ಥಿಕತೆಗೆ ಶಕ್ತಿಯನ್ನು ನೀಡುವ ವರ್ಗವಾಗಿದೆ. ಅವರ ಕೊಡುಗೆಯನ್ನು ಗುರುತಿಸಿ, ನಾವು ನಿಯತಕಾಲಿಕವಾಗಿ ತೆರಿಗೆ ಹೊರೆಗಳನ್ನು ಕಡಿಮೆ ಮಾಡಿದ್ದೇವೆ. 12 ಲಕ್ಷ ರೂ.ವರೆಗಿನ ಆದಾಯದವರೆಗೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
#UnionBudget2025 | "The middle class provide strengths to the economy. In recognition of their contribution, we have periodically reduced the tax burdens. I am now happy to announce that there will be no income tax up to an income of Rs 12 lakhs."says Finance Minister Nirmala… pic.twitter.com/9IVCnhEUb1
— ANI (@ANI) February 1, 2025
ನಿರ್ಮಲಾ ಸೀತಾರಾಮನ್ ಅವರು ಈ ಘೋಷಣೆ ಮಾಡುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಸಂಸತ್ನ ಮೇಜು ಕುಟ್ಟಿ ಸಂಭ್ರಮಿಸಿದರು.
ಈ ಹಿಂದೆ ಆದಾಯ ತೆರಿಗೆ ವಿನಾಯಿತಿಯನ್ನು ಏಳು ಲಕ್ಷದವರೆಗೆ ನೀಡಲಾಗಿತ್ತು. ಈ ಬಾರಿಯ ಬಜೆಟ್ನಲ್ಲಿ ಅದನ್ನು 12 ಲಕ್ಷದವರೆಗೆ ಏರಿಕೆ ಮಾಡುವ ಮೂಲಕ ಮೋದಿ ಸರ್ಕಾರವು, ಮಧ್ಯಮ ವರ್ಗದ ಓಲೈಕೆಗೆ ಮುಂದಾಗಿದೆ.

