ಮುಂಬೈನ ಸಮುದ್ರ ಸೇತುವೆ ಅಟಲ್ ಸೇತು ವಿನ ಬಳಿ ಟಾಟಾ ನೆಕ್ಸನ್ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬರು ಸಾರ್ವಜನಿಕರು ನೋಡನೋಡುತ್ತಿದ್ದಂತೆಯೆ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಯುವಕ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೃತ ಯುವಕನನ್ನು 38 ವರ್ಷದ ಕೆ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ದೋಬಿವಿಲಿ ಪ್ರದೇಶದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು.
ಶ್ರೀನಿವಾಸ್ ಅವರು ಮುಂಬೈನ ಸಮುದ್ರ ಸೇತುವೆ ಅಟಲ್ ಸೇತುವಿನ ಮಾರ್ಗದ ನಹ್ವಾ ಶೆವಾದ ಮಾರ್ಗದಲ್ಲಿ ಜು.24 ರಂದು ಸಾಗುತ್ತಿದ್ದಾಗ ಮಾರ್ಗಮಧ್ಯೆ ಮಧ್ಯಾಹ್ನ 12.30 ರಂದು ಕಾರು ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಿನಕ್ಕೆ 14 ಗಂಟೆ ಕೆಲಸ ಅಮಾನವೀಯ ನಡೆ, ಸರ್ಕಾರ ತಿರಸ್ಕರಿಸಲಿ
ಕುಟುಂಬಸ್ಥರ ಪ್ರಕಾರ ಶ್ರೀನಿವಾಸ್ ಅವರು ಹಣಕಾಸು ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಪೊಲೀಸರ ಪ್ರಕಾರ ಶ್ರೀನಿವಾಸ್ ಅವರು 2023ರಲ್ಲಿ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಸೇತುವೆಯಿಂದ ಬೀಳುವ ಮುನ್ನ ಪತ್ನಿ ಹಾಗೂ ಮಗಳೊಂದಿಗೆ ಶ್ರೀನಿವಾಸ್ ಅವರು ಮಾತನಾಡಿದ್ದರು.
ಅಟಲ್ ಸೇತುವೆಯಿಂದ ಆತ್ಮಹತ್ಯೆ ಮಾಡಿಕೊಂಡ ಎರಡನೇ ಪ್ರಕರಣ ಇದಾಗಿದೆ. ಈ ಮೊದಲು ಮಾ.20 ರಂದು ಮಹಿಳಾ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.
38-year-old engineer Srinivasan Kuruturi committed suicide by jumping into the sea from #AtalSetu in #Mumbai. He was financially troubled.
What changes are needed to address financial stress and mental health?#Maharashtra @mybmc pic.twitter.com/YWgxmai4Iu
— Backchod Indian (@IndianBackchod) July 25, 2024