ನಿರ್ಗಮಿಸುವ ಪ್ರಧಾನಿ ನರೇಂದ್ರ ಮೋದಿಗೆ ಹಿಂದೂ – ಮುಸ್ಲಿಂ ರಾಜಕೀಯ ಬಿಟ್ಟು ಬೇರೇನು ಗೊತ್ತಿಲ್ಲ. ಮೋದಿಯ ಗ್ಯಾರಂಟಿ ಹಳ್ಳ ಹಿಡಿದಿದೆ. ಇದಲ್ಲದೆ 400 ಸಂಖ್ಯೆ ನಿಶ್ಚಿತ ಸಮಾಧಿ ಸ್ಥಿತಿಗೆ ಕೊಂಡೊಯ್ಯಲಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ನಿರ್ಗಮಿಸುವ ಪ್ರಧಾನಿ ಒಬ್ಬ ಮಹಾನ್ ಸುಳ್ಳುಗಾರ ಎಂದು ಇಡೀ ದೇಶಕ್ಕೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.
ಆದರೂ ಮೋದಿ ಅವರು ಹಿಂದೂ ಮುಸ್ಲಿಂ ರಾಜಕೀಯದ ಸುಳ್ಳುಗಳನ್ನು ದಿನನಿತ್ಯ ಪಠಿಸುತ್ತಿರುವುದು ತಮ್ಮ ಕರುಣಾಜನಕ ಮಾನದಂಡವನ್ನೇ ಅನುಸರಿಸುತ್ತಿರುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ. 2024ರ ಏಪ್ರಿಲ್ 19ರಂದು ದಾಖಲಾದ ಈ ವಿಷಯ ನಮ್ಮ ಮನಸ್ಸಿನಿಂದ ಅಳಿಸಿ ಹೋಗುವುದಿಲ್ಲ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?
ನಿರ್ಗಮಿಸುವ ಪ್ರಧಾನಿಯವರು ನಿರ್ಲಜ್ಜವಾಗಿ ಬಳಸಿದ ಕೋಮುವಾದಿ ಭಾಷೆ, ಸಂಕೇತಗಳು ಹಾಗೂ ಪ್ರಸ್ತಾಪಗಳು ಅವರು ತಮ್ಮ ಮನಸ್ಸಿನಿಂದ ಅಳಿಸಬಹುದು. ಆದರೆ ನಮ್ಮ ಮನಸ್ಸಿನಿಂದ ಅಳಿದು ಹೋಗುವುದಿಲ್ಲ. ನಾವು ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ಕ್ರಮ ಕೈಗೊಳ್ಳಬೇಕಾಗಿದೆ. ನೋವಿನ ಸಂಗತಿಯಂದರೆ ಕ್ರಮ ಜರುಗಿಸಲಾಗಿಲ್ಲ ಎಂದು ಜೈರಾಮ್ ರಮೇಶ್ ಬೇಸರ ವ್ಯಕ್ತಪಡಿಸಿದರು.
ಪ್ರಚಾರದ ಉದ್ದಕ್ಕೂ ನಿರ್ಗಮಿತ ಪ್ರಧಾನಿಗೆ ಹಿಂದೂ – ಮುಸ್ಲಿಂ ರಾಜಕೀಯ ಬಿಟ್ಟು ಬೇರೇನು ರಾಜಕೀಯ ಗೊತ್ತಿರಲಿಲ್ಲ. ಮೋದಿಯವರ ಪಕ್ಷದ ಪ್ರಣಾಳಿಕೆ ಪ್ರಯೋಜನಕ್ಕೆ ಬಾರದ ಸ್ಥಿತಿಗೆ ತಲುಪಿದೆ. ಕಳೆದ ಕೆಲವು ತಿಂಗಳುಗಳಿಂದ ಮೋದಿಯವರ ಗ್ಯಾರಂಟಿಗೆ ಸಾರ್ವಜನಿಕವಾಗಿ ಭರ್ಜರಿ ಪ್ರಚಾರ ಕೊಡಲಾಯಿತಾದರೂ ಅದು ಹಳ್ಳ ಹಿಡಿಯಿತು.400 ಸಂಖ್ಯೆ ಕೂಡ ಸಮಾಧಿ ಸ್ಥಿತಿ ತಲುಪಿದೆ. ಆದ ಕಾರಣ ಹತಾಶ ಸ್ಥಿತಿಗೆ ತಲುಪಿರುವ ಮೋದಿ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಕಾರ್ಯಸೂಚಿ ಬಗ್ಗೆ ಭಾರತದ ಜನರಿಗೆ ಅಪಪ್ರಚಾರ ಮೂಡಿಸುತ್ತಿದ್ದಾರೆ. ಮೋದಿಯ ನಿರ್ಗಮನದ ವಿಷಯ ಅವರಿಗೆ ನೆನಪಿನ ಶಕ್ತಿಯನ್ನು ಇನ್ನಷ್ಟು ಕಳೆದುಕೊಳ್ಳುವಂತೆ ಮಾಡಿದೆ ಎಂದು ಜೈರಾಮ್ ರಮೇಶ್ ಪ್ರಧಾನಿ ವಿರುದ್ಧ ಟೀಕಾಪ್ರಹಾರ ಮಾಡಿದರು.
