ನಿರ್ಗಮಿಸುವ ಪ್ರಧಾನಿಗೆ ಹಿಂದೂ – ಮುಸ್ಲಿಂ ರಾಜಕೀಯ ಬಿಟ್ಟು ಬೇರೇನು ಗೊತ್ತಿಲ್ಲ: ಕಾಂಗ್ರೆಸ್ ವಾಗ್ದಾಳಿ

Date:

ನಿರ್ಗಮಿಸುವ ಪ್ರಧಾನಿ ನರೇಂದ್ರ ಮೋದಿಗೆ ಹಿಂದೂ – ಮುಸ್ಲಿಂ ರಾಜಕೀಯ ಬಿಟ್ಟು ಬೇರೇನು ಗೊತ್ತಿಲ್ಲ. ಮೋದಿಯ ಗ್ಯಾರಂಟಿ ಹಳ್ಳ ಹಿಡಿದಿದೆ. ಇದಲ್ಲದೆ 400 ಸಂಖ್ಯೆ ನಿಶ್ಚಿತ ಸಮಾಧಿ ಸ್ಥಿತಿಗೆ ಕೊಂಡೊಯ್ಯಲಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, ನಿರ್ಗಮಿಸುವ ಪ್ರಧಾನಿ ಒಬ್ಬ ಮಹಾನ್‌ ಸುಳ್ಳುಗಾರ ಎಂದು ಇಡೀ ದೇಶಕ್ಕೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.

ಆದರೂ ಮೋದಿ ಅವರು ಹಿಂದೂ ಮುಸ್ಲಿಂ ರಾಜಕೀಯದ ಸುಳ್ಳುಗಳನ್ನು ದಿನನಿತ್ಯ ಪಠಿಸುತ್ತಿರುವುದು ತಮ್ಮ ಕರುಣಾಜನಕ ಮಾನದಂಡವನ್ನೇ ಅನುಸರಿಸುತ್ತಿರುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ. 2024ರ ಏಪ್ರಿಲ್ 19ರಂದು ದಾಖಲಾದ ಈ ವಿಷಯ ನಮ್ಮ ಮನಸ್ಸಿನಿಂದ ಅಳಿಸಿ ಹೋಗುವುದಿಲ್ಲ ಎಂದು ಜೈರಾಮ್‌ ರಮೇಶ್ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?

ನಿರ್ಗಮಿಸುವ ಪ್ರಧಾನಿಯವರು ನಿರ್ಲಜ್ಜವಾಗಿ ಬಳಸಿದ ಕೋಮುವಾದಿ ಭಾಷೆ, ಸಂಕೇತಗಳು ಹಾಗೂ ಪ್ರಸ್ತಾಪಗಳು ಅವರು ತಮ್ಮ ಮನಸ್ಸಿನಿಂದ ಅಳಿಸಬಹುದು. ಆದರೆ ನಮ್ಮ ಮನಸ್ಸಿನಿಂದ ಅಳಿದು ಹೋಗುವುದಿಲ್ಲ. ನಾವು ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ಕ್ರಮ ಕೈಗೊಳ್ಳಬೇಕಾಗಿದೆ. ನೋವಿನ ಸಂಗತಿಯಂದರೆ ಕ್ರಮ ಜರುಗಿಸಲಾಗಿಲ್ಲ ಎಂದು ಜೈರಾಮ್‌ ರಮೇಶ್ ಬೇಸರ ವ್ಯಕ್ತಪಡಿಸಿದರು.

ಪ್ರಚಾರದ ಉದ್ದಕ್ಕೂ ನಿರ್ಗಮಿತ ಪ್ರಧಾನಿಗೆ ಹಿಂದೂ – ಮುಸ್ಲಿಂ ರಾಜಕೀಯ ಬಿಟ್ಟು ಬೇರೇನು ರಾಜಕೀಯ ಗೊತ್ತಿರಲಿಲ್ಲ. ಮೋದಿಯವರ ಪಕ್ಷದ ಪ್ರಣಾಳಿಕೆ ಪ್ರಯೋಜನಕ್ಕೆ ಬಾರದ ಸ್ಥಿತಿಗೆ ತಲುಪಿದೆ. ಕಳೆದ ಕೆಲವು ತಿಂಗಳುಗಳಿಂದ ಮೋದಿಯವರ ಗ್ಯಾರಂಟಿಗೆ ಸಾರ್ವಜನಿಕವಾಗಿ ಭರ್ಜರಿ ಪ್ರಚಾರ ಕೊಡಲಾಯಿತಾದರೂ ಅದು ಹಳ್ಳ ಹಿಡಿಯಿತು.400 ಸಂಖ್ಯೆ ಕೂಡ ಸಮಾಧಿ ಸ್ಥಿತಿ ತಲುಪಿದೆ. ಆದ ಕಾರಣ ಹತಾಶ ಸ್ಥಿತಿಗೆ ತಲುಪಿರುವ ಮೋದಿ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಕಾರ್ಯಸೂಚಿ ಬಗ್ಗೆ ಭಾರತದ ಜನರಿಗೆ ಅಪಪ್ರಚಾರ ಮೂಡಿಸುತ್ತಿದ್ದಾರೆ. ಮೋದಿಯ ನಿರ್ಗಮನದ ವಿಷಯ ಅವರಿಗೆ ನೆನಪಿನ ಶಕ್ತಿಯನ್ನು ಇನ್ನಷ್ಟು ಕಳೆದುಕೊಳ್ಳುವಂತೆ ಮಾಡಿದೆ ಎಂದು ಜೈರಾಮ್‌ ರಮೇಶ್ ಪ್ರಧಾನಿ ವಿರುದ್ಧ ಟೀಕಾಪ್ರಹಾರ ಮಾಡಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಪ್ರದೇಶದಲ್ಲಿ ಅಪಘಾತ: 11 ಮಂದಿ ಸಾವು, 10 ಜನರಿಗೆ ಗಾಯ

ಉತ್ತರ ಪ್ರದೇಶ ಶಹಜಹಾನ್‌ಪುರದಲ್ಲಿ ಬಸ್‌ ಹಾಗೂ ಟ್ರಕ್ ನಡುವೆ  ಸಂಭವಿಸಿದ ಭೀಕರ...

ಬಾಂಗ್ಲಾದೇಶ ಸಂಸದನ ಹತ್ಯೆ ಪ್ರಕರಣ: ತನಿಖೆಗಾಗಿ ಢಾಕಾ ಪೊಲೀಸರ ತಂಡ ಕೋಲ್ಕತ್ತಾಗೆ ಭೇಟಿ

ಕೋಲ್ಕತ್ತಾದಲ್ಲಿ ಈ ವಾರದ ಆರಂಭದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್...

ಧ್ವನಿ ಬದಲಾಯಿಸುವ ಆ್ಯಪ್ ಬಳಸಿ 7 ಆದಿವಾಸಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

30 ವರ್ಷದ ವ್ಯಕ್ತಿಯೊಬ್ಬ ಧ್ವನಿ ಬದಲಾವಣೆ ಮಾಡುವ ಆ್ಯಪ್ ಬಳಸಿ, ಶಿಕ್ಷಕಿಯಾಗಿ...

ಮೊದಲ ಬಾರಿಗೆ ಮತ ಚಲಾಯಿಸಿದ ಹಣಕಾಸು ಆಯೋಗದ ಮುಖ್ಯಸ್ಥ ಅರವಿಂದ್ ಪನಗಾರಿಯಾ

ಹದಿನಾರನೇ ಹಣಕಾಸು ಆಯೋಗದ ಅಧ್ಯಕ್ಷ, 71 ವರ್ಷ ವಯಸ್ಸಿನ ಅರವಿಂದ್ ಪನಗಾರಿಯಾ...