ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?

Date:

‘ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು’ ಎನ್ನುವುದು ಕೇವಲ ಒಂದು ಪೊಲಿಟಿಕಲ್ ಸ್ಟೇಟ್‌ಮೆಂಟ್, ಅಷ್ಟೇ. ಆದರೆ ಅದು ಬಿಜೆಪಿ ವಲಯದಲ್ಲಿ ಸೃಷ್ಟಿಸಿದ ಸಂಚಲನ ಸಾಮಾನ್ಯದ್ದಲ್ಲ. ಉಂಟು ಮಾಡಿದ ತಲ್ಲಣ ಅಷ್ಟಿಷ್ಟಲ್ಲ. ಕಳೆದ ಹತ್ತು ವರ್ಷಗಳಿಂದ ಪ್ರಭುತ್ವದ ವಿರುದ್ಧ ಮಾತನಾಡಿದವರನ್ನು ಬಗ್ಗು ಬಡಿದಿದ್ದವರು, ಈಗ ಬೆಚ್ಚಿ ಬೀಳುತ್ತಿದ್ದಾರೆ. ಸಾಮಾನ್ಯರ ಸದ್ದು ಕೇಳಿಸುತ್ತಿದೆ, ಸರ್ವಾಧಿಕಾರಿಯ ಸದ್ದು ಅಡಗುತ್ತಿದೆ… ಭಾರತ ದೇಶ ಬದಲಾಗುತ್ತಿದೆ.

ಆಮ್ ಆದ್ಮಿ ಪಕ್ಷದ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜೈಲಿನಿಂದ ಹೊರಬಂದ ತಕ್ಷಣ, ಮೊದಲ ಸಾರ್ವಜನಿಕ ಭಾಷಣದಲ್ಲಿ, ‘ಮುಂದಿನ ವರ್ಷದ ಸೆಪ್ಟೆಂಬರ್‌ 17ಕ್ಕೆ ಮೋದಿಗೆ 75 ವರ್ಷ ತುಂಬುತ್ತದೆ. 75 ಆದವರಿಗೆ ಬಿಜೆಪಿಯಲ್ಲಿ ಕಡ್ಡಾಯ ನಿವೃತ್ತಿ, ಸ್ವತಃ ಅವರೇ ನಿಯಮ ರೂಪಿಸಿದ್ದಾರೆ. ಅದರಂತೆ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್‌ ಜೋಶಿ, ಸುಮಿತ್ರಾ ಮಹಾಜನ್‌, ಯಶವಂತ್‌ ಸಿನ್ಹಾ ನಿವೃತ್ತರಾದರು. ಈಗ ಪ್ರಧಾನಿ ಮೋದಿ ಸರದಿ. ಹಾಗಾದರೆ ಎನ್‌ಡಿಎ ಮೈತ್ರಿಕೂಟದ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು? ಮೋದಿ ಪ್ರಧಾನಿಯಾಗುವುದೇ ಗ್ಯಾರಂಟಿ ಇಲ್ಲದಾಗ ಮೋದಿ ಗ್ಯಾರಂಟಿಗಳನ್ನು ಜಾರಿಗೆ ತರುವವರು ಯಾರು?’ ಎಂದು ವಿರೋಧಿ ಪಾಳೆಯಕ್ಕೆ ಪ್ರಶ್ನೆ ಎಸೆದರು.

- Advertisement -

ಕೇಜ್ರಿವಾಲ್ ಮಾತನಾಡಿ ಮುಗಿಯುವಷ್ಟರಲ್ಲಿ ಗೃಹ ಮಂತ್ರಿ ಅಮಿತ್ ಶಾ, ’75 ದಾಟಿದ ಮೇಲೂ ಮೋದಿಯೇ ಪ್ರಧಾನಿ’ ಎಂದು ಬಡಬಡಿಸಿದರು. ಸಾಲದು ಎಂದು ಸಹಾಯಕ್ಕೆ ಸಚಿವರನ್ನು ಸೆಳೆದು ತೇಪೆ ಹಚ್ಚಲು ತಿಣುಕಾಡಿದರು. ಅಮಿತ್ ಶಾರಿಂದ ಶುರುವಾದ ‘ಮೋದಿಯೇ ಪ್ರಧಾನಿ’ ಅಭಿಯಾನದ ರೂಪ ಪಡೆಯಿತು. ಮೋದಿ ಪರಿವಾರ ಅದನ್ನು ದೇಶದಾದ್ಯಂತ, ಇವತ್ತಿನವರೆಗೂ ಹಂಚುತ್ತಲೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

‘ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು’ ಎನ್ನುವುದು ಕೇವಲ ಒಂದು ಪೊಲಿಟಿಕಲ್ ಸ್ಟೇಟ್‌ಮೆಂಟ್, ಅಷ್ಟೇ. ಆದರೆ ಅದು ಬಿಜೆಪಿ ವಲಯದಲ್ಲಿ ಸೃಷ್ಟಿಸಿದ ಸಂಚಲನ ಸಾಮಾನ್ಯದ್ದಲ್ಲ. ಉಂಟು ಮಾಡಿದ ತಲ್ಲಣ ಅಷ್ಟಿಷ್ಟಲ್ಲ. ಬಿಜೆಪಿಯ ಅಕ್ಷೋಹಿಣಿ ಸೈನ್ಯ(ಐಟಿ ಸೆಲ್)ವಂತೂ ಅಲ್ಲಾಡಿಹೋಗಿದೆ. ಹೊಸ ಹೊಸ ನರೇಟಿವ್ ಕಟ್ಟಲು, ಬ್ರಹ್ಮಾಂಡಕ್ಕೆ ಬಿತ್ತಲು, ಭಕ್ತರನ್ನು ಹಿಡಿದಿಟ್ಟುಕೊಳ್ಳಲು ಶಕ್ತಿಮೀರಿ ಶ್ರಮಿಸುತ್ತಿದೆ.

ಕೇವಲ ಒಂದೇ ಒಂದು ರಾಜಕೀಯ ಹೇಳಿಕೆಗೆ ಕಂಗಾಲಾಗಿಹೋಗಿರುವ ಬಿಜೆಪಿ, ಕಳೆದ ಹತ್ತು ವರ್ಷಗಳಿಂದ ಅಂತಹ ತಲ್ಲಣಗಳನ್ನು ಉಂಟು ಮಾಡುವ ಸ್ಥಾನದಲ್ಲಿ ತಳವೂರಿತ್ತು. ತಮ್ಮ ವಿರುದ್ಧ ಮಾತನಾಡುವವರನ್ನು ಕಂಗಾಲಾಗಿಸುವುದೇ ಅದರ ಕೆಲಸವಾಗಿತ್ತು. ಬಿಜೆಪಿ ಸರ್ಕಾರ ಮತ್ತು ಮೋದಿ ವಿರುದ್ಧ ಮಾತನಾಡಿದ ಪತ್ರಕರ್ತರು, ಬುದ್ಧಿಜೀವಿಗಳು, ಚಿಂತಕರು, ಕಲಾವಿದರು, ಸಾಮಾನ್ಯರು, ಸಾಮಾಜಿಕ ಹೋರಾಟಗಾರರು ಮತ್ತು ರಾಜಕೀಯ ನಾಯಕರನ್ನು ಬಿಜೆಪಿ ಬಗ್ಗು ಬಡಿದಿತ್ತು. ಕೆಲವರನ್ನು ಕಾರಣವಿಲ್ಲದೆ ಬಂಧಿಸಿ, ಯುಎಪಿಎ ಕಾಯ್ದೆಯಡಿ ಕಂಬಿ ಹಿಂದೆ ಕೂರಿಸಿತ್ತು. ಅವರಿಗೆ ಜಾಮೀನು ಕೂಡ ಸಿಗದಂತೆ ನೋಡಿಕೊಂಡಿತ್ತು.

ಆ ಮೂಲಕ ದೇಶದಲ್ಲಿ ಪ್ರಭುತ್ವವನ್ನು ಪ್ರಶ್ನಿಸುವ, ಮುಕ್ತವಾಗಿ ಮಾತನಾಡುವ ವಾತಾವರಣವೇ ಇಲ್ಲದಂತಾಗಿತ್ತು. ಪ್ರಜೆಗಳು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳಿಂದಲೇ ಪ್ರಜೆಗಳ ಹಕ್ಕಿನ ಹರಣವಾಗಿತ್ತು. ಪ್ರಜಾಪ್ರಭುತ್ವ ಕಾಲು ಮುರಿದುಕೊಂಡು ಕೂತಿತ್ತು. ಸರ್ವಾಧಿಕಾರ ಸದ್ದು ಮಾಡುತ್ತಿತ್ತು.

ಶೋಷಿತರ, ಅಸಹಾಯಕರ, ದಮನಿತರ ದನಿಯಾಗಿ ಕೆಲಸ ಮಾಡಬೇಕಾದ ಸುದ್ದಿ ಮಾಧ್ಯಮಗಳು ಪ್ರಭುತ್ವದ ಪರ ವಕಾಲತ್ತು ವಹಿಸತೊಡಗಿದವು. ಸಾರಾಸಗಟು ಖರೀದಿಗೊಳಪಟ್ಟು ‘ಗೋದಿ ಮೀಡಿಯಾ’ ಎಂಬ ಹೊಸ ವ್ಯಾಖ್ಯಾನವನ್ನೇ ಹುಟ್ಟುಹಾಕಿದವು. ಅಳಿದುಳಿದ ಭಿನ್ನ ಧ್ವನಿಗಳಾದ ರಾಜದೀಪ್ ಸರದೇಸಾಯಿ, ಬರ್ಕಾ ದತ್, ಪ್ರಣಯ್ ರಾಯ್, ರವೀಶ್ ಕುಮಾರ್, ಪ್ರಸೂನ್ ಬಾಜಪೈ, ಕರನ್ ಥಾಪರ್‍‌ಗಳಂತಹ ಹತ್ತಾರು ಭಾಷೆಗಳ ನೂರಾರು ಪತ್ರಕರ್ತರಿಗೆ ಸುದ್ದಿ ಸಂಸ್ಥೆಗಳಲ್ಲಿ ಸ್ಥಳವಿಲ್ಲದಂತಾಯಿತು. ಹಲವರ ಮೇಲೆ ಐಟಿ ದಾಳಿ ಮಾಡಿಸಿ, ನೈತಿಕವಾಗಿ ಕುಗ್ಗಿಸಲಾಯಿತು. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಷ್ಟವಾಯಿತು.

ಇನ್ನು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒಂದು ಹೇಳಿಕೆ ನೀಡಿದರೆ, ಅದನ್ನು ಆ ಕ್ಷಣವೇ ಬಿಜೆಪಿ ಐಟಿ ಸೆಲ್ ತಿರುಚಿ, ಅದನ್ನು ವಾಟ್ಸಾಪ್ ಯೂನಿವರ್ಸಿಟಿಗೆ ರವಾನಿಸುತ್ತಿತ್ತು. ಅದು ಅತ್ಯಂತ ವೇಗವಾಗಿ ಇಡೀ ದೇಶಕ್ಕೆ ತಲುಪಿ, ರಾಹುಲ್ ಎಂದರೆ ನಗೆಪಾಟಲಿನ ವ್ಯಕ್ತಿ ಎಂದು ಬಿಂಬಿಸಲಾಗುತ್ತಿತ್ತು. ಎಚ್ಚೆತ್ತುಕೊಂಡ ರಾಹುಲ್, ಮತ್ತೊಂದು ಟ್ವೀಟ್ ಮೂಲಕ ತಪ್ಪನ್ನು ಸರಿ ಮಾಡಿ ಹಂಚುವಷ್ಟರಲ್ಲಿ ಸುಳ್ಳು ಊರಾಡಿ ಬಂದಿರುತ್ತಿತ್ತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದೂರುಗಳಿಗೆ ಬೆಲೆ ಇಲ್ಲ, ಕ್ರಮ ಕೈಗೊಳ್ಳಲ್ಲ, ಆಯೋಗಕ್ಕೆ ಹಲ್ಲೂ ಇಲ್ಲ

ಟ್ವಿಟರ್, ಫೇಸ್ ಬುಕ್, ವಾಟ್ಸಾಪ್, ಯೂ ಟ್ಯೂಬ್, ಇನ್ಸ್ಟಾಗ್ರಾಂಗಳೆಂಬ ಸಾಮಾಜಿಕ ಮಾಧ್ಯಮಗಳನ್ನು ಬಿಜೆಪಿ ವ್ಯವಸ್ಥಿತವಾಗಿ ಬಳಸಿಕೊಂಡಿತು. ಈ ಸಾಮಾಜಿಕ ಮಾಧ್ಯಮಗಳು ಹೊರದೇಶದ ಮಾಲೀಕತ್ವ ಹೊಂದಿದ್ದು, ಅವುಗಳು ದೇಶದಲ್ಲಿ ಅಂಗಡಿ ತೆರೆಯಲು, ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಕೇಂದ್ರದ ಬಿಜೆಪಿ ಸರ್ಕಾರ ಸಹಕರಿಸಿತು. ಅವರು ಬಿಜೆಪಿಯ ಐಟಿ ಸೆಲ್ ಸೃಷ್ಟಿಸುವ ಸುಳ್ಳುಗಳಿಗೆ ವೇದಿಕೆ ಒದಗಿಸಿಕೊಟ್ಟರು.

ಕಳೆದ ಹತ್ತು ವರ್ಷಗಳಲ್ಲಿ ದೇಶದ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಬಿಜೆಪಿ ಮತ್ತು ಮೋದಿಯ ಪರವಿದ್ದು, ಭಿನ್ನ ಧ್ವನಿಯ ಸದ್ದು ಅಡಗಿಸಲಾಗಿತ್ತು. ಮೋದಿ ಮಹಾನ್ ನಾಯಕನಾಗಿ ಹೊರಹೊಮ್ಮಲು ಅನುಕೂಲವಾಗಿತ್ತು. ಅವರು ಹೇಳಿದ್ದೇ ಸತ್ಯ, ಮಾಡಿದ್ದೇ ಸರಿ ಎನ್ನುವಂತಹ ವಾತಾವರಣ ಸೃಷ್ಟಿಯಾಗಿತ್ತು. ಇಡೀ ದೇಶವೇ ಉಸಿರುಗಟ್ಟಿಸುವ ಸ್ಥಿತಿಯಲ್ಲಿತ್ತು.

ಇಂತಹ ಸಂದರ್ಭದಲ್ಲಿ, ದೇಶದ ಸರ್ವೋಚ್ಚ ನ್ಯಾಯಾಲಯ ಚುನಾವಣಾ ಬಾಂಡ್ ಬಗ್ಗೆ ಖಡಕ್ ತೀರ್ಪು ನೀಡಿತು. ಎಸ್‌ಬಿಐಗೆ ಅಂಕಿ-ಅಂಶ ನೀಡುವಂತೆ, ಅದನ್ನು ಚುನಾವಣಾ ಆಯೋಗ ಸಾರ್ವಜನಿಕವಾಗಿ ಪ್ರಕಟಿಸುವಂತೆ ತಾಕೀತು ಮಾಡಿತು. ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಯಿತು. ಬಿಜೆಪಿ ಕಟ್ಟಿದ್ದ ಸುಳ್ಳಿನ ಸೌಧ ಕುಸಿದುಬಿದ್ದಿತು. ಅಲ್ಲಿಂದ ಬೆಚ್ಚಿ ಬೀಳುವ ಸರದಿ ಬಿಜೆಪಿಯದಾಯಿತು.

ಬಿಜೆಪಿಯ ಬೆನ್ನಿಗೆ ನಿಂತು ಬೆಂಬಲಿಸಿದ್ದ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾಗಳು, ಈಗ ಬಿಜೆಪಿ ಮತ್ತು ಮೋದಿಯಿಂದ ಅಂತರ ಕಾಯ್ದುಕೊಳ್ಳತೊಡಗಿವೆ. ಸಣ್ಣಪುಟ್ಟ ಸುದ್ದಿ ಸಂಸ್ಥೆಗಳು ಕೂಡ ಪ್ರಭುತ್ವದ ವಿರುದ್ಧ ಮಾತನಾಡುತ್ತಿವೆ. ಸಿಟಿಜನ್ ಜರ್ನಲಿಸ್ಟ್‌ಗಳು ಮುನ್ನೆಲೆಗೆ ಬಂದಿದ್ದಾರೆ. ಸುಳ್ಳು ಸುದ್ದಿ ಹರಡುವ ಪತ್ರಕರ್ತರ ವಿರುದ್ಧ ದೂರು ದಾಖಲಾಗುತ್ತಿದೆ. ಸರಿ-ತಪ್ಪುಗಳ ಕುರಿತು ಮುಕ್ತ ಸಂವಾದ ಸಾಧ್ಯವಾಗುತ್ತಿದೆ. ಸಾಮಾನ್ಯರ ಸದ್ದು ಕೇಳಿಸುತ್ತಿದೆ. ಭಾರತ ಬದಲಾಗುತ್ತಿದೆ.

1977ರಲ್ಲಿ ದೇಶ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯಿಂದ ದಾಟಿ ಬಂದಂತೆ, ಮೋದಿಯ ಸರ್ವಾಧಿಕಾರಿ ಹಿಡಿತದಿಂದ ಈಗ ದೇಶ ನಿಧಾನವಾಗಿ ಕಳಚಿಕೊಳ್ಳುತ್ತ ಮತ್ತೆ ತನ್ನ ಹಳೆಯ ಲಯಕ್ಕೆ, ನಿಜವಾದ ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆ. ಇದಲ್ಲವೇ ಆಗಬೇಕಾದ್ದು?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...

ಈ ದಿನ ಸಂಪಾದಕೀಯ | ಯಾರು ದೇಶದ್ರೋಹಿಗಳು? ಮೋದಿ ಭಾರತದ ಹೊಸ ನಿರೂಪಣೆ ಅಪಾಯಕಾರಿ

ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು,...

ಈ ದಿನ ಸಂಪಾದಕೀಯ | ಖರೀದಿ ಮೇಲೆ ತೆರಿಗೆ, ಖರೀದಿ ಹಣಕ್ಕೆ ಶುಲ್ಕ… ಇದು ಮೋದಿ ಡಿಜಿಟಲ್ ದರೋಡೆ!

ನಾವು ಒಂದು ವಸ್ತುವನ್ನು ಯುಪಿಐ ಮೂಲಕ ಖರೀದಿಸಿದರೆ, ಅದಕ್ಕೆ ತೆರಿಗೆ ತೆರಬೇಕು....