ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ ಅಜ್ಜಿ ಕಥೆ!

Date:

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಅಜ್ಜಿ ಕಥೆಯನ್ನು ಹೇಳಿದ್ದಾರೆ. ಬಾಲ್ಯದಲ್ಲಿ ತಮಗಿದ್ದ ಕತ್ತಲೆಯ ಭಯವನ್ನು ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇಗೆ ಹೋಗಲಾಡಿಸಿದರು ಎಂಬುದನ್ನು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮೆಲುಕು ಹಾಕಿದ್ದಾರೆ.

- Advertisement -

ರಾಹುಲ್ ಗಾಂಧಿ ಅವರೇ ಹೇಳುವಂತೆ ಅವರಿಗೆ ಚಿಕ್ಕವರಿದ್ದಾಗ ಕತ್ತಲೆ ಎಂದರೆ ತುಂಬಾ ಭಯವಿತ್ತು. ಕತ್ತಲಲ್ಲಿ ಹೋಗುತ್ತಿರಲಿಲ್ಲ. ಆದರೆ ಈ ಭಯವನ್ನು ಹೋಗಲಾಡಿಸಲು ಅವರ ಅಜ್ಜಿ ಇಂದಿರಾ ಗಾಂಧಿಯವರು ಒಂದು ಉಪಾಯವನ್ನು ಮಾಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೈಲೊಂದು ಕ್ಯಾಮೆರಾ, ಜೀವಂತ ಬದುಕಿಗೆ ಮುಖಾಮುಖಿ

ಸಿನೆಮಾದ ಶಕ್ತಿ ಅದರ ಹಿಂದೆ ನಿಂತಿರುವ ತಂತ್ರಜ್ಞರ ಸಂಖ್ಯೆಯಲ್ಲಾಗಲಿ, ದುಬಾರಿ ಉಪಕರಣಗಳಲ್ಲಾಗಲಿ ಇಲ್ಲ. ಕನಿಷ್ಠ ಉಪಕರಣಗಳು ಮತ್ತು ಸಣ್ಣ ತಂಡದೊಂದಿಗೆ ಕೆಲಸ ಮಾಡುವುದು ಕೇವಲ ಆರ್ಥಿಕ ಅನಿವಾರ್ಯತೆಯಲ್ಲ; ಸಾಂಪ್ರದಾಯಿಕ ಸಿನೆಮಾ ವ್ಯವಸ್ಥೆಯ ಮಿತಿಗಳನ್ನು...

‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ...

ನಾಟಕಕಾರ, ಬರಹಗಾರ ಅಡ್ಡಂಡ ಕಾರ್ಯಪ್ಪ ಹಿಂದಿನಿಂದಲೂ ಒಂದಲ್ಲೊಂದು ಕಾರಣಕ್ಕೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿರುವ ಹೆಸರು. ಇತಿಹಾಸದ ನಿರೂಪಣೆ, ರಂಗಭೂಮಿಯ ಬಳಕೆ, ಧಾರ್ಮಿಕ ಮತ್ತು ರಾಜಕೀಯ ವಿಚಾರಗಳ ಅಭಿವ್ಯಕ್ತಿ ಹಾಗೂ ಕೋಮು ಸೌಹಾರ್ದದ...

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ...

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕಲೆ ಮತ್ತೊಮ್ಮೆ ಅತ್ಯಂತ ಸುಂದರವಾಗಿ ಸಾಬೀತುಪಡಿಸಿದೆ. ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು 'ಮಹಿಷಾಸುರ...

ಇದನ್ನು ಓದಿದ್ದೀರಾ? ಕೇಂದ್ರ ಸರ್ಕಾರ ಎಲ್‌ಪಿಜಿ ಬಿಕ್ಕಟ್ಟಿನ ಹೊರೆಯನ್ನು ಬಡವರ ಮೇಲೆ ಹೇರುತ್ತಿದೆ : ರಾಹುಲ್‌ ಗಾಂಧಿ ಆಕ್ರೋಶ

ಒಂದು ರಾತ್ರಿ ಇಂದಿರಾ ಗಾಂಧಿಯವರು ರಾಹುಲ್ ಅವರ ಕೈ ಹಿಡಿದು ತಮ್ಮ ನಿವಾಸದ ವಿಶಾಲವಾದ ತೋಟಕ್ಕೆ ಕರೆದೊಯ್ದಿದ್ದರು. ಆಗ ತೋಟದಲ್ಲಿ ಯಾವುದೇ ಬೆಳಕು ಇರಲಿಲ್ಲ. ಸಂಪೂರ್ಣ ಕತ್ತಲೆ ಆವರಿಸಿತ್ತು. ಭಯದಿಂದ ರಾಹುಲ್ ಅಜ್ಜಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು.

“ನಾನು ಚಿಕ್ಕ ಹುಡುಗನಾಗಿದ್ದಾಗ, ನನಗೆ ಕತ್ತಲೆಯೆಂದರೆ ಭಯವಾಗುತ್ತಿತ್ತು ಎಂಬುದು ನನಗೆ ನೆನಪಿದೆ. ನಮ್ಮಲ್ಲಿ ಒಂದು ದೊಡ್ಡ ನಾಯಿ ಇತ್ತು, ಅದು ನನ್ನ ತಂಗಿ ಮತ್ತು ನನ್ನ ಮೇಲೆ ಆಗಾಗ್ಗೆ ದಾಳಿ ಮಾಡುತ್ತಿತ್ತು. ನನ್ನ ಅಜ್ಜಿಗೆ ಇದರ ಬಗ್ಗೆ ತಿಳಿದಿತ್ತು. ಅವರು ನನ್ನನ್ನು ತೋಟಕ್ಕೆ ಕರೆದೊಯ್ದು, ಅಲ್ಲಿ ಬಿಟ್ಟು ‘ಹೆದರಬೇಡ’ ಎಂದು ಹೇಳಿದರು ನನ್ನನ್ನು ಅಲ್ಲಿ ಬಿಟ್ಟು ಹೋದರು. ನಾನು ಅವರು ಹೋಗುವುದನ್ನೇ ನೋಡುತ್ತಿದ್ದೆ. ನನಗೆ ಅಲ್ಲಿ ಒಬ್ಬನ್ನೇ ಇರಲು ಭಯವಾಗುತ್ತಿತ್ತು. ಆದರೆ ಭಯವಾಗುತ್ತದೆ ಎಂದು ಅಜ್ಜಿಯ ಬಳಿ ಹೇಳುವ ಧೈರ್ಯ ಇರಲಿಲ್ಲ” ಎಂದು ರಾಹುಲ್ ಗಾಂಧಿ ತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕಿದ್ದಾರೆ.

“ನಾನು ಅಲ್ಲಿ ಒಬ್ಬನ್ನೇ ಇದ್ದದ್ದು ಬರೀ ಎರಡು ನಿಮಿಷ. ಆದರೆ ನನಗೆ ಆ ನಿಮಿಷಗಳು ಗಂಟೆಗಳಂತೆ ಭಾಸವಾಯಿತು. ಅಲ್ಲಿ ಹಾವಿರಬಹುದು, ನಾಯಿ ಇರಬಹುದು, ಕತ್ತಲೆ ಇದೆ, ಹೀಗೆ ಎಲ್ಲವನ್ನೂ ಕಲ್ಪಿಸಿಕೊಂಡೆ”

ಇದನ್ನು ಓದಿದ್ದೀರಾ? “ಭಾರತದ ವಿದೇಶಾಂಗ ನೀತಿಯಲ್ಲ, ಇದು ಮೋದಿಯ ವೈಯಕ್ತಿಕ ವಿದೇಶಾಂಗ ನೀತಿ”-ರಾಹುಲ್‌ ಗಾಂಧಿ ವಾಗ್ದಾಳಿ

“ನನ್ನ ಅಜ್ಜಿ ಅಷ್ಟರಲ್ಲೇ ಹಿಂತಿರುಗಿ ಬಂದರು. ‘ನೀವು ಯಾವುದಕ್ಕೆ ಹೆದರುತ್ತೀದ್ದಿ’ ಎಂದು ಪ್ರಶ್ನಿಸಿದರು. ‘ನಾನು ನಾಯಿಗೆ ಹೆದರುತ್ತೇನೆ. ಕತ್ತಲೆಗೆ ಹೆದರುತ್ತೇನೆ. ನಾನು ಎಲ್ಲದಕ್ಕೂ ಹೆದರುತ್ತೇನೆ’ ಎಂದು ಹೇಳಿದೆ. ಆಗ ಅಜ್ಜಿ, ‘ನೀನು ನಾಯಿಗಳು, ಬಾವಲಿಗಳು ಅಥವಾ ಕತ್ತಲೆಗೆ ಹೆದರುತ್ತಿಲ್ಲ. ಭಯ ಇರುವುದು ನಿನ್ನ ಮನಸ್ಸಿನಲ್ಲಿ. ಇದು ನಿನ್ನ ಕಲ್ಪನೆ’ ಎಂದು ನನ್ನ ಅಜ್ಜಿ ಹೇಳಿದರು”

“ನೀನು ಕತ್ತಲೆಗೆ ಹೆದರಬಾರದು. ಯಾಕೆಂದರೆ ಸತ್ಯ ಇರುವುದೇ ಕತ್ತಲಲ್ಲಿ. ನಿಮ್ಮ ಭಯಗಳನ್ನು ಎದುರಿಸಲು ನಿಮಗೆ ಧೈರ್ಯವಿಲ್ಲದಿದ್ದರೆ, ನೀವು ಎಂದಿಗೂ ಸತ್ಯವನ್ನು ಅರ್ಥಮಾಡಿಕೊಳ್ಳಲು ಅಥವಾ ಸತ್ಯದ ಪರವಾಗಿ ಹೋರಾಡಲು ಸಾಧ್ಯವಾಗುವುದಿಲ್ಲ” ಎಂದು ತನ್ನ ಅಜ್ಜಿ ಹೇಳಿದ ಪಾಠವನ್ನು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹೇಳಿದರು.

ಇಷ್ಟಕ್ಕೆ ನಿಲ್ಲದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಂತ್ರಿಕ ಎಂದು ಕರೆದಿದ್ದಾರೆ. “ಮಾಂತ್ರಿಕನ ಮಂತ್ರಗಳು ಈಗ ಕೆಲಸ ಮಾಡುತ್ತಿಲ್ಲ, ಸತ್ಯ ಹೊರಬಂದಿದೆ” ಎಂದು ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿದರು. “ನರೇಂದ್ರ ಮೋದಿ ಅವರು ಬಾಲಾಕೋಟ್, ನೋಟು ರದ್ದತಿ ಮತ್ತು ಆಪರೇಷನ್ ಸಿಂಧೂರದ ಮಾಂತ್ರಿಕ” ಎಂದು ವ್ಯಂಗ್ಯವಾಡಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ | ಮತದಾರರ ಪಟ್ಟಿಯಲ್ಲಿ ಭಾರೀ ಅಕ್ರಮ ಆರೋಪ; 16 ಸಾವಿರಕ್ಕೂ ಹೆಚ್ಚು ಹೆಸರುಗಳ ಪರಿಶೀಲನೆಗೆ EC ಆದೇಶ

ಉತ್ತರ ಪ್ರದೇಶದ ಪಿಲಿಭಿತ್ ಸದರ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ...

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ ಮಿಂಚಿದ ಆರ್ಷಿಯಾ ಖಾನ್

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ...

ಅಭಿವೃದ್ಧಿ ಹೆಸರಲ್ಲಿ 23 ಲಕ್ಷ ಮರಗಳಿಗೆ ಕುತ್ತು; ಅರುಣಾಚಲದ ಜಲವಿದ್ಯುತ್‌ ಯೋಜನೆ ಅನುಮತಿ ಕೋರಿದ NHPC

ಅರುಣಾಚಲ ಪ್ರದೇಶದಲ್ಲಿ 1,720 ಮೆಗಾವ್ಯಾಟ್ ಸಾಮರ್ಥ್ಯದ ಕಮಲಾ ಜಲವಿದ್ಯುತ್ ಯೋಜನೆ ಅನುಷ್ಠಾನಗೊಳಿಸಲು...