ರಿಯಾಸಿ ಉಗ್ರರ ದಾಳಿಯ ವೇಳೆ ಭಯೋತ್ಪಾದಕರು ಸುಮಾರು 20 ನಿಮಿಷಗಳ ಕಾಲ ಬಸ್‌ನತ್ತ ಗುಂಡು ಹಾರಿಸಿದ್ದಾರೆ ಎಂದು ಎಂದು ಮಾಜಿ ರಿಯಾಸಿ ಸರಪಂಚ ಭೂಷಣ್ ಉಪ್ಪಲ್ ಸೋಮವಾರ ಹೇಳಿದ್ದಾರೆ. ದಾಳಿಯ ನಂತರ ಚಾಲಕನ ನಿಯಂತ್ರಣ ತಪ್ಪಿದಾಗ ವಾಹನವು ಕಂದಕಕ್ಕೆ ಬಿದ್ದ ನಂತರವೂ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು ಬಸ್ ಆಳವಾದ ಕಮರಿಗೆ ಉರುಳಿದ್ದು ಕನಿಷ್ಠ ಹತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಜಮ್ಮು-ಕಾಶ್ಮೀರ | ಉಗ್ರರ ದಾಳಿಯ ಬಳಿಕ ಕಮರಿಗೆ ಉರುಳಿದ ಬಸ್; 10 ಮಂದಿ ಮೃತ್ಯು; ಹಲವರಿಗೆ ಗಾಯ
ಈ ಘಟನೆ ಬಗ್ಗೆ ಎಎನ್‌ಐಗೆ ಮಾಹಿತಿ ನೀಡಿದ ಮಾಜಿ ರಿಯಾಸಿ ಸರಪಂಚ ಭೂಷಣ್ ಉಪ್ಪಲ್, “ಭಯೋತ್ಪಾದಕರು ವಾಹನದ ಮೇಲೆ ದಾಳಿ ಮಾಡಿದ್ದಾರೆ ಎಂದು ನಮಗೆ ತಿಳಿದ ತಕ್ಷಣ, ನಾವು ಇಲ್ಲಿಗೆ ತಲುಪಿ ಜನರನ್ನು ರಕ್ಷಿಸಿದ್ದೇವೆ. ಭಯೋತ್ಪಾದಕರಲ್ಲಿ ಒಬ್ಬರು ಚಾಲಕನ ಮೇಲೆ ದಾಳಿ ಮಾಡಿ, ಚಾಲಕನ ತಲೆಗೆ ಗುಂಡು ಹಾರಿಸಿದ್ದಾರೆ ಎಂದು ಗಾಯಾಳುಗಳು ನಮಗೆ ತಿಳಿಸಿದ್ದಾರೆ” ಎಂದು ಹೇಳಿದರು.
#WATCH | J&K: On the Reasi terror attack, former Sarpanch Bhushan Uppal claims, “As soon as we came to know that terrorists attacked the vehicle, we reached here and rescued the people…we asked the injured people, they told us that one of the terrorists attacked the driver and… pic.twitter.com/bMmIBnEgTH
— ANI (@ANI) June 10, 2024
“ಚಾಲಕನ ನಿಯಂತ್ರಣ ತಪ್ಪಿ ವಾಹನವು ಕಂದಕಕ್ಕೆ ಬಿದ್ದಿತ್ತು. ಆದರೆ ಉಗ್ರರು ಗುಂಡು ಹಾರಿಸುವುದನ್ನು ನಿಲ್ಲಿಸಿರಲಿಲ್ಲ. 15 ರಿಂದ 20 ನಿಮಿಷಗಳ ಕಾಲ ಗುಂಡು ಹಾರಿಸುತ್ತಲೇ ಇದ್ದರು. ಅದರಿಂದಾಗಿ ಕೆಲವರು ಗುಂಡು ತಗುಲಿ ಗಾಯಗೊಂಡಿದ್ದಾರೆ” ಎಂದು ತಿಳಿಸಿದರು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ಜಮ್ಮು ಕಾಶ್ಮೀರದ ರಿಯಾಸಿಯಲ್ಲಿನ ಪರಿಸ್ಥಿತಿಯನ್ನು ನಿರ್ಣಯಿಸಲು ಪೊಲೀಸರಿಗೆ ಸಹಾಯ ಮಾಡಲು ತಲುಪಿದೆ. ಎನ್‌ಐಎಯ ಫೊರೆನ್ಸಿಕ್ ತಂಡವು ನೆಲದಿಂದ ಸಾಕ್ಷ್ಯ ಸಂಗ್ರಹಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ: ಉಗ್ರರಿಂದ ದಾಳಿ ಬೆದರಿಕೆ, ನ್ಯೂಯಾರ್ಕ್‌ನಲ್ಲಿ ಭದ್ರತೆ ಹೆಚ್ಚಳ
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್ ಮೇಲೆ ದಾಳಿ ನಡೆಸಿದ ಭಯೋತ್ಪಾದಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಸೋಮವಾರ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಈ ನಡುವೆ ರಿಯಾಸಿ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನದ ಎಲ್ಇಟಿ ಇರುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಿಯಾಸಿ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತಯ್ಯಿಬಾ (ಎಲ್ಇಟಿ) ಕಾರಣವಾಗಿದೆ. ಭಾನುವಾರ ಸಂಜೆ, ಎಲ್‌ಇಟಿಯ ಟಿಆರ್‌ಎಫ್ ಭಯೋತ್ಪಾದಕ ದಾಳಿಯ ಹೊಣೆ ಹೊತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.