ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರಿಕರ ಸಾವಿನ ಸಂಖ್ಯೆಯು ಹೆಚ್ಚಳವಾಗುತ್ತಿದ್ದು, ಬುಧವಾರ ಮತ್ತೆ ಐವರು ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ, ಮೂವರು ಯಾತ್ರಾರ್ಥಿಗಳು ಕೇದಾರನಾಥದಲ್ಲಿ, ಒಬ್ಬರು ಬದರಿನಾಥದಲ್ಲಿ ಮತ್ತು ಒಬ್ಬರು ಯಾತ್ರಿಕರು ಯಮುನೋತ್ರಿಯಲ್ಲಿ ಸಾವನ್ನಪ್ಪಿದ್ದಾರೆ.
ಒಂದು ತಿಂಗಳ ಸುದೀರ್ಘ ಯಾತ್ರೆಯಲ್ಲಿ ಪ್ರಾಣ ಕಳೆದುಕೊಂಡ ಒಟ್ಟು 116 ಯಾತ್ರಾರ್ಥಿಗಳ ಪೈಕಿ ಶೇ 80ರಷ್ಟು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಒಟ್ಟಿನಲ್ಲಿ ಹಿಮಾಲಯ ಪ್ರದೇಶದಲ್ಲಿರುವ ಚಾರ್ ಧಾಮ್‌ಗೆ ಪ್ರಯಾಣಿಸುವ ಭಕ್ತರ ಸಾವಿನ ಪ್ರಮಾಣ ಅಧಿಕವಾಗುತ್ತಿರುವುದು ಸದ್ಯ ಉತ್ತರಾಖಂಡ ಸರ್ಕಾರದ ಕಳವಳ ಉಂಟು ಮಾಡಿದೆ. ಆರು ತಿಂಗಳ ಚಾರ್‌ಧಾಮ್ ಯಾತ್ರೆಯ ಮೊದ ಒಂದು ತಿಂಗಳಲ್ಲೇ 100ಕ್ಕೂ ಅಧಿಕ ಸಾವು ಸಂಭವಿಸಿರುವುದು ಸರ್ಕಾರವನ್ನು ಸಂದಿಗ್ಧ ಸ್ಥಿತಿಗೆ ತಂದಿದೆ.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ರಾಜ್ಯ ಆರೋಗ್ಯ ಕಾರ್ಯದರ್ಶಿ ಡಾ. ಆರ್. ರಾಜೇಶ್ ಕುಮಾರ್, “ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪ್ರತಿಕೂಲ ಸ್ಥಿತಿ ಇದ್ದರೂ ಕೂಡಾ ಕೆಲವು ಯಾತ್ರಿಕರು ಧಾಮಗಳಿಗೆ ಪ್ರಯಾಣವನ್ನು ಮಾಡಲು ಅವಕಾಶಕ್ಕಾಗಿ ನಮ್ಮಲ್ಲಿ ಒತ್ತಾಯಿಸುವಾಗ ನಮಗೆ ದೊಡ್ಡ ಸಂದಿಗ್ಧತೆ ಉಂಟಾಗುತ್ತದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಚಾರ್ ಧಾಮ್ ಯಾತ್ರೆ: 16 ದಿನಗಳಲ್ಲಿ 58 ಯಾತ್ರಿಕರು ಸಾವು
“ನಾವು ಯಾತ್ರಿಕರಿಗೆ ಅರ್ಥಮಾಡಿಕೊಳ್ಳಲು ಹೇಳುತ್ತೇವೆ. ಆದರೆ ನಮ್ಮ ಮಾತನ್ನು ಯಾತ್ರಿಕರು ಕೇಳಿದಿದ್ದರೆ, ಸಹಿ ಹಾಕಿ ಪ್ರಯಾಣ ಮಾಡಬೇಕಾಗುತ್ತದೆ. ನಿರ್ದಿಷ್ಟ ಸಂದರ್ಭಗಳಲ್ಲಿ, ವಯಸ್ಸಾದ ಮತ್ತು ವೈದ್ಯಕೀಯವಾಗಿ ಸಮಸ್ಯೆ ಹೊಂದಿರುವ ಯಾತ್ರಾರ್ಥಿಗಳನ್ನು ಹಿಂದಿರುಗುವಂತೆ ನಾವು ಮನವಿ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
43 ಡಿಗ್ರಿ ತಾಪಮಾನದಿಂದ ಏಕಾಏಕಿಯಾಗಿ ಒಂದು ಡಿಗ್ರಿ ತಾಪಮಾನಕ್ಕೆ ತಲುಪಿದಾಗ ಹವಾಮಾನ ಬದಲಾವಣೆಯಿಂದಾಗಿ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಈ ಹವಾಮಾನ ಬದಲಾವಣೆಯಿಂದ ಸಾವು ಸಂಭವಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಈ ಯಾತ್ರೆ ಬಗ್ಗೆ ಮಾತನಾಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, “ಚಾರ್ ಧಾಮ್ ಯಾತ್ರೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಯಾತ್ರಾರ್ಥಿಗಳು ತಮ್ಮ ಯಾತ್ರೆಯಿಂದ ಉತ್ತಮ ಅನುಭವದೊಂದಿಗೆ ಮರಳುತ್ತಿದ್ದಾರೆ. ದಮ್ತಾ ಮುಂದಿರುವ ರಸ್ತೆ ಅಗಲೀಕರಣಕ್ಕೆ ಗಡ್ಕರಿ ಅವರಿಗೆ ಮನವಿ ಮಾಡುತ್ತೇನೆ. ಗರಿಷ್ಠ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಬಂದಿದ್ದಾರೆ” ಎಂದು ಹೇಳಿದ್ದಾರೆ.
#WATCH | Dehradun | Uttarakhand CM Pushkar Singh Dhami says, “Char Dham Yatra is going on systematically. The pilgrims are returning with a good experience from their yatra. I will request Gadkari ji for the widening of the road ahead of Damta. We have received a maximum number… pic.twitter.com/gYOPilQzac
— ANI UP/Uttarakhand (@ANINewsUP) June 13, 2024
ಇದನ್ನು ಓದಿದ್ದೀರಾ? ಕೇದಾರನಾಥ | ಗಿರಗಿರನೆ ತಿರುಗಿ ತುರ್ತು ಭೂಸ್ಪರ್ಶಗೈದ ಹೆಲಿಕಾಪ್ಟರ್: ಪಾರಾದ ಯಾತ್ರಿಕರು; ವಿಡಿಯೋ ವೈರಲ್
ಪ್ರವಾಸೋದ್ಯಮ ಇಲಾಖೆಯ ಯಾತ್ರಾ ವಿಭಾಗದಿಂದ ಬಂದ ಮಾಹಿತಿಯ ಪ್ರಕಾರ, “ಚಾರ್ ಧಾಮ್ ಯಾತ್ರೆಯ ನೋಂದಣಿ ಸಂಖ್ಯೆ 36 ಲಕ್ಷಕ್ಕೆ ತಲುಪಿದೆ. ಅದರಲ್ಲಿ 2,194,349 ಭಕ್ತರು ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. ಈ ಪೈಕಿ ಅತಿ ಹೆಚ್ಚು ಯಾತ್ರಾರ್ಥಿಗಳು ಅಂದರೆ 822,019 ಜನರು ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ.
ಬದರಿನಾಥಕ್ಕೆ 542310, ಗಂಗೋತ್ರಿ ಧಾಮಕ್ಕೆ 384256 ಮತ್ತು ಯಮುನೋತ್ರಿ ಧಾಮಕ್ಕೆ 382122, ಹೇಮಕುಂಡ್ ಸಾಹಿಬ್‌ಗೆ 63,642 ಭಕ್ತರು ಯಾತ್ರೆ ಮಾಡಿದ್ದಾರೆ.