ಕೇದಾರನಾಥ | ಗಿರಗಿರನೆ ತಿರುಗಿ ತುರ್ತು ಭೂಸ್ಪರ್ಶಗೈದ ಹೆಲಿಕಾಪ್ಟರ್‌: ಪಾರಾದ ಯಾತ್ರಿಕರು; ವಿಡಿಯೋ ವೈರಲ್‌

Date:

ಕೇದಾರನಾಥ ಹೆಲಿಪ್ಯಾಡ್‌ನಿಂದ ಸುಮಾರು 100 ಮೀಟರ್ ದೂರದಲ್ಲೇ ತಾಂತ್ರಿಕ ದೋಷದಿಂದಾಗಿ 7 ಮಂದಿಯನ್ನು ಹೊತ್ತ ಹೆಲಿಕಾಪ್ಟರ್, ಗಿರಗಿರನೆ ತಿರುಗಿ ತುರ್ತು ಭೂಸ್ಪರ್ಶಗೈದ ಘಟನೆ ನಡೆದಿದೆ. ಎಲ್ಲ 6 ಪ್ರಯಾಣಿಕರು ಮತ್ತು ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ಲ್ಯಾಂಡಿಂಗ್ ಮಾಡುವ ಮೊದಲು ಹೆಲಿಕಾಪ್ಟರ್ ಗಿರಗಿರನೆ ತಿರುಗಿತು. ಈ ವೇಳೆ ಹೆಲಿಪ್ಯಾಡ್‌ನಲ್ಲಿ ನಿಂತಿದ್ದ ಸಿಬ್ಬಂದಿ ಹೆದರಿ ಹಿಂದಕ್ಕೆ ಓಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ಸಿರ್ಸಿಯ ಹೆಲಿಪ್ಯಾಡ್‌ನಿಂದ ಪೈಲಟ್‌ ಸೇರಿ 7 ಮಂದಿಯನ್ನು ಹೊತ್ತು ಕೇದಾರನಾಥ ಧಾಮಕ್ಕೆ ಬರುತ್ತಿದ್ದ ಕೆಸ್ಟ್ರೆಲ್‌ ಏವಿಯೇಷನ್‌ ಕಂಪನಿಯ ಹೆಲಿಕಾಪ್ಟರ್‌ ತಾಂತ್ರಿಕ ಸಮಸ್ಯೆಯಿಂದಾಗಿ ಬೆಳಗ್ಗೆ 7:05ರ ಸುಮಾರಿಗೆ ತುರ್ತು ಭೂಸ್ಪರ್ಶ ಮಾಡಿತು. ಘಟನೆಯ ದೃಶ್ಯವು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

 

“ಕೇದಾರನಾಥ ಬೇಸ್‌ಕ್ಯಾಂಪ್‌ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ದೃಶ್ಯ ಸೆರೆಯಾಗಿದೆ. ಕಾಪ್ಟರ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪೈಲಟ್ ತಾಳ್ಮೆ ಕಳೆದುಕೊಳ್ಳಲಿಲ್ಲ ಮತ್ತು ಬುದ್ಧಿವಂತಿಕೆಯನ್ನು ತೋರಿಸಿದರು ಮತ್ತು ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಿದರು” ಎಂದು ರುದ್ರಪ್ರಯಾಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಸೌರಭ್ ಗಹರ್ವಾರ್ ಹೇಳಿದರು.

ಹೆಲಿಕಾಪ್ಟರ್‌ನಲ್ಲಿ ಕಂಡುಬಂದಿರುವ ತಾಂತ್ರಿಕ ದೋಷದ ಕಾರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕೇದಾರನಾಥದಲ್ಲಿ 2022ರ ಅಕ್ಟೋಬರ್‌ನಲ್ಲಿ, ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಆರು ಭಕ್ತರು ಮತ್ತು ಪೈಲಟ್ ಸಾವನ್ನಪ್ಪಿದ್ದರು. ಅಪಘಾತದ ನಂತರ, ಈ ಪ್ರದೇಶದಲ್ಲಿ ಹೆಲಿ ಸೇವೆಗಳ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಕೇದಾರನಾಥದಲ್ಲಿ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಸ್ಥಾಪಿಸುವಂತೆ ಯುಸಿಎಡಿಎ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಪತ್ರ ಬರೆದಿತ್ತು. ಕೇದಾರನಾಥದಲ್ಲಿ, ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ, ಹೆಲಿಕಾಪ್ಟರ್‌ಗಳು ಪ್ರತಿದಿನ ಸರಾಸರಿ 400 ಬಾರಿ ಪ್ರಯಾಣಿಸುತ್ತವೆ.

ಚಾರ್ ಧಾಮ್ ಯಾತ್ರೆಯು ಮೇ 10 ರಂದು ಆರಂಭವಾಗಿದ್ದು, ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥ ಸೇರಿದಂತೆ ಮೂರ್ನಾಲ್ಕು ದೇವಾಲಯಗಳನ್ನು ತೆರೆಯಲಾಗಿದೆ. ಮೇ 12 ರಂದು ಬದರಿನಾಥದ ಬಾಗಿಲು ತೆರೆಯಲಾಗಿದೆ. ಚಾರ್ ಧಾಮ್ ಯಾತ್ರೆಯು ಸಾಮಾನ್ಯವಾಗಿ ಏಪ್ರಿಲ್-ಮೇ ನಿಂದ ಅಕ್ಟೋಬರ್-ನವೆಂಬರ್ ವರೆಗೆ ನಡೆಯುತ್ತದೆ.

ಯಾತ್ರಿಕರ ನೂಕುನುಗ್ಗಲು ಕಾರಣ, ಉತ್ತರಾಖಂಡ ಸರ್ಕಾರವು ಚಾರ್‌ ಧಾಮ್‌ ಯಾತ್ರೆಗೆ ಬರುವ ಎಲ್ಲಾ ಯಾತ್ರಾರ್ಥಿಗಳಿಗೆ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ಹರಿದ್ವಾರ ಮತ್ತು ಋಷಿಕೇಶದಲ್ಲಿ ಆಫ್‌ಲೈನ್ ನೋಂದಣಿಯನ್ನು ನಿಲ್ಲಿಸಲಾಗಿದ್ದು, ಭಕ್ತರು ಆನ್‌ಲೈನ್ ನೋಂದಣಿ ನಂತರವೇ ಚಾರ್‌ ಧಾಮ್‌ ಯಾತ್ರೆಗೆ ಬರಬೇಕು ಎಂದು ಆದೇಶ ಹೊರಡಿಸಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರ | ಉದ್ಘಾಟನೆಗೂ ಮುನ್ನ ನದಿಯಲ್ಲಿ ಕೊಚ್ಚಿ ಹೋದ 12 ಕೋಟಿ ರೂ. ವೆಚ್ಚದ ಸೇತುವೆ

ಬಿಹಾರ ದ ಅರಾರಿಯಾ ಜಿಲ್ಲೆಯಲ್ಲಿ ಬಾಕ್ರಾ ನದಿಗೆ ಅಡ್ಡಲಾಗಿ 12 ಕೋಟಿ...

ವಿನೀತ ಮೋದಿಗೆ ಜಾಗತಿಕ ಒತ್ತಡ; ದುರ್ಬಲಗೊಳ್ಳುತ್ತಿದೆ ವಿದೇಶಾಂಗ ಸಂಬಂಧ

ಭಾರತದಲ್ಲಿ ದುರ್ಬಲರಾಗಿ, ವಿನೀತರಾಗಬೇಕಾದ ಒತ್ತಡ ಹೊಂದಿರುವ ಮೋದಿ, ತಮ್ಮ ಮೂರನೇ ಅವಧಿಯಲ್ಲಿ...

ಷೇರು ಮಾರುಕಟ್ಟೆಯ ಅಕ್ರಮದ ತನಿಖೆಗಾಗಿ ಟಿಎಂಸಿ ನಿಯೋಗದಿಂದ ಸೆಬಿ ಅಧಿಕಾರಿಗಳ ಭೇಟಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರ ನಿಯೋಗ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ(ಸೆಬಿ)...