ಸ್ಪೇನ್ ಪ್ರವಾಸಿ ಮಹಿಳೆ ಮೇಲೆ ಗ್ಯಾಂಗ್ ರೇಪ್; 10 ಲಕ್ಷ ರೂ. ಪರಿಹಾರ

Date:

ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಸ್ಪ್ಯಾನಿಷ್ ಪ್ರವಾಸಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆದ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಪತಿಗೆ ಜಾರ್ಖಂಡ್‌ ಪೊಲೀಸರು ಸೋಮವಾರ ಹತ್ತು ಲಕ್ಷ ರೂಪಾಯಿ ಚೆಕ್ ಅನ್ನು ಪರಿಹಾರವಾಗಿ ನೀಡಿದ್ದಾರೆ.

ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ಸುಮಾರು 300 ಕಿಮೀ ದೂರದಲ್ಲಿರುವ ಹನ್ಸ್‌ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್‌ನಲ್ಲಿ ಶುಕ್ರವಾರ ಸ್ಪೇನ್‌ನ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಈ ಹಿಂದೆ ಪೊಲೀಸರು ತಿಳಿಸಿದ್ದಾರೆ.

“ನಾವು ಶೀಘ್ರವಾಗಿ ತನಿಖೆಯನ್ನು ಮಾಡಿದ್ದೇವೆ. ಸಂತ್ರಸ್ತೆ ಮತ್ತು ಆಕೆಯ ಪತಿಗೆ ನಮ್ಮ ಜಿಲ್ಲಾ ಆಡಳಿತದಿಂದ ಎಲ್ಲಾ ಅಗತ್ಯ ಸಹಾಯವನ್ನು ಮಾಡಿದ್ದೇವೆ. ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಧನ ಯೋಜನೆಯಡಿಯಲ್ಲಿ ನಾವು ಸಂತ್ರಸ್ತರಿಗೆ ಹತ್ತು ಲಕ್ಷ ರೂಪಾಯಿ ನೀಡಿದ್ದೇವೆ. ನಾವು ಶೀಘ್ರವೇ ವಿಚಾರಣೆಯನ್ನು ಪೂರ್ಣಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷೆ ದೊರೆಯುವಂತೆ ಮಾಡುತ್ತೇವೆ,” ಎಂದು ಜಿಲ್ಲಾಧಿಕಾರಿ ಆಂಜನೇಯುಲು ದೊಡ್ಡೆ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸುಮಾರು 28 ವರ್ಷದ ಮಹಿಳೆ ಮತ್ತು ಆಕೆಯ 64 ವರ್ಷದ ಪತಿ ಎರಡು ಬೈಕ್‌ನಲ್ಲಿ ಬಾಂಗ್ಲಾದೇಶದಿಂದ ದುಮ್ಕಾ ತಲುಪಿ ಬಿಹಾರ ಮೂಲಕ ನೇಪಾಳಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯದಲ್ಲಿ ಟೆಂಟ್‌ನಲ್ಲಿ ನೆಲೆಸಿದ್ದು, ಈ ವೇಳೆ ಸಾಮೂಹಿಕ ಅತ್ಯಾಚಾರ ನಡೆದಿದೆ.

ಅತೀ ಶೀಘ್ರವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರಿಗೆ ಅತ್ಯಾಚಾರ ಸಂತ್ರಸ್ತೆಯ ಪತಿ ಧನ್ಯವಾದ ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಈ ಪ್ರಕರಣದಲ್ಲಿ ಒಟ್ಟು ಏಳು ಮಂದಿ ಭಾಗಿಯಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಇನ್ನು ಪೊಲೀಸರು ನವದೆಹಲಿಯಲ್ಲಿರುವ ಸ್ಪೇನ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು ಎಲ್ಲ ಬೆಳವಣಿಗೆಯ ಮಾಹಿತಿಯನ್ನು ರಾಯಭಾರ ಕಚೇರಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಈ ದಂಪತಿಯನ್ನು ಸ್ಪೇನ್‌ಗೆ ಯಾವಾಗ ಕಳುಹಿಸಲಾಗುವುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸರು ಪ್ರಸ್ತುತ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

“ಶುಕ್ರವಾರ ರಾತ್ರಿ ಸುಮಾರು 11 ಗಂಟೆಗೆ ಹಂಸಡೀಹಾ ಠಾಣೆಯ ಪೊಲೀಸ್ ಗಸ್ತು ತಂಡವು ರಸ್ತೆ ಬದಿಯಲ್ಲಿದ್ದ ಈ ಸ್ಪೇನ್ ದಂಪತಿಯನ್ನು ನೋಡಿದ್ದಾರೆ. ಈ ದಂಪತಿ ಸ್ಪ್ಯಾನಿಷ್ ಭಾಷೆ ಮಾತ್ರ ಮಾತನಾಡುತ್ತಿದ್ದು, ಆರಂಭದಲ್ಲಿ ಇವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ. ಪೊಲೀಸರು ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅತ್ಯಾಚಾರ ನಡೆದಿರುವುದನ್ನು ದಂಪತಿಯು ವೈದ್ಯರಿಗೆ ತಿಳಿಸಿದ್ದಾರೆ,” ಎಂದು ಎಸ್‌ಪಿ ಪೀತಾಂಬರ ಸಿಂಗ್ ಮಾಹಿತಿ ನೀಡಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭೆ ಚುನಾವಣೆ | ಇನ್ನುಳಿದ ಹಂತಗಳಲ್ಲಿ ಬಿಜೆಪಿ ಸ್ಥಿತಿ ಮತ್ತಷ್ಟು ಹದಗೆಡಲಿದೆ: ಅಖಿಲೇಶ್ ಯಾದವ್

ಲೋಕಸಭೆ ಚುನಾವಣೆಯ ಉಳಿದ ಹಂತಗಳಲ್ಲಿ ಬಿಜೆಪಿಯ ಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು...

‘ತಾರಕ್ ಮೆಹ್ತಾ’ ನಟ ಗುರುಚರಣ್ ಸಿಂಗ್ ನಾಪತ್ತೆ; ಅಪಹರಣ ಪ್ರಕರಣ ದಾಖಲು

ಅತ್ಯಂತ ಜನಪ್ರಿಯ ಭಾರತೀಯ ಟಿವಿ ಶೋ ಆದ 'ತಾರಕ್ ಮೆಹ್ತಾ ಕಾ...

2ನೇ ಹಂತದ ಚುನಾವಣೆ | ಮತಗಟ್ಟೆಗೆ ಬಾರದ ಹೆಚ್ಚಿನ ಮತದಾರರು; ಬಿಜೆಪಿ ವಿರೋಧಿ ಅಲೆಯ ಸೂಚನೆಯೇ?

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ಮುಗಿದಿದೆ. 13 ರಾಜ್ಯಗಳ...