ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರದ ರಜೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಪ್ರಮುಖ ಆಡಳಿತಾತ್ಮಕ ಬದಲಾವಣೆಯಲ್ಲಿ, ಕಾನೂನು ಮತ್ತು ನ್ಯಾಯ ಸಚಿವಾಲಯವು ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು, 2025 ಪ್ರಕಾರ 2ನೇ ಮತ್ತು 4ನೇ ಶನಿವಾರ ಸುಪ್ರೀಂ ಕೋರ್ಟ್‌ನ ನೋಂದಾವಣೆ ಮತ್ತು ಕಚೇರಿಗಳ ಕೆಲಸದ ದಿನಗಳ ಪಟ್ಟಿಗೆ ಮರಳಿ ಸೇರಿಸಿದೆ.
ಗೆಜೆಟ್‌ನಲ್ಲಿ ಪ್ರಕಟವಾದ ಅಧಿಸೂಚನೆಯ ಪ್ರಕಾರ, ಜುಲೈ 14 ರಿಂದ ಸುಪ್ರೀಂ ಕೋರ್ಟ್‌ನ ನೋಂದಾವಣೆ ಮತ್ತು ಕಚೇರಿ ಸಿಬಂದಿಗಳಿಗೆ ಈ ತಿದ್ದುಪಡಿ ಅನ್ವಯಿಸಲಿದೆ.
ಈ ಬದಲಾವಣೆ ಸುಪ್ರೀಂ ಕೋರ್ಟ್ ನಿಯಮಗಳ ಆದೇಶ ॥, ನಿಯಮಗಳು 1 ರಿಂದ 3 ರ ಅಡಿಯಲ್ಲಿದ್ದು, ಕೆಲಸದ ದಿನಗಳು ಮತ್ತು ಕಚೇರಿ ಸಮಯಗಳಿಗೆ ಪರಿಷ್ಕೃತ ಚೌಕಟ್ಟನ್ನು ಪರಿಚಯಿಸಿವೆ.
ಹೊಸ ಅಧಿಸೂಚನೆಯ ಪ್ರಕಾರ, ಸುಪ್ರೀಂ ಕೋರ್ಟ್‌ನ ಕಚೇರಿಗಳು ಈಗ ಎಲ್ಲ ಕೆಲಸದ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲಿವೆ.
